ತುಮಕೂರು
ಕೂಲಿ ಕೆಲಸಕ್ಕೆಂದು ಬೆಂಗಳೂರಿಗೆ ಬರುತ್ತಿದ್ದವರು ರಸ್ತೆ ಅಪಘಾತಕ್ಕೆ ಬಲಿ
ಶಿರಾದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48 ರಲ್ಲಿರುವ ಎಮ್ಮೇರಹಳ್ಳಿ ಬ್ರಿಡ್ಜ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ವಾಹನ ಲಾರಿಗೆ ಡಿಕ್ಕಿ ಆಗಿದ್ದು, ಕ್ರೂಸರ್ ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ. ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಚಾಲಕ ಬಸವರಾಜು (40), ಸುರೇಶ್ (28) ಮೃತಪಟ್ಟವರು. ಗಾಯಾಳುಗಳನ್ನು ಶಿರಾ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೂಲಿ ಕೆಲಸ ಮಾಡಲು ಬೆಂಗಳೂರಿನತ್ತ ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದರು. ಈ
ಶಾಲೆಗೆ ಹೋಗಬೇಕೆಂಬ ಧಾವಂತದಲ್ಲಿ ಮನೆಗೆ ಹೊರಟಿದ್ದ ತಾಯಿ ಮಕ್ಕಳು ಅಪಘಾತಕ್ಕೆ ಬಲಿ
ತುಮಕೂರು ತಾಲೂಕಿನ ಓಬಳಾಪುರ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮಹಮ್ಮದ್ ಆಸೀಫ್ (12), ಮಮ್ತಾಜ್ (38), ಶಾಖಿರ್ ಹುಸೇನ್ (18) ಮೃತ ದುರ್ದೈವಿಗಳು. ಮೃತರು ಮಧುಗಿರಿ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ದೂರುದಾರೆ ಜೊತೆ ಅಸಭ್ಯವಾಗಿ ವರ್ತಿಸಿದ ಡಿವೈಎಸ್ಪಿ ಅರೆಸ್ಟ್
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಬಂದ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪಿ, ತುಮಕೂರಿನ ಮಧುಗಿರಿ ಡಿವೈಎಸ್‌ಪಿ ರಾಮಚಂದ್ರ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿದ ಬಳಿಕ ಬಂಧಿಸಲಾಗಿದೆ. ಪ್ರಕರಣದ ವೀಡಿಯೊ ವೈರಲ್ ಆಗುತ್ತಿದ್ದಂತೆ ಆರೋಪಿ ರಾಮಚಂದ್ರ ತಲೆ
ಗೃಹಸಚಿವರ ತವರಲ್ಲಿ ಮಹಿಳೆ ಜೊತೆ ಡಿವೈಎಸ್ಪಿ ಅಸಭ್ಯ ವರ್ತನೆ
ದೂರು ನೀಡಲು ಬಂದ ಮಹಿಳೆಯ ಜೊತೆ ಮಧುಗಿರಿ ಉಪವಿಭಾಗದ ಡಿವೈಎಸ್ಪಿ ರಾಮಚಂದ್ರಪ್ಪ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ರಾಜ್ಯದ ಗೃಹ ಸಚಿವ ಜಿ. ಪರಮೇಶ್ವರ್ ತವರು ಜಿಲ್ಲೆಯ ಡಿವೈಎಸ್ಪಿ ರಾಮಚಂದ್ರಪ್ಪ ಅವರ ಅಸಭ್ಯ ವರ್ತನೆಯ ವಿಡಿಯೋ