Menu

ಕೆಎಎಸ್ ಮುಖ್ಯ ಪರೀಕ್ಷೆ ಮೇ ತಿಂಗಳ ಮೊದಲ ವಾರ

ಕರ್ನಾಟಕ ಲೋಕಸೇವಾ ಆಯೋಗವು ಕಾರಣಾಂತರಗಳಿಂದ ಮುಂದೂಡಿದ್ದ ಕೆಎಎಸ್ ಮುಖ್ಯ ಪರೀಕ್ಷೆಯನ್ನು ಮೇ ತಿಂಗಳ ಮೊದಲ ವಾರದಲ್ಲಿ ನಡೆಸಲಿದೆ.

ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಒಟ್ಟು 384 ಹುದ್ದೆಗಳ ಮುಖ್ಯ ಪರೀಕ್ಷೆ ಇದಾಗಿದೆ. 2023-24ನೇ ಸಾಲಿನ ಈ ಹುದ್ದೆಗಳ ನೇಮಕಕ್ಕಾಗಿ ಕೆಪಿಎಸ್​​ಸಿ ಅರ್ಜಿಗಳನ್ನು ಆಹ್ವಾನಿಸಿತ್ತು.

ಕಳೆದ ಫೆಬ್ರವರಿ 13ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಲೋಕಸೇವಾ ಆಯೋಗವು ಕೆಎಎಸ್ ಮುಖ್ಯ ಪರೀಕ್ಷೆ ಯನ್ನು ಮಾರ್ಚ್ 28, 29 ಹಾಗೂ ಏಪ್ರಿಲ್ 1 ಮತ್ತು 2ರಂದು ನಡೆಸಲು ನಿಗದಿಪಡಿಸಿತ್ತು.

ಆದರೆ, ಬಳಿಕ ಕಾರಣಾಂತರಗಳಿಂದ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆಯುವ ಮುಖ್ಯ ಪರೀಕ್ಷೆಯನ್ನು ಮುಂದೂಡಲಾ ಗಿತ್ತು. ಇದೀಗ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ಮುಖ್ಯ ಪರೀಕ್ಷೆಯನ್ನು ಮೇ ತಿಂಗಳ 3, 5, 7 ಮತ್ತು 9ರಂದು ನಡೆಸಲಾಗುತ್ತದೆ ಎಂದು ಕೆಪಿಎಸ್​​ಸಿ ಕಾರ್ಯದರ್ಶಿ ಗುರುವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *