ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲೊಂದು ಗುಡ್‌ನ್ಯೂಸ್ ಇದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್), ತನ್ನಲ್ಲಿ ಖಾಲಿ ಇರುವ 27 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅಭ್ಯರ್ಥಿಗಳಿಂದ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ, ವೇತನ, ಅರ್ಹತೆ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿಯಬಹುದು.
ಹುದ್ದೆಯ ವಿವರಗಳು – KMF SHIMUL ನೇಮಕಾತಿ 2025
ಸಂಸ್ಥೆ ಹೆಸರು: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (KMF SHIMUL)
ಹುದ್ದೆಗಳ ಸಂಖ್ಯೆ: 27
ಹುದ್ದೆ ಹೆಸರು: ಸಹಾಯಕ ವ್ಯವಸ್ಥಾಪಕ
ವೇತನ: ರೂ. 34,100 – ರೂ. 99,400 ಪ್ರತಿಮಾಸ
ಅರ್ಹತಾ ವಿವರಗಳು
ಶಿಕ್ಷಣ ಅರ್ಹತೆ: ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿ ಹೊಂದಿರಬೇಕು.
ವಯಸ್ಸಿನ ಮಿತಿ:
ಕನಿಷ್ಠ: 18 ವರ್ಷ
ಗರಿಷ್ಠ: 40 ವರ್ಷ
ಮೀಸಲಾತಿ/ವರ್ಗ ವಿಶೇಷ: 2A, 2B, 3A, 3B ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ; SC/ST ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ.
ಅರ್ಜಿ ಶುಲ್ಕ:
2A, 2B, 3A, 3B ವರ್ಗ: ರೂ. 500
ಇತರ ಅಭ್ಯರ್ಥಿಗಳು: ರೂ. 1,000
ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) ವೆಬ್‌ಸೈಟ್ ವಿಳಾಸ: www.shimul.coop
ಅರ್ಜಿ ಸಲ್ಲಿಸುವ ವಿಧಾನ
ಮೊದಲು ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
ನಿಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದಲ್ಲಿ ಮಾತ್ರ).
ನಮೂದಿಸಿದ ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ಸಂಪೂರ್ಣವಾಗಿ ಭರ್ತಿ ಮಾಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ.
ಕೊನೆಯ ದಿನಾಂಕಕ್ಕೆ ಮೊದಲು ಅಗತ್ಯ ದಾಖಲೆಗಳನ್ನು ಜೋಡಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ.