Menu

ಕಮಲ್‌ ಹಾಸನ್‌ ರಾಜ್ಯಸಭೆಗೆ ನಾಮಪತ್ರ ಸಲ್ಲಿಕೆ

ನಟ ಕಮಲ್ ಹಾಸನ್ ತಮಿಳುನಾಡಿನಿಂದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ್ದಾರೆ. ತಮಿಳುನಾಡಿನ 6 ರಾಜ್ಯಸಭಾ ಸ್ಥಾನಗಳಿಗೆ ಇದೇ ಜೂನ್ 19ರಂದು ಚುನಾವಣೆ ನಡೆಯಲಿದ್ದು, ಡಿಎಂಕೆ ಬೆಂಬಲದೊಂದಿಗೆ ಕಮಲ್ ಹಾಸನ್ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ. ಆಡಳಿತ ಪಕ್ಷ ಡಿಎಂಕೆ ನಾಲ್ಕು ರಾಜ್ಯಸಭಾ ಸ್ಥಾನಗಳಲ್ಲಿ ಒಂದನ್ನು ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ ಪಕ್ಷಕ್ಕೆ ನೀಡಲು ನಿರ್ಧರಿಸಿದೆ.

ನಾಮಪತ್ರ ಸಲ್ಲಿಕೆ ಜೂನ್ 9 ರವರೆಗೆ ನಡೆಯಲಿದೆ. ಮರುದಿನ ಪರಿಶೀಲನೆ ನಡೆಯಲಿದೆ. ನಂತರ ಜೂನ್ 19 ರಂದು ಮತದಾನ ನಡೆದು ಅದೇ ದಿನ ಸಂಜೆ ಫಲಿತಾಂಶ ಪ್ರಕಟವಾಗಲಿದೆ.

ಹಿರಿಯ ವಕೀಲ ಪಿ ವಿಲ್ಸನ್, ಕವಿ ಮತ್ತು ಬರಹಗಾರ್ತಿ ಸಲ್ಮಾ ಮತ್ತು ಮಾಜಿ ಸಚಿವ ಎಸ್.ಆರ್. ಶಿವಲಿಂಗಂ ಸೇರಿದಂತೆ ಮೂವರು ಇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ತಮಿಳುನಾಡಿನ ಆರು ರಾಜ್ಯಸಭಾ ಸದಸ್ಯರು ಜುಲೈ 24, 2025 ರಂದು ನಿವೃತ್ತರಾಗಲಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಡಿಎಂಕೆ 4 ಸ್ಥಾನಗಳನ್ನುನಿರಾಯಾಸವಾಗಿ ಗೆಲ್ಲಬಹುದು. ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಬಿಜೆಪಿ ಸೇರಿದಂತೆ ಮಿತ್ರಪಕ್ಷಗಳ ಬೆಂಬಲದೊಂದಿಗೆ 2 ಸ್ಥಾನಗಳನ್ನು ಗೆಲ್ಲಬಹುದು.

ಕನ್ನಡ ಭಾಷೆ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬುದಾಗಿ ಹೇಳಿದ್ದ ಕಮಲ್‌ ಹಾಸನ್‌ ವಿರುದ್ಧ ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ ವಾಗ್ದಾಳಿ ನಡೆಸಿ ಯಾರ ಭಾವನೆಗಳನ್ನು ನೋಯಿಸುವ ಹಕ್ಕು ನಿಮಗಿಲ್ಲ ಎಂದು ಎಚ್ಚರಿಕೆ ನೀಡಿದೆ. ಕಮಲ್‌ ಹಾಸನ್‌ ನಟನೆಯ ಥಗ್ ಲೈಫ್ ಚಿತ್ರದ ಬಿಡುಗಡೆಯನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ. ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲು ನಿರಾಕರಿಸಿದ್ದಾರೆ.

Related Posts

Leave a Reply

Your email address will not be published. Required fields are marked *