Menu

ನಾಲ್ಕು ಲಕ್ಷ ರೂ. ಬೆಲೆಯ ಸೆಕ್ಸ್‌ ಡಾಲ್ಸ್‌ ಖರೀದಿಯಲ್ಲಿ ಕರ್ನಾಟಕದ ಪುರುಷರೇ ಫಸ್ಟ್‌

ಭಾರತದಲ್ಲಿ ಸೆಕ್ಸ್‌ ಡಾಲ್ಸ್‌ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಕರ್ನಾಟಕದ ಪುರುಷರು ನಾಲ್ಕು ಲಕ್ಷ ರೂಪಾಯಿವರೆಗಿನ ಥೇಟ್ ಹೆಣ್ಣನ್ನೇ ಹೋಲುವ ಗೊಂಬೆ ಖರೀದಿಯಲ್ಲಿ ಮುಂದಿದ್ದಾರೆ ಎಂದು ಆ ಗೊಂಬೆಗಳ ತಯಾರಕರೊಬ್ಬರು ಬಹಿರಂಗಪಡಿಸಿದ್ದಾರೆ.

ನಾನಾ ಕಾರಣಗಳಿಂದ ಒಂಟಿಯಾಗಿರುವ ಪುರುಷರು ಈ ಒಂಟಿತನ ನೀಗಿಸಿಕೊಳ್ಳಲು ದುಬಾರಿ ಸೆಕ್ಸ್ ಡಾಲ್ಸ್ ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಸೆಕ್ಸ್‌ ಡಾಲ್‌ ಜೊತೆ ಮದುವೆಯಾದ ಸುದ್ದಿಗಳು ಕೂಡ ಆಗಾಗ ಸಿಗುತ್ತವೆ. ಸಂಗಾತಿಯ ಅಗಲುವಿಕೆ, ವಿಚ್ಛೇದನ, ಹುಡುಗಿ ಸಿಗದಿರುವುದು, ಮದುವೆಯೇ ಬೇಡ ಎನ್ನುವ ಯೋಚನೆ, ಹುಡುಗಿಯರ ಬೇಡಿಕೆ ಪೂರೈಸಲಾಗದಿರುವುದು ಇವೇ ಮತ್ತಿತರ ಕಾರಣ ಹಾಗೂ ಲಕ್ಷಾಂತರ ರೂಪಾಯಿ ದುಡಿದರೂ ಇನ್ನಾವುದೋ ಕಾರಣಕ್ಕೆ ಮದುವೆ ಆಗದೆ ಉಳಿದುಕೊಂಡವರು ಸೆಕ್ಸ್​ ಡಾಲ್ಸ್​ ಮೊರೆ ಹೋಗುತ್ತಿದ್ದಾರೆ. ಹುಡುಗಿಯರಿಗಿಂತ ತಾವು ಹೇಳಿದಂತೆ ಕೇಳುವ ಈ ಗೊಂಬೆಗಳೇ ಬೆಸ್ಟ್​ ಎಂಬುದು ಈ ಪುರುಷರ ಯೋಚನೆ.

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸೆಕ್ಸ್​ ಟಾಯ್ಸ್ ಮಾರಾಟ ಹೆಚ್ಚಿದೆ. ಭಾರತದಲ್ಲಿ 2024 ರಲ್ಲಿ 112-118 ಮಿಲಿಯನ್ ಡಾಲರ್​ ಈ ಗೊಂಬೆಗಳಿಂದ ಗಳಿಕೆಯಾಗಿದ್ದರೆ, 2030 ರ ವೇಳೆಗೆ 260-370 ಮಿಲಿಯನ್ ಡಾಲರ್​ ತಲುಪುವ ನಿರೀಕ್ಷೆಯಿದೆ. ನಗರ ಪ್ರದೇಶಗಳು ಬೇಡಿಕೆಯಲ್ಲಿ ಏರುತ್ತಲೇ ಇದೆ. ಕೆಲವೇ ಸಾವಿರ ರೂಪಾಯಿಗಳಿಂದ ಆರಂಭವಾಗುವ ಈ ಗೊಂಬೆಗಳ ಬೆಲೆ ನಾಲ್ಕು ಲಕ್ಷದವರೆಗೂ ಇವೆ.

ರಾಜ್​ ಶಮಾನಿ ಅವರ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಡಾಲ್​ ತಯಾರಕರೊಬ್ಬರು, ಭಾರತದಲ್ಲಿ ಕರ್ನಾಟಕದಲ್ಲಿಯೇ ಈ ಸೆಕ್ಸ್​ ಡಾಲ್ಸ್​ ಮಾರಾಟ ಹೆಚ್ಚಾಗುತ್ತಿದೆ.  ಅತ್ಯಂತ ಬೆಲೆ ಬಾಳುವ ಅಂದರೆ ನಾಲ್ಕು ಲಕ್ಷ ರೂಪಾಯಿಯನ್ನು ಕೊಟ್ಟು ಖರೀದಿ ಮಾಡುವವರಲ್ಲಿ ಕರ್ನಾಟಕದವರೇ ಅತ್ಯಧಿಕ ಎನ್ನುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ನಾಲ್ಕು ಲಕ್ಷ ರೂಪಾಯಿ ಬೆಲೆಯ ಗೊಂಬೆ ಥೇಟ್​ ಹೆಣ್ಣನ್ನು ಹೋಲುವಂತಿದೆ. ದೈಹಿಕ ಕಾಮನೆ ತೀರಿಸಿಕೊಳ್ಳಲು ಬಯಸುವವರು ಯಾವ ರೀತಿ ಹೆಣ್ಣಿನ ದೇಹವನ್ನು ಬಯಸುತ್ತಾರೋ ಅಂಥದ್ದೇ ದೇಹವನ್ನು ಈ ಗೊಂಬೆ ಹೊಂದಿದೆ. ಇದನ್ನು ನೋಡಿದರೆ, ಕೃತಕ ಎಂದು ಅನ್ನಿಸುವುದಿಲ್ಲ. ತ್ವಚೆ, ತುಟಿ, ಮೂಗು, ಕಣ್ಣು ಸೇರಿ ಸರ್ವ ಅಂಗಗಳೂ ಹೆಣ್ಣನ್ನು ಹೋಲುವಂತಿವೆ. ಗಂಡಸರು ಈ ಹೆಣ್ಣಿನ ಎಲ್ಲ ಅಂಗಾಂಗಗಳನ್ನು ತಮಗೆ ಹೇಗೆ ಬೇಕೋ ಆ ರೀತಿ ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ. ಅಳತೆ, ಡ್ರೆಸ್​ ಸೆನ್ಸ್​ ಸೇರಿದಂತೆ ಎಲ್ಲವೂ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದಾದ ಕಾರಣಇಷ್ಟು ದುಬಾರಿಯಾಗಿದ್ದರೂ ಅದನ್ನು ಬಳಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *