ಜಿಲ್ಲಾ ಸುದ್ದಿ
ಬಿಜೆಪಿ ಸಂಸದರು ರಾಜ್ಯದ ನೀರಾವರಿ ಯೋಜನೆಗಳು, ಅನುದಾನಗಳ ಬಗ್ಗೆ ಬಾಯಿ ಬಿಡಲಿ: ಡಿಸಿಎಂ
“ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಅನುದಾನ, ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಅನುಮತಿ ಸೇರಿದಂತೆ ಕರ್ನಾಟಕದ ಪರವಾಗಿ ಬಿಜೆಪಿ ಸಂಸದರು ಬಾಯಿ ಬಿಡಬೇಕು. ಇಲ್ಲದಿದ್ದರೆ ರಾಜಿನಾಮೆ ನೀಡಿ ಮರು ಚುನಾವಣೆ ಎದುರಿಸಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲೆಸೆದರು. ಲಕ್ಕವಳ್ಳಿಯ ಭದ್ರಾ ಅಣೆಕಟ್ಟು ಬಾಗಿನ ಅರ್ಪಣೆ ಬಳಿಕ ಐಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಎಂ ಮಾತನಾಡಿದರು. “ಬಿಜೆಪಿ ಸಂಸದರು ಒಂದೇ ಒಂದು ದಿನವೂ ಪ್ರಧಾನಿಯವರನ್ನು, ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿಲ್ಲ. ಸಚಿವರಾದ ಪ್ರಹ್ಲಾದ್
ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ: ಡಿಸಿಎಂ
“ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು. ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪರಿವೀಕ್ಷಣೆ
ಪತ್ನಿ, ಮಕ್ಕಳು ತೊರೆದಿರುವ ನೋವು: ಮಾಂಜ್ರಾ ನದಿಗೆ ಹಾರಿದ ವ್ಯಕ್ತಿ
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಲಸಿತೂಗಾಂವ್ ಗ್ರಾಮದ ಬಳಿ ಕೆಲವು ವರ್ಷದ ಹಿಂದೆ ಮಕ್ಕಳು ಮತ್ತು ಹೆಂಡತಿ ಬಿಟ್ಟು ಹೋಗಿದ್ದಕ್ಕೆ ನೊಂದಿದ್ದ ವ್ಯಕ್ತಿ ಕುಡಿತದ ಚಟಕ್ಕೆ ದಾಸನಾಗಿದ್ದು, ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ ಹಾರಿದ್ದಾನೆ. ವ್ಯಕ್ತಿಯು ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ
ಮಂಡ್ಯದ ಗಾಂಧಿನಗರದಲ್ಲಿ ಹಿಂದೂ -ಮುಸ್ಲಿಮರಿಂದ ಅದ್ಧೂರಿ ಗಣೇಶ ವಿಸರ್ಜನೆ
ಮಂಡ್ಯದ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಿದ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡು ಪ್ರತಿಭಟನೆ, ಲಾಠಿ ಚಾರ್ಜ್ ಮೂಲಕ ಸುದ್ದಿಯಾಗಿ ರಾಜಕೀಯ ಪಕ್ಷಗಳ ಮೇಲಾಟಕ್ಕೂ ವೇದಿಕೆಯಾಗಿ ಪರಿಣಮಿಸಿತ್ತು. ಅದೇ ಮಂಡ್ಯದ ಗಾಂಧಿನಗರದಲ್ಲಿ ಜೈ ಭೀಮ್ ಗೆಳಯರ ಬಳಗದಿಂದ ಆಯೋಜಿಸಲಾಗಿದ್ದ ಗಣೇಶೋತ್ಸವದ
ಹಿಂದೂ ಧರ್ಮದ ಮೂಢನಂಬಿಕೆಗಳ ವಿರೋಧ ಲಿಂಗಾಯತ ಧರ್ಮದ ವೈಶಿಷ್ಟ್ಯತೆ
ಬೆಳಗಾವಿ ನಗರದ ಆರ್.ಎನ್. ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ “ಬಸವ ಸಂಸ್ಕೃತಿ ಅಭಿಯಾನ” ಕಾರ್ಯಕ್ರಮ ನಡೆಯಿತು. ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, “ಹಿಂದೂ ಧರ್ಮ ಎನ್ನುವುದು ಧರ್ಮವಲ್ಲ, ಅದು ಒಂದು ಜೀವನ ಪದ್ಧತಿ. ಆದರೆ, ಲಿಂಗಾಯತ
ಹಾಸನದಲ್ಲಿ ಪತ್ನಿಯನ್ನು ತವರಿಗೆ ಕರೆದೊಯ್ದ ಅತ್ತೆಯ ಕೊಲೆ ಮಾಡಿದ ಅಳಿಯ
ಹಾಸನ ಜಿಲ್ಲೆಯ ರಾಮನಾಥಪುರದಲ್ಲಿ ಪತ್ನಿಯನ್ನು ತವರುಮನೆಗೆ ಕರೆದುಕೊಂಡು ಹೋದ ಕಾರಣಕ್ಕೆ ಸಿಟ್ಟಿಗೆದ್ದ ಅಳಿಯನೊಬ್ಬ ಅತ್ತೆಯನ್ನು ಹತ್ಯೆ ಮಾಡಿದ್ದಾನೆ. ಫೈರೋಜಾ (58) ಕೊಲೆಯಾದ ಅತ್ತೆ. ರಸೂಲ್ ಕೊಲೆಗಾರ ಅಳಿಯ. ರಾಮನಾಥಪುರ ನಿವಾಸಿ ಫೈರೋಜಾ ತನ್ನ ಮಗಳು ಶೆಮಿನಾ ಬಾನು ಎಂಬಾಕೆಯನ್ನು ರಸೂಲ್‌ಗೆ ಮದುವೆ
ಹುಣಸೂರಿನಲ್ಲಿ ಪರಿಹಾರ ಹಣಕ್ಕಾಗಿ ಪತಿಯ ಹತ್ಯೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿದ್ದ ಪತ್ನಿ ಅರೆಸ್ಟ್
ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರಿನಲ್ಲಿ ಪತಿಯನ್ನು ಹತ್ಯೆ ಮಾಡಿ ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ನಂಬಿಸಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಲ್ಲಾಪುರಿ ಎಂಬಾಕೆ ವಿಷ ಹಾಕಿ ಪತಿ ವೆಂಕಟಸ್ವಾಮಿಯನ್ನು ಕೊಲೆ ಮಾಡಿದ ಬಳಿಕ ನಾಟಕವಾಡಿದ್ದಾಳೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಪರಿಹಾರ
ಶಿಕಾರಿಪುರದಲ್ಲಿ ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಜೋಡಿ ಅಪಘಾತಕ್ಕೆ ಬಲಿ
ಶಿಕಾರಿಪುರ ತಾಲೂಕಿನ ಅಂಬಾರಕೊಪ್ಪ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಕಳೆದ ತಿಂಗಳು ನಿಶ್ಚಿತಾರ್ಥ ಆಗಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದ ಜೋಡಿ ಮೃತಪಟ್ಟಿದೆ. ಬೈಕ್ನಲ್ಲಿ ತೆರಳುತ್ತಿರುವಾಗ ಅಪಘಾತ ಸಂಭವಿಸಿದ್ದು, ಬಸವನಗೌಡ (24) ಹಾಗೂ ರೇಖಾ (22) ಮೃತಪಟ್ಟವರು. ಈ ಜೋಡಿಗೆ ಶ್ರಾವಣ ಮಾಸದಲ್ಲಿ ನಿಶ್ಚಿತಾರ್ಥವಾಗಿತ್ತು.
ತುಮಕೂರಿನಲ್ಲಿ ನೀರಿನ ಜಗಳ: ವ್ಯಕ್ತಿ ಮೇಲೆ ವಾಹನ ಚಲಾಯಿಸಿ ಕೊಂದು ಪೊಲೀಸರಿಗೆ ಶರಣಾದ ಆರೋಪಿ
ತುಮಕೂರು ಜಿಲ್ಲೆಯ ಕೊಡಿಗೇನಹಳ್ಳಿ ಹೋಬಳಿಯ ಪೊಲೇನಳ್ಳಿಯಲ್ಲಿ ನೀರಿನ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯ ಕೊಲೆಯಲ್ಲಿ ಅಂತ್ಯ ಕಂಡಿದೆ. ಗೂಡ್ಸ್ ವಾಹನ ಚಲಾಯಿಸಿ ಆನಂದ ಎನ್ನುವ ವ್ಯಕ್ತಿಯನ್ನು ನಾಗೇಶ ಎಂಬಾತ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ
ಕೊಪ್ಪದಲ್ಲಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ
ಚಿಕ್ಕಮಗಳೂರಿನ ಕೊಪ್ಪ ತಾಲೂಕು ನಿಲುಬಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡ್ತಾಳ್ ಗ್ರಾಮದಲ್ಲಿ ನೇಣು ಬಿಗಿದುಕೊಂಡು ದ್ವಿತೀಯ ಪಿಯುಸಿ ವಿದ್ಯಾರ್ಥಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಕೊಪ್ಪ ಪಟ್ಟಣದ ಜಿಜೆಸಿ ಕಾಲೇಜಿನ ದ್ವಿತೀಯ ವರ್ಷದ ಪಿಯುಸಿ ವಿದ್ಯಾರ್ಥಿಯಾಗಿದ್ದ. ಬೆಳಿಗ್ಗೆ




