ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ, ಅಡೆತಡೆಗಳು ಹೆಚ್ಚಾಗಿರುವ ಬೆನ್ನಲ್ಲೆ ಸಮೀಕ್ಷೆಯಲ್ಲಿ ಕೇಳಲಿರುವ 60ಕ್ಕೂ ಹೆಚ್ಚು ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ. ಸಾರ್ವಜನಿಕರು ಇಷ್ಟೊಂದು ಪ್ರಶ್ನೆಗಳಿಗೆ ಉತ್ತರ ನೀಡಬಹುದೇ? ಅನಕ್ಷರಸ್ಥರಿಗೆ ಈ ಪ್ರಶ್ನೆಗಳು ಹೆಚ್ಚು ಒತ್ತಡವಾಗಬಹುದೇ ಎಂಬ ಪ್ರಶ್ನೆಗಳು ಮೂಡಿದ್ದು ಇದುವರೆಗೆ ಸಮೀಕ್ಷಾಧಿಕಾರಿಗಳ ಈ ಕ್ರಮವನ್ನು ಹೇಗೆ ಸ್ವೀಕರಿಸಲಾಗುವುದು ಎಂಬ ಕುತೂಹಲ ಹೆಚ್ಚಾಗಿದೆ.
ಪತ್ರಕರ್ತ ಎಸ್. ಶ್ಯಾಮ್ ಪ್ರಸಾದ್ ಅವರ ಜಾತಿ ಸಮೀಕ್ಷೆ ಬಗೆಗಿನ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಮೊದಲ ದಿನದಷ್ಟೇ ಸರ್ವರ್ ಸಮಸ್ಯೆಗಳು ಮತ್ತು ಒಟಿಪಿ ತೊಂದರೆಗಳು ಎದುರಾಗಿದ್ದು, ಜನರ ಸ್ಥಿತಿಗತಿಗಳನ್ನು ಅಳೆಯಲು ಸಮೀಕ್ಷೆಯಲ್ಲಿ ಕೇಳಲಿರುವ ಪ್ರಶ್ನೆಗಳು ಈ ಕೆಳಗಿನಂತಿವೆ.
- ಮನೆಯ ಮುಖ್ಯಸ್ಥರ ಹೆಸರು
- ತಂದೆಯ ಹೆಸರು
- ತಾಯಿಯ ಹೆಸರು
- ಕುಟುಂಬದ ಕುಲ ಹೆಸರು
- ಮನೆ ವಿಳಾಸ
- ಮೊಬೈಲ್ ಸಂಖ್ಯೆ
- ರೇಷನ್ ಕಾರ್ಡ್ ಸಂಖ್ಯೆ
- ಆದಾರ್ ಸಂಖ್ಯೆ
- ಮತದಾರರ ಗುರುತಿನ ಚೀಟಿ ಸಂಖ್ಯೆ
- ಕುಟುಂಬದ ಒಟ್ಟು ಸದಸ್ಯರು
- ಧರ್ಮ
- ಜಾತಿ / ಉಪಜಾತಿ
- ಜಾತಿ ವರ್ಗ
- ಜಾತಿ ಪ್ರಮಾಣ ಪತ್ರ ಇದೆಯೇ?
- ಪ್ರಮಾಣ ಪತ್ರ ಸಂಖ್ಯೆ
- ಜನ್ಮ ದಿನಾಂಕ
- ವಯಸ್ಸು
- ಲಿಂಗ (ಪುರುಷ/ಸ್ತ್ರೀ/ಇತರೆ)
- ವೈವಾಹಿಕ ಸ್ಥಿತಿ
- ಜನ್ಮ ಸ್ಥಳ
- ವಿದ್ಯಾಭ್ಯಾಸದ ಮಟ್ಟ
- ಮನೆಯಲ್ಲಿ ಓದಲು ಬಲ್ಲವರು ಎಷ್ಟು?
- ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?