Thursday, January 30, 2025
Menu

ಕಬಡ್ಡಿ: ಬೆಂಗಳೂರು ಬುಲ್ಸ್ ಗೆ ಕನ್ನಡಿಗ ರಮೇಶ್ ಕೋಚ್

ಬೆಂಗಳೂರು: ಪ್ರೋ ಕಬಡ್ಡಿ ಲೀಗಲ್ಲಿ ಮುಖ್ಯ ತರಬೇತುದಾರ ಹುದ್ದೆಯಿಂದ ರಣಧೀರ್ ಸಿಂಗ್ ಸೆಹ್ರಾವತ್ ಅವರನ್ನು ಬೆಂಗಳೂರು ಬುಲ್ಸ್ ಫ್ರಾಂಚೈಸಿ ಬಿಡುಗಡೆಗೊಳಿಸಿದೆ.

2018-19ರಲ್ಲಿ ಬುಲ್ಸ್ ತಂಡದ ಸಹಾಯಕ ಕೋಚ್ ಆಗಿದ್ದ ಅಪ್ಪಟ ಕನ್ನಡಿಗ ಬಿ.ಸಿ.ರಮೇಶ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.

ಬೆಂಗಾಲ್ ವಾರಿಯರ್ಸ್ (ಸೀಸನ್ 7) ಮತ್ತು ಪುಣೇರಿ ಪಲ್ಟನ್ (ಸೀಸನ್ 10) ತಂಡಗಳನ್ನು ಮುನ್ನಡೆಸಿದ ರಮೇಶ್, ಎರಡು ಯಶಸ್ವಿ ಪ್ರದರ್ಶನಗಳ ನಂತರ ಬೆಂಗಳೂರಿಗೆ ಮರಳಿದ್ದಾರೆ.

ಈ ಕುರಿತು ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾಹಿತಿ ನೀಡಿರುವ ಬೆಂಗಳೂರು ಬುಲ್ಸ್ ಫ್ರಾಂಚೈಸಿ, ’ತಂಡದ ಅವಿಭಾಜ್ಯ ಅಂಗವಾಗಿದ್ದ ರಣಧೀರ್ ಸಿಂಗ್ ಅವರ ಸಮರ್ಪಣೆಯು ನಾವು ಒಟ್ಟಾಗಿ ಆಚರಿಸಿದ ಯಶಸ್ಸು ಮತ್ತು ಸಾಧನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಬಣ್ಣಿಸಿದೆ.

ಸುದೀರ್ಘ ಕೋಚಿಂಗ್ ಪಯಣದಲ್ಲಿ ಪಿಕೆಎಲ್ ಮ್ಯಾನೇಜ್ಮೆಂಟ್, ಬೆಂಗಳೂರು ಬುಲ್ಸ್ ಫ್ರಾಂಚೈಸಿಯ ಸಹಕಾರ ಹಾಗೂ ತಂಡದ ಆಟಗಾರರು ತಮ್ಮ ಮೇಲಿರಿಸಿದ ನಂಬಿಕೆಗೆ ಧನ್ಯವಾದ ಸೂಚಿಸಿರುವ ರಣಧೀರ್ ಸಿಂಗ್, ಫ್ರಾಂಚೈಸಿಯ ಮುಂದಿನ ಪಯಣಕ್ಕೆ ಶುಭ ಕೋರಿದ್ದಾರೆ.

ಉದ್ಘಾಟನಾ ಋತುವಿನಿಂದಲೂ ರಣಧೀರ್ ತಂಡದ ಚುಕ್ಕಾಣಿ ಹಿಡಿದಿದ್ದರು, ಸ್ಪರ್ಧೆಯ 6ನೇ ಆವೃತ್ತಿಯಲ್ಲಿ ಅದರ ಮೊದಲ ಪ್ರಶಸ್ತಿಗೆ ಕಾರಣರಾದರು. ಅವರ ನಾಯಕತ್ವದಲ್ಲಿ ಬುಲ್ಸ್ 11ಋತು ಆಡಿದೆ.

 

Related Posts

Leave a Reply

Your email address will not be published. Required fields are marked *