Menu

ಕೋಲಾರದಲ್ಲಿ ಶಿಕ್ಷಕಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂ. ವಂಚಿಸಿದ ದಂಪತಿ ಆರೆಸ್ಟ್‌

ಕೋಲಾರದ ಮಾಲೂರಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂಪಾಯಿ ವಂಚನೆ ಮಾಡಿರುವ ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ‌ ನಡೆಸಿ ವಂಚಕ ದಂಪತಿಯನ್ನು ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರಾಧ/ಪಾವನ ಹಾಗೂ ಸತೀಶ್ ಬಂಧಿತರು. ದಂಪತಿ ನಕಲಿ ಮೀಶೊ ಗಿಫ್ಟ್‌ ಕಾರ್ಡ್‌ ಕಳಿಸಿ ಅದರಲ್ಲಿ 10,50,000 ರೂ., 150 ಗ್ರಾಂ ಚಿನ್ನ, ಎರಡು ಐಪೋನ್ ಗೆದ್ದಿರುವುದಾಗಿ ಶಿಕ್ಷಕಿಯನ್ನು ನಂಬಿಸಿದ್ದರು. ಮೊದಲಿಗೆ ಪ್ರೊಸೆಸಿಂಗ್

ಎಸ್ಟಿಗಳಿಗೆ ಹಕ್ಕು ಪತ್ರ ವಿತರಣೆಗೆ ತೊಡಕು: ಸಚಿವ ಸಂತೋಷ್‌ ಲಾಡ್‌ ಚರ್ಚೆ

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಅಳ್ನಾವರ ಹಾಗೂ ಕಲಘಟಗಿ ಕಂದಾಯ ಉಪ ಗ್ರಾಮಗಳಲ್ಲಿನ ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರಗಳ ವಿತರಣೆಗೆ ಉಂಟಾಗಿರುವ ತೊಂದರೆಗಳ ಬಗ್ಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು ಬೆಂಗಳೂರು  ವಿಕಾಸಸೌಧದಲ್ಲಿ

‘ಬೃಹತ್ ಮೈಸೂರು ಮಹಾನಗರ ಪಾಲಿಕೆ’ ಘೋಷಣೆಗೆ ಸಚಿವ ಸಂಪುಟ ನಿರ್ಣಯ

ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಸೆಕ್ಷನ್-3, 4, 500 ಮತ್ತು 501ರನ್ವಯ ಶೆಡ್ಯೂಲ್-ಎ”ನಲ್ಲಿ ಒಳಗೊಂಡ ಪ್ರದೇಶಗಳನ್ನು ಶೆಡ್ಯೂಲ್-ಬಿ ಯಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಹಾಲಿ ಮೈಸೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಲು ಹಾಗೂ ಒಟ್ಟಾರೆ ಪ್ರದೇಶವನ್ನು ‘ಬೃಹತ್ ಮೈಸೂರು

ಡಿಕೆ.ಶಿವಕುಮಾರ್ ಸಿಎಂ ಆಗಲಿ ಎಂದು ನಾಡದೇವತೆ ಚಾಮುಂಡೇಶ್ವರಿಗೆ ಅಭಿಮಾನಿಗಳು ಮೊರೆ

ಮೈಸೂರು: ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ‌ ಕುರ್ಚಿ ಚರ್ಚೆ ಕೂತೂಹಲ ಘಟ್ಟ ತಲುಪಿರುವ ಈ ಸನ್ನಿವೇಶದಲ್ಲಿ ಡಿಸಿಎಂ‌ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಜೆಡಿಎಸ್, ಬಿಜೆಪಿಯ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ತವರಿನಲ್ಲೇ ಭಕ್ತರು ಚಾಮುಂಡೇಶ್ವರಿ ಮೊರೆ ಹೋಗಿದ್ದಾರೆ. ಮಂಡ್ಯ ಜಿಲ್ಲೆಯ ಡಿಕೆ

ಗೋಮಾಂಸ ರಫ್ತಿನಲ್ಲಿ ದೇಶಕ್ಕೆ 2ನೇ ಸ್ಥಾನ ತಂದ ಪಿಎಂ ಮೋದಿ: ವಿಶ್ವ ಗೋರಕ್ಷಾ ಪೀಠದ ದಯಾನಂದ ಸ್ವಾಮೀಜಿ ಕಿಡಿ

ಪ್ರಧಾನಿ ನರೇಂದ್ರ ಮೋದಿಯ ಆಡಳಿತದಲ್ಲಿ ಹಿಂದೆಂದಿಗಿಂತ ಅಧಿಕ ಗೋಮಾಂಸವನ್ನು ಭಾರತದಿಂದ ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ನಮ್ಮ ದೇಶ ಗೋಮಾಂಸ ರಫ್ತಿನಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ  ಕಿಡಿ

ತಂಗಿಯ ಆರತಕ್ಷತೆ ಸಂಭ್ರಮದಲ್ಲಿದ್ದ ಯುವಕರಿಬ್ಬರು ಬೇಲೂರಿನಲ್ಲಿ ಅಪಘಾತಕ್ಕೆ ಬಲಿ

ಬೇಲೂರು ತಾಲೂಕಿನ ಮುತ್ತಗನ್ನೆ ಗ್ರಾಮದ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬೇಲೂರು ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25),‌ ಚಿಕ್ಕಮಗಳೂರು ಮೇನಹಳ್ಳಿ ಗ್ರಾಮದ ಕಿರಣ್ (32) ಮೃತಪಟ್ಟ ಯುವಕರು. ಗುರುವಾರ (ಇಂದು) ಲೋಕೇಶ್ ತಂಗಿ

ಕೋಲಾರದಲ್ಲಿ ಆರ್‌ಟಿಒದಿಂದ ಖಾಸಗಿ ಬಸ್‌ಗಳ ಸೀಜ್‌, ಕೋಟಿಗೂ ಅಧಿಕ ದಂಡ ವಸೂಲಿ

ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಾರಾಜ್ಯ ಖಾಸಗಿ ಬಸ್‌ಗಳನ್ನು ಕೋಲಾರದಲ್ಲಿ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿರುವ ಬಸ್‌ಗಳನ್ನು ಸೀಜ್‌ ಮಾಡಿದ್ದು, ಒಂದು ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಆಂಧ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ

ಪೋಕ್ಸೋ ಪ್ರಕರಣ: ಮುರುಘಾ ಮಠದ ಮಾಜಿ ಪೀಠಾಧಿಪತಿ ಶಿವಮೂರ್ತಿ ಖುಲಾಸೆ

ಪೋಕ್ಸೋ ಪ್ರಕರಣದ ಆರೋಪಿ, ಚಿತ್ರದುರ್ಗ ಮುರುಘಾಮಠದ ಮಾಜಿ ಪೀಠಾಧಿಪತಿ  ಶಿವಮೂರ್ತಿ ಅವರನ್ನು ಎರಡನೇ  ಜಿಲ್ಲಾ ಅಪರ ಮತ್ತು ಸತ್ರ ಕೋರ್ಟ್‌ ಖುಲಾಸೆಗೊಳಿಸಿದೆ. ಸತತ ಮೂರು ವರ್ಷ ಪ್ರಕರಣದ ವಿಚಾರಣೆ ನಡೆದಿದೆ. ದಾವಣಗೆರೆಯ ವಿರಕ್ತ ಮಠದಿಂದ ಬಿಗಿ ಭದ್ರತೆಯಲ್ಲಿ ಆರೋಪಿ ಶಿವಮೂರ್ತಿ ಕೋರ್ಟ್‌ಗೆ

ಮಗುವಿಗೆ ಜನ್ಮವಿತ್ತ ಕೊಪ್ಪಳ ವಸತಿನಿಲಯದ ವಿದ್ಯಾರ್ಥಿನಿ

ಕೊಪ್ಪಳದ ಕುಕನೂರು ತಾಲೂಕಿನ ಶಾಲೆಯ ವಸತಿನಿಲಯದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಕುಕನೂರು ಪೋಲಿಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಹೊಟ್ಟೆನೋವಿನಿಂದ ನರಳಾಡಿದ್ದು ತಕ್ಷಣ ಕೊಪ್ಪಳದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ

ನಕಲಿ ನಂದಿನಿ ತುಪ್ಪ: ಕಿಂಗ್‌ಪಿನ್‌ ದಂಪತಿ ಅರೆಸ್ಟ್‌

ರಾಜ್ಯದಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಮತ್ತು ವಿತರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು ಈ ಅಕ್ರಮದ ಪ್ರಮುಖ ಸೂತ್ರಧಾರರಾದ ಮೈಸೂರಿನ ಗಂಡ ಮತ್ತು ಹೆಂಡತಿಯನ್ನು ಬಂಧಿಸಿದ್ದಾರೆ. ಶಿವಕುಮಾರ್ ಮತ್ತು ಪತ್ನಿ ರಮ್ಯಾ ಬಂಧಿತರಾಗಿದ್ದು, ಸಿಸಿಬಿ ಪೊಲೀಸರ