ಭಾರತದ ಡೇಟಾ ಸೆಂಟರ್ ವಿಸ್ತರಣೆಯಲ್ಲಿ ಆರ್ಥಿಕತೆಗೆ ಬಲ ನೀಡುವಲ್ಲಿ ಕರಾವಳಿ ಕೇಂದ್ರವಾಗಿ ಹೊರಹೊಮ್ಮಲು ಮಂಗಳೂರು ತನ್ನದೇ ಸಾಮರ್ಥ್ಯ ಹೊಂದಿದೆ.
ಬೆಂಗಳೂರು: ಕರ್ನಾಟಕದ ಡಿಜಿಟಲ್ ಕ್ಷೇತ್ರದ ಕಾರ್ಯತಂತ್ರವನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ( ಕೆಡಿಇಎಂ), ಸಿಲಿಕಾನ್ ಬೀಚ್ ಕಾರ್ಯಕ್ರಮ ( ಎಸ್ ಬಿ ಪಿ) ಮತ್ತು ಡೆಲಾಯ್ಟ್ ಜಂಟಿಯಾಗಿ, ‘ಇಂದು ಮಂಗಳೂರು: ಭಾರತದ ಮುಂದಿನ ಸಂಭಾವ್ಯ ಡೇಟಾ ಸೆಂಟರ್ ಹಬ್ ಒಂದು ಕಾರ್ಯಸಾಧ್ಯತಾ ಅಧ್ಯಯನ’ ಎಂಬ ಶೀರ್ಷಿಕೆಯಲ್ಲಿ ಕಾರ್ಯಸಾಧ್ಯತಾ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದೆ.
ಬೆಂಗಳೂರು ಟೆಕ್ ಶೃಂಗಸಭೆ 2025 ರಲ್ಲಿ ನಡೆದ ಡೇಟಾ ಸೆಂಟರ್ ದುಂಡು ಮೇಜಿನ ಸಭೆಯಲ್ಲಿ ಈ ವರದಿಯನ್ನು ಔಪಚಾರಿಕವಾಗಿ ಐಟಿ/ಬಿಟಿ ಮತ್ತು ಆರ್ಡಿಪಿಆರ್ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಐಎಎಸ್ ಅವರಿಗೆ ಔಪಚಾರಿಕವಾಗಿ ಮಂಡಿಸಲಾಯಿತು.
ಈ ಸಮಗ್ರ ಅಧ್ಯಯನವು ಭಾರತದ ಮುಂದಿನ ಪ್ರಮುಖ ಡೇಟಾ ಸೆಂಟರ್ ತಾಣವಾಗಿ ಮತ್ತು ಕರ್ನಾಟಕದ ಬೆಂಗಳೂರು ಮೀರಿದ ಕಾರ್ಯಾಚರಣೆಯಲ್ಲಿ ಪ್ರಮುಖ ಆಧಾರಸ್ತಂಭವಾಗಿ ಮಂಗಳೂರು ಹೊರಹೊಮ್ಮಲು ಸಿದ್ಧತೆಗಳ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ಕರಾವಳಿ ಅನುಕೂಲಗಳು, ಸ್ಪರ್ಧಾತ್ಮಕ ಭೂಮಿ ಮತ್ತು ಇಂಧನ ಆರ್ಥಿಕತೆ, ವಿಸ್ತರಿಸುತ್ತಿರುವ ಜಿಸಿಸಿ ಚಟುವಟಿಕೆ ಮತ್ತು ಬೆಳೆಯುತ್ತಿರುವ ಎಐ ಅಳವಡಿಕೆ, ಸಂಭಾವ್ಯ ಜಲಾಂತರ್ಗಾಮಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಮತ್ತು ಹಸಿರು ಇಂಧನ ಬೆನ್ನೆಲುಬಿನಿಂದ ಬೆಂಬಲಿತವಾದ ಭವಿಷ್ಯಕ್ಕೆ ಸಿದ್ಧವಾಗಿರುವ 1 ಜಿಡಬ್ಲ್ಯೂ+ ಡೇಟಾ ಸೆಂಟರ್ ಕ್ಲಸ್ಟರ್ ಅಭಿವೃದ್ಧಿ ಸೇರಿ ವಿವಿಧ ಅಂಶಗಳು ಸೇರಿದೆ.
ಮುಂದಿನ ಡೇಟಾ ಸೆಂಟರ್ ಕಾರ್ಯತಂತ್ರದ ಮಾರ್ಗಸೂಚಿ
2030 ರ ವೇಳೆಗೆ ರಾಷ್ಟ್ರೀಯ ಮಾರುಕಟ್ಟೆಯು 21.8 ಶತಕೋಟಿ ಅಮೆರಿಕನ್ ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆ. ಹೀಗಿರುವಾಗ ಕರ್ನಾಟಕವು ಭಾರತದ ಮುಂದಿನ ಹಂತದ ಡೇಟಾ ಕೇಂದ್ರ ವಿಸ್ತರಣೆಯನ್ನು ಹೇಗೆ ಮುನ್ನಡೆಸಬಹುದು ಎಂಬುದರ ಕುರಿತು ಕಾರ್ಯಸಾಧ್ಯತಾ ಅಧ್ಯಯನವು ಭವಿಷ್ಯದ ನೀಲನಕ್ಷೆಯನ್ನು ನೀಡುತ್ತದೆ. ಕೆಲಸದ ಹೊರೆಗಳು, ಕ್ಲೌಡ್ ಪ್ರಸರಣ, ಡೇಟಾ ಸ್ಥಳೀಕರಣ ಆದೇಶಗಳು ಮತ್ತು ಓಟಿಟಿ ಮತ್ತು ಗೇಮಿಂಗ್ ಬಳಕೆಯಿಂದ ಡಿಜಿಟಲ್ ರೂಪಾಂತರಕ್ಕೆ ಭಾರತ ಒಳಗಾಗುತ್ತಿರುವ ಹೊತ್ತಿನಲ್ಲಿ ಸಾಂಪ್ರದಾಯಿಕ ಕೇಂದ್ರಗಳನ್ನು ಮೀರಿ ಬದಲಾಗುತ್ತಿದೆ. ಹಾಗಾಗಿ ಬದಲಾವಣೆ ಅವಶ್ಯಕ.
ಪ್ರಮುಖ ನಗರಗಳಾದ ಮುಂಬೈ ಮತ್ತು ಚೆನ್ನೈ ಪ್ರಸ್ತುತ ಭಾರತದ ಡೇಟಾ ಕೇಂದ್ರ ಸಾಮರ್ಥ್ಯದ ಶೇ. 70 ರಷ್ಟು ಹೊಂದಿದೆ. ಹೀಗಾಗಿ ವರದಿಯು ವೆಚ್ಚ, ಸಮರ್ಥ ಡೇಟಾ ಮೂಲಸೌಕರ್ಯಗಳಲ್ಲಿ ರಚನಾತ್ಮಕ ಬದಲಾವಣೆ ತರುವುದನ್ನು ಬಿಂಬಿಸುತ್ತದೆ.


