Menu

ಜರ್ನಲಿಸ್ಟ್‌, ಆರ್​ಟಿಐ ಕಾರ್ಯಕರ್ತನ ಹತ್ಯೆ

ಉತ್ತರ ಪ್ರದೇಶದ ಸೀತಾಪುರದ ಲಕ್ನೋ-ದೆಹಲಿ ಹೆದ್ದಾರಿಯಲ್ಲಿ ದುಷ್ಕರ್ಮಿಗಳು ಪತ್ರಕರ್ತನ ಬೈಕ್‌ಗೆ ಡಿಕ್ಕಿ ಹೊಡೆದು ಬಳಿಕ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತ ರಾಘವೇಂದ್ರ ಬಾಜ್‌ಪೈ ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರ.

ರಾಘವೇಂದ್ರ ಆರ್​ಟಿಐ ಕಾರ್ಯಕರ್ತ ಕೂಡ ಆಗಿದ್ದರು. ದುಷ್ಕರ್ಮಿಗಳು ಮೊದಲು ಅವರ ಬೈಕ್‌ಗೆ ಡಿಕ್ಕಿ ಹೊಡೆದು ನಂತರ ಮೂರು ಬಾರಿ ಗುಂಡು ಹಾರಿಸಿದ್ದಾರೆ. ಇದನ್ನು ಮೊದಲು ಅಪಘಾತವೆಂದು ಪರಿಗಣಿಸಲಾಗಿತ್ತು ಜಿಲ್ಲಾ ಆಸ್ಪತ್ರೆಯ ವೈದ್ಯರು ದೇಹದೊಳಗೆ ಮೂರು ಗುಂಡು ಪತತೆ ಹಚ್ಚಿದ ಬಳಿಕ ಕೊಲೆ ಪ್ರಕರಣ ಎಂದು ದೃಢಪಟ್ಟಿತ್ತು.

ಪೋನ್‌ ಕರೆ ಬಂದ ನಂತರ 35 ವರ್ಷದ ಪತ್ರಕರ್ತ ರಾಘವೇಂದ್ರ ಮನೆಯಿಂದ ಮಧ್ಯಾಹ್ನ ಹೊರ ಹೋಗಿದ್ದರು. ಸ್ವಲ್ಪ ಸಮಯದ ನಂತರ ಹೆದ್ದಾರಿಯಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ತಿಲೀದು ಬಂದಿಲ್ಲ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಅವರ ಕುಟುಂಬದಿಂದ ದೂರು ಸಲ್ಲಿಕೆಗೆ ಅಧಿಕಾರಿಗಳು ಕಾಯುತ್ತಿದ್ದಾರೆ.

ಆರೋಪಿಗಳನ್ನು ಬಂಧಿಸಲು ಪೊಲೀಸರ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಹೋಲಿ, ಇಮಾಲಿಯಾ ಮತ್ತು ಕೊತ್ವಾಲಿಯ ಪೊಲೀಸ್ ತಂಡಗಳು, ಕಣ್ಗಾವಲು ಮತ್ತು ಎಸ್‌ಒಜಿ ತಂಡಗಳನ್ನು ನಿಯೋಜಿಸಲಾಗಿದೆ.

Related Posts

Leave a Reply

Your email address will not be published. Required fields are marked *