Menu

ರಾಜ್ಯ ಪಠ್ಯಕ್ರಮದ ಸರ್ಕಾರಿ ಶಾಲೆಗಳು ಮೇ 29ರಿಂದ ಆರಂಭ

ಬೆಂಗಳೂರು:ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿ ಮತ್ತು ರಜಾದಿನಗಳ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿದ್ದು, 2025ರ ಮೇ 29 ರಿಂದ ಶಾಲೆಗಳು ಆರಂಭವಾಗಲಿವೆ.

ಮೇ 29 ರಿಂದ ಸೆ.19ರವರೆಗೆ ಮೊದಲ ಅವಧಿ ಹಾಗೂ ಅ.8ರಿಂದ 2026ರ ಏ.10ರವರೆಗೆ ಎರಡನೇ ಅವಧಿಯಲ್ಲಿ ಶಾಲೆಗಳು ಕರ್ತವ್ಯ ನಿರ್ವಹಿಸಲಿವೆ. ಸೆ.20ರಿಂದ ಅ.7ರವರೆಗೆ ದಸರಾ ರಜೆ ಮತ್ತು 2026ರ ಏ.11ರಿಂದ ಮೇ 28ರವರೆಗೆ ಬೇಸಿಗೆ ರಜೆ ಇರಲಿದೆ.

ಕರ್ತವ್ಯದ ದಿನಗಳು 242; ಬೋಧನೆ, ಕಲಿಕೆಗೆ 178 ದಿನ

ವಾರ್ಷಿಕವಾಗಿ ಒಟ್ಟು 365 ದಿನಗಳು ಲಭ್ಯವಿದ್ದು, ಇದರಲ್ಲಿ 123 ದಿನ ರಜೆ ಇರಲಿದೆ. ಉಳಿದ 242 ದಿನಗಳು ಶಾಲೆ ನಡೆಯಲಿವೆ. 242 ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳನ್ನು ನಿಗದಿ ಮಾಡಲಾಗಿದೆ. 22 ದಿನಗಳನ್ನು ಪಠ್ಯೇತರ ಚಟುವಟಿಕೆಗಳ/ಪಠ್ಯ ಚಟುವಟಿಕೆಗಳ, ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ 22 ದಿನಗಳಿರಲಿವೆ. ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 04 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ಮೀಸಲಿಡಲಾಗಿದೆ.

ಇದೇ ವರ್ಷದ ಏ. 8ರಂದು ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಪ್ರೌಢ ಶಾಲೆಗಳಲ್ಲಿ ಏ.9ರಂದು ಸಮುದಾಯ ದತ್ತ ಶಾಲೆ/ಪಾಲಕರ ಸಭೆ ಕರೆದು ಫಲಿತಾಂಶ ಪ್ರಕಟಿಸಬೇಕು. ಏ.14ರಂದು ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿಯನ್ನು ಎಲ್ಲ ಶಾಲೆಗಳಲ್ಲಿಯೂ ಆಚರಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Related Posts

Leave a Reply

Your email address will not be published. Required fields are marked *