ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 88.3 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿವೆ ಎಂದು ಹೇಳಿದೆ.
ರಾಜ್ಯಗಳ ಸಾಲ ಹೆಚ್ಚಾಗಲು ಪ್ರಮುಖವಾಗಿ ಕೊರೊನಾ ಸಾಂಕ್ರಮಿಕ ಹಾಗೂ ಜನಪರ ಯೋಜನೆಗಳು ಕಾರಣಗಳು ಎನ್ನಲಾಗಿದೆ.
ಹಲವು ರಾಜ್ಯಗಳಲ್ಲಿ ಉಚಿತ ಯೋಜನೆಗಳು ಘೋಷಣೆಯಾಗಿರುವುದು ಆ ರಾಜ್ಯಗಳ ಸಾಲದ ಪ್ರಮಾಣ ಗಮನಾರ್ಹ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.
ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳು ಅತಿ ಹೆಚ್ಚಿನ ಸಾಲದ ಬಾಕಿ ಹೊಂದಿದ್ದು, ಕರ್ನಾಟಕ ಐದನೇ ಸ್ಥಾನವನ್ನು ಹೊಂದಿದೆ.
ಕಳೆದ ಐದು ವರ್ಷಗಳಲ್ಲಿ ಭಾರತದ ರಾಜ್ಯಗಳ ಬಾಕಿ ಸಾಲ ತೀವ್ರ ಏರಿಕೆಯಾಗಿದೆ ಎಂಬುದನ್ನು ಬಿಚ್ಚಿಟ್ಟಿದೆ.
2019ರಲ್ಲಿ 47.9 ಲಕ್ಷ ಕೋಟಿ ರೂಪಾಯಿ ಸಾಲವನ್ನು ರಾಜ್ಯಗಳು ಉಳಿಸಿಕೊಂಡಿದ್ದರೆ, 2024ರ ಮಾರ್ಚ್ ಹೊತ್ತಿಗೆ ಇದು 83.3 ಲಕ್ಷ ಕೋಟಿ ರೂಪಾಯಿ ಆಗಿದೆ.
ಅಂದರೆ ಐದು ವರ್ಷದಲ್ಲಿ ಬರೋಬ್ಬರೊ ಶೇ.74ರಷ್ಟು ಸಾಲದ ಬಾಕಿ ಹೆಚ್ಚಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಸಾಲದ ಬಾಕಿ ಉತ್ತರ ಭಾರತದ ರಾಜ್ಯಗಳಿಗಿಂತ ಹೆಚ್ಚಾಗಿರುವುದು ಕಂಡುಬಂದಿದ್ದು, ಪಶ್ಚಿಮದ ರಾಜ್ಯಗಳು ಕೂಡ ಹೆಚ್ಚಿನ ಸಾಲ ಹೊಂದಿವೆ.