ಜಿಲ್ಲಾ ಸುದ್ದಿ
ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ತಾರೆ: ಆರ್. ಅಶೋಕ
ರಾಜ್ಯದ ಅಧಿಕಾರ ಹಂಚಿಕೆ ಸಂಬಂಧ ಒಪ್ಪಂದ ಆಗಿರುವುದು ನಿಜ. ನವೆಬರ್, ಡಿಸೆಂಬರ್ ತಿಂಗಳಲ್ಲಿ ಕ್ರಾಂತಿ ಅಂದಿದ್ದ ಒಬ್ಬರು ಸಚಿವರು ಮನೆಗೆ ಹೋಗಿದ್ದಾರೆ. ಒಪ್ಪಂದ ಆಗಿರುವುದು ನಿಜ. ಈಗ ಜಗಳ ಆರಂಭವಾಗಿದೆ ನವೆಂಬರ್-ಡಿಸೆಂಬರ್ ಒಳಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವುದು ನೂರಕ್ಕೆ ನೂರರಷ್ಟು ನಿಜ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುತ್ತಿಲ್ಲ, ಡಿಕೆ ಶಿವಕುಮಾರ್ ಹಠ ಬಿಡುತ್ತಿಲ್ಲ. ಕಾಂಗ್ರೆಸ್ ಜಗಳದಲ್ಲಿ ಸರ್ಕಾರ ಪತನವಾದರೆ
ಮಾಲೂರಿನಲ್ಲಿ ಬಾಲಕಿಯ ಜೀವ ತೆಗೆದ ನಕಲಿ ವೈದ್ಯನ ಚಿಕಿತ್ಸೆ
ಕೋಲಾರದ ಮಾಲೂರಿನ ದೊಡ್ಡಿಗ್ಗಲೂರು ಗ್ರಾಮದಲ್ಲಿ ಎಂಟು ವರ್ಷದ ಬಾಲಕಿ ಈ ನಕಲಿ ವೈದ್ಯರ ಚಿಕಿತ್ಸೆಗೆ ಪ್ರಾಣ ಕಳೆದುಕೊಂಡಿದ್ದಾಳೆ. ಜ್ವರ ಎಂದು ಆಸ್ಪತ್ರೆಗೆ ಹೋದ ಮಗುವಿಗೆ ನೀಡಿದ ಇಂಜೆಕ್ಷನ್ನಿಂದಲೇ ಮಗು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಗೆ ಚಿಕಿತ್ಸೆ
ತುಮಕೂರಿನಲ್ಲಿ ಮಗಳ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಮಾನಸಿಕ ಅಸ್ವಸ್ಥ ತಾಯಿ
ತುಮಕೂರಿನ ಮೆಗ್ಗಾನ್ ಆಸ್ಪತ್ರೆ ಕ್ವಾರ್ಟಸ್‌ನಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ತನ್ನ ಹನ್ನೊಂದು ವರ್ಷದ ಮಗಳನ್ನು ಕೊಲೆ ಮಾಡಿದ ಬಳಿಕ ತಾನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 11 ವರ್ಷದ ಪೂರ್ವಿಕ ಕೊಲೆಯಾಗಿರುವ ಮಗು, 38 ವರ್ಷದ ಶೃತಿ ಮಗಳ ಕೊಲೆಗೈದು ಆತ್ಮಹತ್ಯೆ
ದಸರಾದಲ್ಲಿ ಜೀಪ್ ಪರೇಡ್: ಸಿಎಂ, ಡಿಸಿಎಂ ಜತೆಗಿದ್ದ ಬಾಲಕ ಯಾರು?
ನಾಡಹಬ್ಬ ದಸರಾ ಸರ್ಕಾರಿ ಕಾರ್ಯಕ್ರಮ, ಈ ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಕುಟುಂಬದವರು ಭಾಗಿಯಾಗಿರುವ ಕಾರಣಕ್ಕೆ ಕಾಂಗ್ರೆಸ್ ಹೈ ಕಮಾಂಡ್‌ಗೆ ದೂರು ಸಲ್ಲಿಕೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಮೈಸೂರಿನಲ್ಲಿ ಸಿಎಂ ಹಾಗೂ ಡಿಸಿಎಂ ತೆರೆದ ಜೀಪ್‌ನಲ್ಲಿ ಗುರುವಾರ
ಇನ್ಸುರೆನ್ಸ್ ಹಣ ಪಡೆಯಲು ಸಂಚು: ಹೊಸಪೇಟೆಯ ವೃದ್ಧನ ಕೊಲೆಗೈದ ಗ್ಯಾಂಗ್ ಅರೆಸ್ಟ್
ಹೊಸಪೇಟೆ ಹೊರವಲಯದಲ್ಲಿ ವಂಚಕರ ಗ್ಯಾಂಗೊಂದು 5.20 ಕೋಟಿ ರೂ. ಇನ್ಶೂರೆನ್ಸ್ ಹಣವನ್ನು ಪಡೆದುಕೊಳ್ಳುವ ಸಂಚು ರೂಪಿಸಿ ಅದಕ್ಕಾಗಿ ವ್ಯಕ್ತಿಯನ್ನು ಕೊಲೆ ಮಾಡಿ ಅಪಘಾತವೆಂದು ಬಿಂಬಿಸಿದ ಘಟನೆ ನಡೆದಿದ್ದು, ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ. ಹೊಸಪೇಟೆ ಕೌಲ್ ಪೇಟೆಯ ನಿವಾಸಿ ಗಂಗಾಧರ ಕೊಲೆಯಾಗಿರುವ
ಹುಣಸೂರಿನಲ್ಲಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಪ್ರಿಯಕರನೊಂದಿಗೆ ಸರಸ: ಗಂಡನಿಂದಲೇ ಪತ್ನಿಯ ಕೊಲೆ
ಮೈಸೂರಿನ ಹುಣಸೂರು ತಾಲೂಕು ಮೂಕನಹಳ್ಳಿಯಲ್ಲಿ ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟು ಪ್ರಿಯಕರನೊಂದಿಗೆ ಸರಸವಾಡುತ್ತಿದ್ದ ಪತ್ನಿಯನ್ನು ಗಂಡನೇ ಕೊಲೆಗೈದಿರುವ ಘಟನೆ ನಡೆದಿದೆ. ಮೂಕನಹಳ್ಳಿಯಲ್ಲಿ ಗೀತಾ ಎಂಬಾಕೆಯ ಗಂಡ ವಿಜಯ್ ಕೊಲೆ ಆರೋಪಿ. ಗೀತಾ ಪ್ರಿಯಕರ ದಿಲೀಪ್ ಜೊತೆ ಓಡಾಡುತ್ತಿದ್ದಳು ಎನ್ನುವ ಆರೋಪವಿದೆ. ಪ್ರಿಯಕರನ
ಬಿಜೆಪಿಯ ಆತ್ಮವಂಚನೆಯ ಪ್ರತಿಭಟನೆ ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ ನಡೆಸುವುದು ಹಾಸ್ಯಸ್ಪದವಾಗಿದೆ. ಬಿಜೆಪಿಯ ಈ ಆತ್ಮವಂಚನೆಯ ಪ್ರತಿಭಟನೆಗಳು ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹರಿಹಾಯ್ದಿದ್ದಾರೆ. ತಮ್ಮ ”
ಹಾಸನದ ಮನೆಯಲ್ಲಿ ಸ್ಫೋಟದಿಂದ ಗಾಯಗೊಂಡಿದ್ದ ದಂಪತಿ ಸಾವು
ಹಾಸನದ ಹಳೇಆಲೂರು ಪಟ್ಟಣದ ಮನೆಯೊಂದರಲ್ಲಿ ನಡೆದ ನಿಗೂಢ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುದರ್ಶನ್ (32), ಕಾವ್ಯ (27) ಮೃತಪಟ್ಟ ದಂಪತಿ. ಘಟನೆಯಲ್ಲಿ ಗಾಯಗೊಂಡಿದ್ದ ದಂಪತಿಯನ್ನು ಸೋಮವಾರ ರಾತ್ರಿ ಹಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಬಳಿಕ
ಕಲ್ಯಾಣ ಕರ್ನಾಟಕದಲ್ಲಿ ಮಳೆ ಹಾನಿ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ
ಕಲಬುರಗಿ ವಿಮಾನ ನಿಲ್ದಾಣಲ್ಲೇ ಪ್ರಾಥಮಿಕ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳ ಅಧಿಕಾರಿಗಳು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರವಾಹ ಹಾನಿ ವಿವರಗಳನ್ನು ಪಡೆದುಕೊಂಡರು. ಕಲಬುರಗಿ, ಬೀದರ್, ಯಾದಗಿರಿ ಹಾಗೂ ವಿಜಯಪುರ ಜಿಲ್ಲಾ ಅಧಿಕಾರಿಗಳು ಮತ್ತು
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್
ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 1 ವರ್ಷದ ಅವಧಿಗೆ ಗಡಿಪಾರು ಮಾಡಿದ್ದ ಆದೇಶಕ್ಕೆ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಮಹೇಶ್ ಶೆಟ್ಟಿ ತಿಮರೋಡಿಯನ್ನು 1



