Sunday, September 28, 2025
Menu

34 ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರ ನೇಮಕ: ಸರ್ಕಾರದ ಅಧಿಕೃತ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರವು 34 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಕುರಿತು ಶುಕ್ರವಾರ ಅಧಿಕೃತ ಆದೇಶ ಹೊರಡಿಸಿದೆ. ನೂತನ ಅಧ್ಯಕ್ಷರ ಅವಧಿ ನೇಮಕಗೊಂಡ ದಿನಾಂಕದಿಂದ ಮುಂದಿನ ಎರಡು ವರ್ಷಗಳವರೆಗೆ ಇರಲಿದೆ.

ಹೈಕಮಾಂಡ್‌ ನೀಡಿದ್ದ 39 ಹೆಸರಿನ ಪಟ್ಟಿಗೆ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 34 ಜನರಿಗೆ ಅಂಕಿತ ಹಾಕಿ ಅಂತಿಮ ಪಟ್ಟಿ ಪ್ರಕಟಿಸಿದ್ದಾರೆ. ಇದೀಗ ಮುಖ್ಯ ಕಾರ್ಯದರ್ಶಿಗಳ ಕಚೇರಿಯಿಂದ ಸಂಬಂಧಿತ ಇಲಾಖೆಗಳಿಗೂ ನೂತನ ಪಟ್ಟಿಯನ್ನು ಕಳುಹಿಸಲಾಗಿದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ರಾಜೂ ಕಾಗೆ ಮುಂದುವರಿಯಲಿದ್ದಾರೆ. ಕಾಂಗ್ರೆಸ್ ವಕ್ತಾರ ನಿಕೇತ್ ರಾಜ್ ಮೌರ್ಯರನ್ನು ಬಿಎಂಟಿಸಿ (BMTC) ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಮೂಲತಃ ನೀಲಕಂಠ ಮುಳಗೆ ಹೆಸರಿತ್ತು. ಆದರೆ ಅಂತಿಮ ಕ್ಷಣದ ಬದಲಾವಣೆಯೊಂದಿಗೆ ಅರುಣ್ ಕುಮಾರ್ ಪಾಟೀಲ್ ಅವರಿಗೆ ಆ ಜವಾಬ್ದಾರಿ ನೀಡಲಾಗಿದೆ.

ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರ ಅಧಿಕೃತ ಪಟ್ಟಿ

•ಪಿ. ರಘು – ಸಫಾಯಿ ಕರ್ಮಚಾರಿ ಆಯೋಗ
•ಶಿವಲೀಲಾ ವಿನಯ್ ಕುಲಕರ್ಣಿ – ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
•ವಡ್ನಾಳ್ ಜಗದೀಶ್ – ಜೀವವೈವಿಧ್ಯ ಮಂಡಳಿ
•ಮುರಳಿ ಅಶೋಕ್ – ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
•ಡಾ. ಮೂರ್ತಿ – ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ
•ಕರ್ನಲ್ ಮಲ್ಲಿಕಾರ್ಜುನ್ – ಮಾಜಿ ಸೈನಿಕರ ಕಲ್ಯಾಣ ಮಂಡಳಿ
•ಡಾ. ಬಿ.ಸಿ. ಮುದ್ದುಗಂಗಾಧರ್ – ಮಾವು ಅಭಿವೃದ್ಧಿ ನಿಗಮ
•ಶಾಲೆಟ್ ಪಿಂಟೋ – ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
•ಜಿ.ಎಚ್. ಮರಿಯೋಜಿ ರಾವ್ – ಮರಾಠ ಅಭಿವೃದ್ಧಿ ನಿಗಮ
•ಎಂ.ಎ. ಗಫೂರ್ – ಕರಾವಳಿ ಅಭಿವೃದ್ಧಿ ಪ್ರಾಧಿಕಾರ
•ಕೆ. ಹರೀಶ್ ಕುಮಾರ್ – ಮೆಸ್ಕಾಂ
•ಎನ್. ಸಂಪಂಗಿ – ಕರ್ನಾಟಕ ರಾಜ್ಯ ಉಗ್ರಾಣ ನಿಗಮ
•ವೈ. ಸಯೀದ್ ಅಹ್ಮದ್ – ದೇವರಾಜ ಅರಸು ಟ್ರಕ್ ಟರ್ಮಿನಲ್
•ಮಹೇಶ್ ಎಂ. – ಕಾಡುಗೊಲ್ಲ ಅಭಿವೃದ್ಧಿ ನಿಗಮ
•ಎಚ್.ಬಿ. ಮಂಜಪ್ಪ – ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
•ಭರಮಣ್ಣ ಉಪ್ಪಾರ – ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
•ಅಗಾ ಸುಲ್ತಾನ್ – ಕೇಂದ್ರ ಪರಿಹಾರ ಸಮಿತಿ
•ಎಸ್.ಜಿ. ನಂಜಯ್ಯನಮಠ – ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
•ಅರುಣ್ ಕುಮಾರ್ ಪಾಟೀಲ್ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
•ಬಾಬು ಹೊನ್ನಾ ನಾಯ್ಕ್ – ಕಾಡಾ, ಭೀಮರಾಯನಗುಡಿ, ಕಲಬುರಗಿ
•ಯುವರಾಜ್ ಕದಮ್ – ಮಲಪ್ರಭಾ ಮತ್ತು ಘಟಪ್ರಭಾ ಯೋಜನೆ ಕಾಡಾ, ಬೆಳಗಾವಿ
•ಪ್ರವೀಣ್ ಕುಮಾರ್ ಪಾಟೀಲ್ – ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ
•ಮಂಜುನಾಥ ಪೂಜಾರಿ – ನಾರಾಯಣ ಗುರು ಅಭಿವೃದ್ಧಿ ನಿಗಮ
•ಎಂ.ಎಸ್. ಮುತ್ತುರಾಜ್ – ಸವಿತಾ ಸಮಾಜ ಅಭಿವೃದ್ಧಿ ನಿಗಮ
•ನಂಜಪ್ಪ – ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
•ವಿಶ್ವಾಸ್ ಕುಮಾರ್ ದಾಸ್ – ಗಾಣಿಗ ಅಭಿವೃದ್ಧಿ ನಿಗಮ
•ಎಸ್. ಗಂಗಾಧರ್ – ರೇಷ್ಮೆ ಮಾರುಕಟ್ಟೆ ಮಂಡಳಿ ಲಿಮಿಟೆಡ್
•ಪಟೇಲ್ ಶಿವಣ್ಣ – ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
•ಡಾ. ಶ್ರೀನಿವಾಸನ್ ವೇಲು – ಕುಂಬಾರ ಅಭಿವೃದ್ಧಿ ನಿಗಮ
•ಟಿ.ಎಂ. ಶಹೀದ್ ತೆಕ್ಕಿಲ್ – ರಾಜ್ಯ ಕನಿಷ್ಠ ವೇತನ ಮಂಡಳಿ
•ಚೇತನ್ ಕೆ. ಗೌಡ – ರಾಜ್ಯ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
•ಲಾವಣ್ಯ ಬಲ್ಲಾಳ್ ಜೈನ್ – ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆ
•ಎಚ್.ಡಿ. ಗಣೇಶ್ – ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ಲಿಮಿಟೆಡ್
•ನಿಕೇತ್ ರಾಜ್ – ಬಿಎಂಟಿಸಿ

Related Posts

Leave a Reply

Your email address will not be published. Required fields are marked *