ಚಿನ್ನ ದರೋಡೆ ಪ್ರಕರಣದಲ್ಲಿ ಕೆಜಿಎಫ್ ನಗರಸಭೆ ಸದಸ್ಯ, ಕೆಜಿಎಫ್ ಕಾಂಗ್ರೆಸ್ ಮುಖಂಡ ಜಯಪಾಲ್ ಎಂಬವರನ್ನು ಆಂಧ್ರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಚೆನ್ನೈನಿಂದ ಕೆಜಿಎಫ್ಗೆ ಬರುತ್ತಿದ್ದ ಚಿನ್ನದ ವ್ಯಾಪಾರಿ ಚೇತನ್ ಜೈನ್ ಎಂಬವರ ಕಾರು ಅಡ್ಡಗಟ್ಟಿ 3.5 ಕೆಜಿ ಚಿನ್ನವನ್ನು ತಂಡವೊಂದು ಏಪ್ರಿಲ್ 2 ರಂದು ರಾತ್ರಿ ದೋಚಿತ್ತು.
ವಿಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕೆಜಿಎಫ್ನ ಜಯಪಾಲ್, ಜಯಪಾಲ್ ಕಾರು ಚಾಲಕ ಮುಕ್ರಂ ಪಾಷಾ ಹಾಗೂ ತಮಿಳುನಾಡಿನ ಇಬ್ಬರು ಸೇರಿ ಆಂಧ್ರ ಹಾಗೂ ತಮಿಳುನಾಡು ಗಡಿ ನಾಯಕನೇರಿ ಘಾಟ್ ಬಳಿ ದರೋಡೆ ಮಾಡಿದ್ದರು. ದರೋಡೆ ಮಾಡಿದ್ದ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಿಕೋಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.