Menu
12

ನಟ್ ಬೋಲ್ಟ್ ಟೈಟ್ ಹಗರಣದ ಸುತ್ತಮುತ್ತ

ಸತ್ಯನಾರಾಯಣ ಪೂಜೆಗೆ ಆಹ್ವಾನವಿಲ್ಲದ್ದರೂ ಹೋಗಿ ಪ್ರಸಾದ ಸ್ವೀಕರಿಸಿ ಬರುತ್ತಾರಂತೆ. ಹಾಗೆಯೇ ಚಿತ್ರೋದ್ಯಮದವರು ಸ್ವಲ್ಪ ಅಹಂ ಬಿಟ್ಟು ಆಮಂತ್ರಣಕ್ಕೆ ಕಾಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡತನ ಮೆರೆಯಬಹುದಿತ್ತು. ಮನೆಯಲ್ಲಿ ನಡೆಯುವ ಮನೆಯ ಕಾರ್ಯಕ್ರಮಕ್ಕೆ ಮನೆಯರಿಗೆ ಆಮಂತ್ರಣ ನೀಡುವ ಸಂಪ್ರದಾಯ ಎದರೂ ಇದೆಯೇ? ಇಂಥ ಕಾರ್ಯಕ್ರಮಗಳಿಗೆ ನೂರಕ್ಕೆ ನೂರರಷ್ಟು ಭಾಗವಹಿಸುವಿಕೆ ನಿರೀಕ್ಷಿಸುವುದು ಕಷ್ಟ. ಆದರೆ, ಒಂದು ಗೌರವಾನ್ವಿತ ಸಂಖ್ಯೆ ಯಲ್ಲಿ ಭಾಗವಹಿಸಿದ್ದರೆ ಇಂತಹ ವಿವಾದಕ್ಕೆ ಆಸ್ಪದ ಇರುತ್ತಿರಲಿಲ್ಲ. ಕೆಲವರು ಬರದಿದ್ದರೆ ಆ ಮಾತು ಬೇರೆ. ಅದು ಅನಿವಾರ್ಯತೆ. ಈ ಸಾಮೂಹಿಕ ಗೈರು ಕನ್ನಡ ಚಿತ್ರೋದ್ಯಮವು ಸರ್ಕಾರಕ್ಕೆ ಮಾಡಿದ ಅವಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಇದು ಒಂದು ರೀತಿಯಲ್ಲಿ ಮೌನ ಬಹಿಷ್ಕಾರ ಇದ್ದಂತೆ ಇತ್ತು ಎಂದು ಹೇಳ ಲಾಗುತ್ತದೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕನ್ನಡ ಚಲನಚಿತ್ರೋತ್ಸವ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ಕಲಾವಿದರ ಭಾಗವಹಿಸುವಿಕೆ ನಿರೀಕ್ಷೆಯಷ್ಟು ಇಲ್ಲದಿರು ವುದನ್ನು ನೋಡಿ ವ್ಯಾಕುಲಗೊಂಡ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಕಲಾವಿದರ ನಟ್ ಬೋಲ್ಟನ್ನು ಟೈಟ್ ಮಾಡುತ್ತೇವೆ ಎಂದು ಹೇಳಿದ್ದು ಭಾರೀ ವಿವಾದ ಎಬ್ಬಿಸಿದೆ. ಈ ಹೇಳಿಕೆ ಕನ್ನಡ ಚಲನಚಿತ್ರರಂಗ ಮತ್ತು ರಾಜಕಾರಣಿಗಳನ್ನು ಇಬ್ಭಾಗ ಮಾಡಿದೆ. ಎ ವಿಷಯದಂತೆ ಈ ನಿಟ್ಟಿನಲ್ಲೂ ರಾಜಕೀಯ ಪಕ್ಷಗಳು ಪರಸ್ಪರ ವಿರುದ್ಧ ನಿಲುವಿನಡಿಯಲ್ಲಿ ಕಚ್ಚಾಡುತ್ತಿವೆ. ಡಿಕೆಶಿಯವರ ಈ ಹೇಳಿಕೆ ಕುರಿತು ಪರ ಮತ್ತು ವಿರೋಧ ಚರ್ಚೆ ಮಾಧ್ಯಮದಲ್ಲಿ ಮತ್ತು ಸಾಮಾಜಿಕ ಜಾಲ ತಾಣದಲ್ಲಿ ಮುಗಿಯದೆ ನಡೆಯುತ್ತಿದ್ದು. ಮೇಲ್ನೋಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಡಿಕೆಶಿ ಪರವಾಗಿ ಹೆಚ್ಚಿನ ಸಮರ್ಥನೆ ಕಾಣುತ್ತಿದ್ದು, ಡಿಕೆಶಿಯವರು ಟೀಕೆ ಗಳಿಗೆ, ಲೇವಡಿಗೆ ತಲೆಕೆಡಿಸಿಕೊಳ್ಳದೆ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ.

ಸಾಮಾನ್ಯವಾಗಿ ಇಂಥ ಹೇಳಿಕೆ ನೀಡುವವರು, ವಿವಾದ ಸೃಷ್ಟಿಯಾದಾಗ ತಾವು ಆ ಅರ್ಥದಲ್ಲಿ ಹೇಳಿಲ್ಲ. ಮಾಧ್ಯಮದವರು ತಮ್ಮ ಹೇಳಿಕೆ ತಿರುಚಿದರೆ ಎಂದು ಸಮಜಾಯಿಷಿ ನೀಡಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಡಿಕೆಶಿಯವರು ಹೇಳಿಕೆ, ಪ್ರತಿ ಹೇಳಿಕೆ, ಪ್ರತಿಭಟನೆಗಳಿಗೆ ಜಗ್ಗದೆ ತಮ್ಮ ಅನಿಸಿಕೆ ಮತ್ತು ಹೇಳಿಕೆಗಳಿಗೆ ಬದ್ಧರಾಗಿರುವುದು ರಾಜಕೀಯ ಮತ್ತು ಚಲನಚಿತ್ರ ರಂಗಗಳೆರಡರಲ್ಲೂ ವಿಶೇಷ ಎನಿಸಿದೆ. ಡಿಕೆಶಿ ಮುಂದಿನ ಬೆಳವಣಿಗೆ ಎದುರಿಸಲು ಸಿದ್ಧರಾಗಿ ರುವಂತೆ ಕಾಣುತ್ತದೆ. ಕೆಲವು ಪ್ರeವಂತರ ಪ್ರಕಾರ ಆ ಸಂದರ್ಭದಲ್ಲಿ ಯಾರೇ ಇದ್ದರೂ ಇಂಥ ಹೇಳಿಕೆಗಳು ಬರುತ್ತಿದ್ದವೇನೋ ಎನ್ನುವ ಮಾತು ಕೂಡಾ ಕೇಳಿ ಬರುತ್ತಿದೆ.

ವಾಸ್ತವದಲ್ಲಿ ಇದು ಚಲನಚಿತ್ರ ರಂಗಕ್ಕೆ ಸಂಬಂಧಪಟ್ಟ ಕಾರ್ಯಕ್ರವಾಗಿದ್ದು, ಚಲನಚಿತ್ರ ರಂಗದಿಂದ ದೊಡ್ಡ ಪ್ರಮಾಣದ ಭಾಗವಹಿಸುವಿಕೆ ನಿರೀಕ್ಷಿಸಲಾಗಿತ್ತು. ಆದರೆ, ಇದು ಕೇವಲ ಬೆರಳೆಣಿಕೆಯಷ್ಟು ಕಲಾವಿದರಿಗೆ ಸೀಮಿತವಾಗಿ ಮಾರ್ಪಟ್ಟಿದ್ದು, ಡಿಕೆಶಿಯವರನ್ನು ಕೆರಳಿಸಿರಬಹುದು. ಯಾವುದೇ ಕಾರ್ಯಕ್ರಮಕ್ಕೆ ಅವಶ್ಯ ವಾಗಿ ಬರಬೇಕಾದವರು ಬರದಿದ್ದರೆ ಇಂಥ ಘಟನೆಗಳು ನಡೆಯುವುದು ಸಾಮಾನ್ಯ. ಇದು ಒಂದು ರೀತಿಯಲ್ಲಿ ಮಗಳ ಮದುವೆಯಲ್ಲಿ ಸೋದರ ಮಾವ-ಅತ್ತೆ, ವಧು ವರರ ಪಾಲಕರು ಸಹೋದರ ಸಹೋದರಿಯರು ಕಾಣಿಸದಿರುವಂತೆ ಎನ್ನಬಹುದು. ಚಿತ್ರೋತ್ಸವದಲ್ಲಿ ಭಾಗವಹಿಸದಿರಲು ಕಾರ್ಯಕ್ರಮಕ್ಕೆ ಆಮಂತ್ರಣ ಬಂದಿಲ್ಲ, ಆಮಂತ್ರಣ ತಡವಾಗಿ ಕೈಸೇರಿತು, ಮನೆಗೆ ಬಂದು ಆಮಂತ್ರಣ ನೀಡದೆ ಅಂಚೆಯಲ್ಲಿ ಕಳಿಸಿದ್ದರು, ಶೂಟಿಂಗ್‌ನಲ್ಲಿ ಬ್ಯುಸಿ, , ಪೂರ್ವನಿಯೋಜಿತ ಕಾರ್ಯಕ್ರಮ,  ಊರಿನಲ್ಲಿ ಇರಲಿಲ್ಲ ಮುಂತಾದ ಕಾರಣಗಳನ್ನು ನೀಡಿದ್ದು, ಯಾರಿಗೂ ಅದು ಸಮರ್ಥನೀಯ ಎನಿಸಲಿಲ್ಲ. ಅವುಗಳನ್ನು ಡಿಸ್ಕೌಂಟ್ ಮಾಡಿ ಸ್ವೀಕರಿಸಿದ್ರೆದಾರೆ.

ವರದಿಗಳ ಪ್ರಕಾರ ಕನ್ನಡ ಚಿತ್ರೋದ್ಯಮದಲ್ಲಿ ಬಹುತೇಕ ಎಲ್ಲರಿಗೂ ಆಮಂತ್ರಣ ಹೋಗಿದೆ. ಕೆಲವರಿಗೆ ಮಿಸ್ ಆಗಿರಬಹುದು. ಕೆಲವರಿಗೆ ತಲುಪದಿರಬಹುದು. ಇಂಥ ಘಟನೆಗಳು ತೀರಾ ಸಾಮಾನ್ಯ. ಇದು ಸರ್ಕಾರಿ ಕಾರ್ಯಕ್ರಮವಾಗಿದ್ದರೂ, ಚಿತ್ರೋದ್ಯಮಕ್ಕೆ ನೇರವಾಗಿ ಸಂಬಂಧಿಸಿದ ಕಾರ್ಯಕ್ರಮವಾಗಿದ್ದರಿಂದ, ಚಿತ್ರೋದ್ಯಮದವರೇ ಮುಂದೆ ನಿಂತು ಮಾಡಬೇಕಾದ ಕಾರ್ಯಕ್ರಮವಾಗಿತ್ತು ಮತ್ತು ಅವರೇ ವೇದಿಕೆಯಲ್ಲಿ ಮತ್ತು ಮುಂದಿನ ಸಾಲಿನಲ್ಲಿ ವಿಜೃಂಭಿಸಬೇಕಾಗಿತ್ತು. ಸತ್ಯನಾರಾಯಣ ಪೂಜೆಗೆ ಆಹ್ವಾ ನವಿಲ್ಲದ್ದರೂ ಹೋಗಿ ಪ್ರಸಾದ ಸ್ವೀಕರಿಸಿ ಬರುತ್ತಾರಂತೆ. ಹಾಗೆಯೇ ಚಿತ್ರೋದ್ಯಮದವರು ಸ್ವಲ್ಪ ಅಹಂ ಬಿಟ್ಟು ಆಮಂತ್ರಣಕ್ಕೆ ಕಾಯದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ದೊಡ್ಡತನ ಮೆರೆಯಬಹುದಿತ್ತು. ಮನೆಯಲ್ಲಿ ನಡೆಯುವ ಮನೆಯ ಕಾರ್ಯಕ್ರಮಕ್ಕೆ ಮನೆಯರಿಗೆ ಆಮಂತ್ರಣ ನೀಡುವ ಸಂಪ್ರದಾಯ ಎದರೂ ಇದೆಯೇ? ಇಂಥ ಕಾರ್ಯಕ್ರಮಗಳಿಗೆ ನೂರಕ್ಕೆ ನೂರರಷ್ಟು ಭಾಗವಹಿಸುವಿಕೆ ನಿರೀಕ್ಷಿಸುವುದು ಕಷ್ಟ. ಆದರೆ, ಒಂದು ಗೌರವಾನ್ವಿತ ಸಂಖ್ಯೆ ಯಲ್ಲಿ ಭಾಗವಹಿಸಿದ್ದರೆ ಇಂತಹ ವಿವಾದಕ್ಕೆ ಆಸ್ಪದ ಇರುತ್ತಿರಲಿಲ್ಲ. ಕೆಲವರು ಬರದಿದ್ದರೆ ಆ ಮಾತು ಬೇರೆ. ಅದು ಅನಿವಾರ್ಯತೆ. ಈ ಸಾಮೂಹಿಕ ಗೈರು ಕನ್ನಡ ಚಿತ್ರೋದ್ಯಮವು ಸರ್ಕಾರಕ್ಕೆ ಮಾಡಿದ ಅವಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಇದು ಒಂದು ರೀತಿಯಲ್ಲಿ ಮೌನ ಬಹಿಷ್ಕಾರ ಇದ್ದಂತೆ ಇತ್ತು ಎಂದು ಹೇಳ ಲಾಗುತ್ತದೆ.

ಮುಂಬೈ, ದೆಹಲಿ, ಹೈದ್ರಾಬಾದ್, ಚೆನ್ನೈ ಮತ್ತು ಕೊಲ್ಕತ್ತಾದಲ್ಲಿ ಇಂಥ ಕಾರ್ಯಕ್ರಮಗಳು ನಡೆದಾಗ ಹಾಲ್ ತಾರೆಯರಿಂದ ತುಂಬುತ್ತಿದ್ದು, ಬೇರೆಯವರು ಸೀಟಿಗಾಗಿ ಪರದಾಡಿಕೊಳ್ಳಬೇಕಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ತಾರೆಯರ ಗೈರುಹಾಜರಿಯ ಹಿಂದೆ ಇನ್ನೇನೋ ಗಹನವಾದ ಕಾರಣ ಇರಬೇಕು ಎನ್ನುವ ಊಹಾಪೋಹಗಳಿಗೆ ಅವಕಾಶ ದೊರಕಿದ್ದು ಅವು ರೆಕ್ಕೆ ಪುಕ್ಕಗಳನ್ನು ಬಿಚ್ಚಿ ಹಾರಾಡುತ್ತಿವೆ. ಕೆಲವರು ಸಬ್ಸಿಡಿ ಬಿಡುಗಡೆಯಲ್ಲಿನ ವಿಳಂಬಕ್ಕೆ ಪ್ರತಿಭಟನೆಯಾಗಿ ತಾರೆಯರು ಗೈರು ಹಾಜರಾಗಿರಬಹುದು ಎನ್ನುತ್ತಾರೆ. ಡಿಕೆಶಿಯವರು ಯಾವ ಅರ್ಥದಲ್ಲಿ ನಟ್ ಮತ್ತು ಬೋಲ್ಟ್ ಪದ ಉಪಯೋಗಿಸಿzರೆ ಎನ್ನುವುದರ ಬಗೆಗೆ ಕೂಡಾ ಒಮ್ಮತಾಭಿಪ್ರಾಯ ಕಾಣುತ್ತಿಲ್ಲ. ಹಾಗೆಯೇ ಅವರು ಬಳಸಿದ ಪದ ಟೈಟ್ ಮಾಡುತ್ತೇನೆ ಎನ್ನುವುದರ ಬಗೆಗೂ ಜಿeಸೆ ಇದೆ. ಹಿರಿಯ ನಟರೊಬ್ಬರು ಬೋಲ್ಟೇ ಇಲ್ಲದಿದ್ದ ಮೇಲೆ ಟೈಟ್ ಮಾಡುವುದೇನು ಎಂದು ಕುಹಕವಾಡಿzರೆ. ಇವರ ಕುಹಕದಲ್ಲೂ ಅರ್ಥವಿದೆ ಎಂದು ಚಿತ್ರೋದ್ಯಮದ ಆಗುಹೋಗು ಬಲ್ಲವರು ಹೇಳುತ್ತಾರಂತೆ!

ಆನೆಯೂ ಮತ್ತು ಐದು ಜನ ಕುರುಡರು ಎನ್ನುವಂತೆ ಪ್ರತಿಯೊಬ್ಬರೂ ತಮಗೆ ತೋಚಿದಂತೆ ಘಟನೆಯನ್ನು ವಿಶ್ಲೇಷಿಸುತ್ತಿದ್ದಾರೆ ಮತ್ತು ಪ್ರತಿಕ್ರಿಯೆ ನೀಡುತ್ತಿದ್ದಾರೆ.  ಶೂಟಿಂಗ್‌ಗೆ ಅನುಮತಿ ನೀಡುವಲ್ಲಿ ಮತ್ತು ಸಬ್ಸಿಡಿ ಬಿಡುಗಡೆ ಮಾಡುವಲ್ಲಿ ಅಡಚಣೆ ಉಂಟು ಮಾಡಬಹುದೇ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ಅವಕಾಶ ವೆಂದು ಕೆಲವರು ತಮ್ಮದೇ ರೀತಿಯಲ್ಲಿ ಕನ್ನಡ ಚಿತ್ರೋದ್ಯಮ ಮತ್ತು ಚಿತ್ರೋದ್ಯಮದವರನ್ನು ಗೇಲಿ ಮಾಡುತ್ತಿzರೆ. ಕನ್ನಡ ಚಿತ್ರೋದ್ಯಮದಲ್ಲಿ ನಡೆದಿದೆ ಎನ್ನ ಲಾದ ಕೆಲವು ಅಹಿತಕರ ಘಟನೆಗಳ ಕಡತಗಳನ್ನು ಹೊರತೆಗೆದು ಮುಜುಗರ ಉಂಟು ಮಾಡುತ್ತಿzರೆ. ಶಾಸಕರೊಬ್ಬರು ಕನ್ನಡ ಚಿತ್ರೋದ್ಯಮದವರು ಬಾಲಿವುಡ್ ಕರೆದರೆ ಎದ್ದು ಬಿದ್ದು ಹೋಗುತ್ತಾರೆ, ಕನ್ನಡದವರು ಕರೆದರೆ ಬರಲು ಕುಂಟು ನೆವ ಹೇಳುತ್ತಾರೆ ಮತ್ತು ಕನ್ನಡವನ್ನು ನಿಕೃಷ್ಟವಾಗಿ ಕಾಣುತ್ತಾರೆ ಎಂದು ಆಪಾದಿಸಿ ದ್ದಾರೆ. ಹಾಗೆಯೇ ಖ್ಯಾತ ಕನ್ನಡ ನಟಿಯೊಬ್ಬಳ ಪರರಾಜ್ಯ ಪ್ರೇಮ ಖಂಡಿಸಿ ಅವರಿಗೆ ತಕ್ಕಪಾಠ ಕಲಿಸುವುದಾಗಿ ಹೇಳಿದ್ದಾರೆ  ಮತ್ತು ಈ ವಿಷಯ ಕನ್ನಡ ಹೋರಾ ಟಗಾರರನ್ನೂ ತಲುಪಿದ್ದು ಮುಂದಿನ ದಿನಗಳಲ್ಲಿ ಇನ್ನೊಂದು ಮಹಾ ತಿರುವು ಪಡೆಯುವ ಸಾದ್ಯತೆ ಕಾಣುತ್ತದೆ. ಈವರೆಗೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತ ವಾಗಿದ್ದ ಈ ವಿವಾದ ಮೇನ್ ಸ್ಕ್ರೀನ್‌ಗೆ ಬರುವ ಎ ಸಾಧ್ಯತೆ ಕಾಣುತ್ತಿದೆ.

ನೆಲ, ಜಲ ಮತ್ತು ಭಾಷೆಯ ವಿಷಯದಲ್ಲಿ ಕನ್ನಡ ಚಿತ್ರೋದ್ಯಮ ರಾಜ್ಯಕ್ಕೆ ತನ್ನ ಬದ್ಧತೆಯನ್ನು ದೃಢವಾಗಿ ತೋರಿಸುತ್ತಿಲ್ಲ ಎನ್ನುವ ಆರೋಪ ಲಾಗಾಯ್ತಿನಿಂದ ಇದೆ. ತಮಿಳು ತಾರೆಯರು ಕಾವೇರಿ ಹೋರಾಟಕ್ಕಾಗಿ ವಿದೇಶದಿಂದ ಓಡಿ ಬಂದರೆ ಕನ್ನಡ ತಾರೆಯರು ಬರದಿರುವುದಕ್ಕೆ ಕುಂಟು ನೆವ ಹೇಳುತ್ತಾರೆ ಎನ್ನುವ ಆಪಾದನೆ ಇದೆ. ನಟರೊಬ್ಬರು ರಸ್ತೆ ಸರಿ ಇಲ್ಲದ ಕಾರಣ ಬರಲು ಸಾಧವಾಗುತ್ತಿಲ್ಲ ಎಂದು ಹೇಳಿದ್ದರಂತೆ. ಕನ್ನಡ ಚಿತ್ರೋದ್ಯಮ ಮತ್ತು ಸರ್ಕಾರದ ಮಧ್ಯೆ ಇತ್ತೀಚೆಗೆ ಏಕೋ ಶೃತಿ ಸೇರುತ್ತಿಲ್ಲ ಎನ್ನುವ ಸಂದೇಹ ಕಾಣುತ್ತದೆ. ಒಳಗೊಳಗೆ ಏನೋ ಮಸಲತ್ತು, ಕರಾಮತ್ತು ಮತ್ತು ತಿಳಿವಳಿಕೆಯ ಅಭಾವ ಇದ್ದಂತೆ ಗೋಚರಿಸುತ್ತದೆ. ಡಾ.ರಾಜ್ ನೇತೃತ್ವದ ಗೋಕಾಕ ಚಳುವಳಿಯ ನಂತರ ಕನ್ನಡ ಚಿತ್ರೋದ್ಯಮ ದೊಡ್ಡ ಪ್ರಮಾಣದಲ್ಲಿ ಒಟ್ಟಾಗಿ ಸರ್ಕಾರದೊಡನೆ ನೆಲ, ಜಲ ಮತ್ತು ಭಾಷೆಯ ವಿಷಯದಲ್ಲಿ ಕೈಜೋಡಿಸಿದಂತೆ ಕಾಣುವುದಿಲ್ಲ. ಕನ್ನಡ ಚಿತ್ರೋದ್ಯಮವು ಕರ್ನಾಟಕದಲ್ಲಿ ದೃಢವಾಗಿ ನೆಲೆಗೊಳ್ಳುವಂತೆ ಮಾಡಲು ಕರ್ನಾಟಕದಲ್ಲಿ ತಯಾರಾದ ಚಿತ್ರಗಳಿಗೆ ಸಹಾಯ ಧನ ನೀಡುವ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾದಾಗ ಜಾರಿ ಮಾಡಿದ ಯೋಜನೆ ಇನ್ನೂ ಮುಂದುವರೆದಿದೆ. ಆಗಾಗ ಸ್ವಲ್ಪ ವಿಳಂಬವಾದರೂ ಚಿತ್ರೋದ್ಯಮ ಇದನ್ನು ಪಡೆಯುತ್ತಿದೆ. ಮೈಸೂರಿನಲ್ಲಿ ಚಿತ್ರನಗರಿ ಮಾಡಲು ಮುಂದಾಗಿದೆ. ಪ್ರತಿವರ್ಷ ಉತ್ತಮ ಚಿತ್ರಗಳಿಗೆ ಪ್ರಶಸ್ತಿ ನೀಡುತ್ತಿದೆ. ಚಲನಚಿತ್ರ ತಾರೆಯರನ್ನು ವಿಧಾನ ಪರಿಷತ್ತಿಗೆ, ರಾಜ್ಯಸಭೆಗೆ, ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮಿತಿಗೆ ನೇಮಕ ಮಾಡುತ್ತಿದೆ. ಕೆಲವು ಅಪವಾದಗಳು ಇರಬಹುದಾದರೂ ಸರ್ಕಾರ ಕನ್ನಡ ಚಿತ್ರೋದ್ಯಮವನ್ನು ಗೌರವದಿಂದ ನೋಡುತ್ತಿರುವ ಸತ್ಯ ಮರೆಮಾಚಲಾಗದು. ಆದರೂ, ಕನ್ನಡ ಚಿತ್ರೋದ್ಯಮದ ಕಲಾವಿದರು ಈ ರೀತಿ ವರ್ತಿಸಿzಕೆ ಎನ್ನುವುದು ಅರ್ಥವಾಗುತ್ತಿಲ್ಲ. ಇದು ಕೇವಲ ಕರ್ನಾಟಕವಲ್ಲದೇ ರಾಷ್ಟ್ರೀಯ ಮಾಧ್ಯಮದಲ್ಲೂ ಭಾರೀ ವೈರಲ್ ಅಗಿದ್ದು, ಬಿಸಿ ಚರ್ಚೆಗೆ ಭರಪೂರ ಆಹಾರ ಒದಗಿಸಿದೆ.

ಡಾ.ರಾಜ್ ಮತ್ತು ಅಂಬರೀಷ್ ನಂತರ ಕನ್ನಡ ಚಿತ್ರೋದ್ಯಮದಲ್ಲಿ ದೃಢವಾದ ಧ್ವನಿ ಕೇಳುತ್ತಿಲ್ಲ. ಒಂದು ರೀತಿಯಲ್ಲಿ ಬೋಲ್ಟ್ ಇಲ್ಲದ ಕೋಣೆಯಂತಾಗಿದೆ. ಅವರ ಕಾಲದಲ್ಲಿ ಎಲ್ಲವೂ ಒಂದು ರೀತಿಯಲ್ಲಿ ವಿವಾದಗಳಿಲ್ಲದೇ ಸುಗಮವಾಗಿ ನಡೆದುಕೊಂಡು ಹೋಗುತ್ತಿತ್ತು. ಉದ್ಯಮದಲ್ಲಿ ನಾಯಕತ್ವದ ಕೊರತೆ ಮತ್ತು ದೃಢವಾದ ನಿರ್ಣಯ ತೆಗೆದುಕೊಳ್ಳುವ ಅಸಹಾಯಕತೆ ಎದ್ದು ಕಾಣುತ್ತದೆ. ಕನ್ನಡ ಚಲನಚಿತ್ರಗಳ ಕಡ್ಡಾಯ ಪ್ರದರ್ಶನ ಮತ್ತು ಮಲ್ಟಿ ಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳು, ಚೆನ್ನಾಗಿ ಓಡುತ್ತಿರುವ ಚಿತ್ರಗಳನ್ನು ದಿಢೀರ್ ಎಂದು ಥಿಯೇಟರ್‌ಗಳಿಂದ ಎತ್ತಂಗಡಿ, ಪರಭಾಷಾ ಚಿತ್ರಗಳ ಅಬ್ಬರ, ಕೆಲವು ತಾರೆಯರಿಗೆ ನೀಡುವ ಸಂಬಳ, ಬಿಡುಗಡೆಗೆ ಸಿದ್ಧವಾದ ಚಿತ್ರಗಳಿಗೆ ಥಿಯೇಟರ್ ಕೊಡಿಸುವ ನಿಟ್ಟಿನಲ್ಲಿ ಅಸಹಾಯಕತೆ ಮುಂತಾದ ವಿಷಯಗಳಲ್ಲಿ ಕನ್ನಡ ಚಿತ್ರೋದ್ಯಮ ಏನನ್ನೂ ಮಾಡಲಾಗದ ಸ್ಥಿತಿಯಲ್ಲಿದೆ ಎನ್ನಲಾಗುತ್ತಿದೆ. ಎಷ್ಟೋ ನಿರ್ಮಾಪಕರು ಥಿಯೇಟರುಗಳಿಗೆ ಪರದಾಡುತ್ತಾರಂತೆ.

ಈ ವಿವಾದ ಹೇಗೆ ಕೊನೆಗಾಣುತ್ತದೆ ಎನ್ನುವುದು ಬೇರೆ ಮಾತು. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಕನ್ನಡ ಚಿತ್ರೋದ್ಯಮದ ಮಧ್ಯೆ ಕೈಕುಲುಕಾಟ ನಡೆಯಬಹುದು. ಆದರೆ, ಇದು ಕನ್ನಡ ಚಿತ್ರೋದ್ಯಮದ ಮೇಲೆ ಒಂದು ಕಪ್ಪುಚುಕ್ಕೆಯಾಗಿ ಬಹುಕಾಲ ನಿಲ್ಲುವುದು ದಿಟ.

– ರಮಾನಂದ ಶರ್ಮಾ
ವಿಶ್ಲೇಷಕರು

Related Posts

Leave a Reply

Your email address will not be published. Required fields are marked *