ಧರ್ಮಸ್ಥಳದಲ್ಲಿ ಹೂತು ಹಾಕಿರುವ ನೂರಾರು ಶವಗಳ ಶೋಧದ ವೇಳೆ 7ನೇ ಪಾಯಿಂಟ್ ನಲ್ಲಿ ಕರ್ಚೀಫ್ ಪತ್ತೆಯಾಗಿದೆ.
ಧರ್ಮಸ್ಥಳದಲ್ಲಿ ಅಕ್ರಮವಾಗಿ ನೂರಾರು ಶವಗಳನ್ನೂ 12 ವರ್ಷಗಳ ಅವಧಿಯಲ್ಲಿ ಹೂತು ಹಾಕಿರುವುದಾಗಿ ನ್ಯಾಯಾಲಯಕ್ಕೆ ತಪ್ಪಪಪ್ಪಿಗೆ ನೀಡಿರುವ ವ್ಯಕ್ತಿಯ ಮಾಹಿತಿ ಆಧರಿಸಿ ಎಸ್ ಐಟಿ ಅಧಿಕಾರಿಗಳು ಶುಕ್ರವಾರ ಸ್ಥಳದ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 11.30ಕ್ಕೆ 7ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ಮುಂದುವರಿಸಿದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಿತು. ಈ ವೇಳೆ ಕರ್ಚೀಫ್ ದೊರೆತಿದ್ದು, ಉಳಿದ ಯಾವುದೇ ಆವಶೇಷ ಪತ್ತೆಯಾಗಿಲ್ಲ. ಆದರೆ ಈ ಕರ್ಚೀಫ್ ಮಹಿಳೆಯರು ಬಳಸುವಂತದ್ದೇ ಅಥವಾ ಪುರುಷರದ್ದೇ ಎಂಬುದು ಪರೀಕ್ಷೆ ವೇಳೆ ದೃಢಪಡಬೇಕಾಗಿದೆ.
7ನೇ ಪಾಯಿಂಟ್ ಶೋಧ ಕಾರ್ಯ ಮುಗಿಸಿದ ನಂತರ 300 ಮೀಟರ್ ದೂರದಲ್ಲಿರುವ 8ನೇ ಪಾಯಿಂಟ್ ನಲ್ಲಿ ಶೋಧ ಕಾರ್ಯ ಆರಂಭಿಸಿದ್ದು, ಸಂಜೆ ವೇಳೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
ಇದೇ ವೇಳೆ ಗುರುವಾರ 6ನೇ ಪಾಯಿಂಟ್ ನಲ್ಲಿ ದೊರೆತ ತಲೆಬುರುಡೆ, ಕೈ ಕಾಲು ಮೂಳೆಗಳನ್ನು ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರ ಸುಪರ್ದಿಗೆ ನೀಡಲಾಗಿದ್ದು, ಎಫ್ ಎಸ್ ಎಲ್ ಪರೀಕ್ಷೆ ಆರಂಭಿಸಿದ್ದಾರೆ.