ರಾಜ್ಯದಲ್ಲಿ ನಂದಿನಿ ಹಾಲು ದರ ಏರಿಕೆ ಮಾಡಲು ಮುಂದಾಗಿರುವ ಕೆಎಂಎಫ್ ಜತೆಯಲ್ಲೇ ಪ್ಯಾಕೆಟ್ ನಲ್ಲಿ ಹಾಲಿನ ಪ್ರಮಾಣ ಕೂಡ ಕಡಿತ ಮಾಡಲಿದೆ. ಈ ಹಿಂದೆ ಅರ್ಧ ಹಾಗೂ 1 ಲೀಟರ್ ಹಾಲಿಗೆ 50 ಎಂಎಲ್ ಮತ್ತು 100 ಎಂಎಲ್ ಹಾಲು ಹೆಚ್ಚಳ ಮಾಡಿದ್ದ ಕೆಎಂಎಫ್ 2 ರೂ. ದರ ಏರಿಕೆ ಮಾಡಿತ್ತು. ಇದೀಗ 5ರೂ ದರ ಏರಿಕೆ ಜೊತೆ ಹಾಲುಪ್ರಮಾಣ ಕಡಿತಗೊಳಿಸಲು ಚಿಂತನೆ ನಡೆಸಿದೆ.
ಬೇಸಿಗೆ ಕಾರಣ ಹಾಲು ಉತ್ಪಾದನೆ ಪ್ರಮಾಣ ಇಳಿಕೆಯಾಗಲಿದ್ದು, ಸುಮಾರು 10 ರಿಂದ 15%ನಷ್ಟು ಹಾಲಿನ ಉತ್ಪಾದನೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚುವರಿಯಾಗಿ ನೀಡುತ್ತಿದ್ದ ಹಾಲು ಕಡಿತಗೊಳಿಸಲು ಕೆಎಂಎಫ್ ಚಿಂತನೆ ನಡೆಸಿದೆ.
ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ಬಜೆಟ್ ಮಂಡನೆ ಬಳಿಕ ಈಗ ಹಾಲಿನ ದರ ಏರಿಕೆ ಜೊತೆ ಪ್ರಮಾಣ ಕಡಿತದ ಬರೆ ಎಳೆಯಲಾಗುತ್ತಿದೆ.