Menu

ತಲಾ ಆದಾಯದಲ್ಲಿ ದೇಶಕ್ಕೆ ಫಸ್ಟ್‌ ಕರ್ನಾಟಕ

ಕೇಂದ್ರ ಹಣಕಾಸು ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, ತಲಾ ಆದಾಯದಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನ ಪಡೆದಿದೆ. 2024-25ನೇ ಹಣಕಾಸು ವರ್ಷದಲ್ಲಿ ಕರ್ನಾಟಕದ ತಲಾ ಆದಾಯವು 2,04,605 ರೂಪಾಯಿಗೆ ತಲುಪಿದ್ದು, ಇದು ದೇಶದಲ್ಲೇ ಅತಿ ಹೆಚ್ಚು. ಈ ಸಾಧನೆಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಆರ್ಥಿಕ ನೀತಿಗಳು ಮತ್ತು ಗ್ಯಾರಂಟಿ ಯೋಜನೆಗಳು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.

ರಾಜ್ಯದಲ್ಲಿ ತಲಾದಾಯ ಪ್ರಮಾಣ 2 ಲಕ್ಷ ರೂ.ದಾಟಿದೆ. ಸ್ಥಿರ ಬೆಲೆಯಲ್ಲಿ ರಾಜ್ಯದ ತಲಾ ನಿವ್ವಳ ರಾಜ್ಯ ದೇಶೀಯ ಉತ್ಪನ್ನ (ಎನ್‌ಎಸ್‌ಡಿಪಿ) ರೂ. 2,04,605 ತಲುಪಿದ್ದು, 2014–15ರ ಲ್ಲಿದ್ದ ರೂ. 1,05,697 ರಿಂದ ಶೇ. 93.6 ರಷ್ಟು ಬೆಳವಣಿಗೆ ದಾಖಲಿಸಿದೆ.

2024–25ರ ಅವಧಿಯಲ್ಲಿ ಕರ್ನಾಟಕದ ತಲಾ ಆದಾಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅತ್ಯಧಿಕವಾಗಿದೆ, 1,96,309 ರೂಪಾಯಿಗಳೊಂದಿಗೆ ತಮಿಳುನಾಡು ನಂತರದ ಸ್ಥಾನದಲ್ಲಿದೆ.ಕಳೆದ ದಶಕದಲ್ಲಿ ಕರ್ನಾಟಕದ ಆದಾಯ ಬಹುತೇಕ ದ್ವಿಗುಣಗೊಂಡಿದೆಭಾರತದ ತಲಾ ನಿವ್ವಳ ರಾಷ್ಟ್ರೀಯ ಆದಾಯ (ಎನ್‌ಎನ್‌ಐ) ರೂ. 1,14,710 ರಷ್ಟಿದ್ದು, ದಶಕದ ಹಿಂದೆ ರೂ. 72,805 ರಿಂದ ಶೇ. 57.6 ರಷ್ಟು ಹೆಚ್ಚಾಗಿದೆ.

ದಶಕದ ಅವಧಿಯ ಬೆಳವಣಿಗೆಯಲ್ಲಿ ಕರ್ನಾಟಕ ಶೇ. 93.6 ರಷ್ಟು ಏರಿಕೆಯೊಂದಿಗೆ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ, ಒಡಿಶಾ ಶೇ. 96.7 ರಷ್ಟು ಏರಿಕೆ ದಾಖಲಿಸಿದೆ. 2023–24ನೇ ಸಾಲಿನಲ್ಲಿ, ಮಿಜೋರಾಂನಲ್ಲಿ ಶೇ.125.4 ರಷ್ಟು ಅತಿ ಹೆಚ್ಚು ಬೆಳವಣಿಗೆ ದಾಖಲಾಗಿದ್ದು, ಗುಜರಾತ್ (ಶೇ.9.7), ಗೋವಾ (ಶೇ.89.9), ಕರ್ನಾಟಕ (ಶೇ.88.5), ತೆಲಂಗಾಣ (ಶೇ.84.3), ಮತ್ತು ಒಡಿಶಾ (ಶೇ.8) ನಂತರದ ಸ್ಥಾನಗಳಲ್ಲಿತ್ತು.

ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ವಾರ್ಷಿಕವಾಗಿ 53,000 ಕೋಟಿ ರೂಪಾಯಿಗಳ ಸೌಲಭ್ಯವನ್ನು ರಾಜ್ಯದ ಕೋಟ್ಯಂತರ ಜನರಿಗೆ ಒದಗಿಸಲಾಗುತ್ತಿದೆ.

Related Posts

Leave a Reply

Your email address will not be published. Required fields are marked *