ಜಿಲ್ಲಾ ಸುದ್ದಿ
ಜೈಲಿಂದಲೇ ಕರೆ ಮಾಡಿ ಉದ್ಯಮಿಗೆ ಹರ್ಷ ಕೊಲೆ ಆರೋಪಿ ಧಮ್ಕಿ
ಶಿವಮೊಗ್ಗದ ಹರ್ಷನ ಕೊಲೆ ಆರೋಪಿ ಧಾರವಾಡ ಜೈಲಿನಲ್ಲಿದ್ದುಕೊಂಡು ಅಲ್ಲಿಂದಲೇ ಕರೆ ಮಾಡಿ ಉದ್ಯಮಿಗೆ ಧಮ್ಕಿ ಹಾಕುತ್ತಿರುವುದು ಬಯಲಾಗಿದೆ. ಹರ್ಷ ಕೊಲೆ ಪ್ರಕರಣದ ಆರೋಪಿ ರಿಯಾನ್ ಶರೀಫ್ ಶಿವಮೊಗ್ಗದ ಗುಜರಿ ಉದ್ಯಮಿ ಎ.ಎಸ್.ಅಶ್ವಕ್ ಉಲ್ಲಾ ಮತ್ತು ಅವರ ಅಳಿಯ ಅಸಾದುಲ್ಲಾರಿಗೆ ಕರೆ ಮಾಡಿ 50 ಲಕ್ಷ ರೂ. ನೀಡುವಂತೆ ಧಮ್ಕಿ ಹಾಕಿದ್ದಾನೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹರ್ಷ ಕೊಲೆ ಆರೋಪಿ ರಿಯಾನ್ ಶರೀಫ್ ಮತ್ತು ಸಾದಿಕ್
ಚಿತ್ರದುರ್ಗ ಆಟೋ ಡ್ರೈವರ್ ಹತ್ಯೆ: ಪತ್ನಿ, ಮಗನಿಂದ ಸುಪಾರಿ
ಚಿತ್ರದುರ್ಗ ನಗರದ ಆಟೋ ಡ್ರೈವರ್ ರವಿಕುಮಾರ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆಟೋ ಡ್ರೈವರ್ ಪತ್ನಿ ಮತ್ತು ಮಗ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಬಹಿರಂಗಗೊಳಿಸಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿ ಬೆಡ್ ಶೀಟ್ ನಲ್ಲಿ ಮೂಟೆ ಕಟ್ಟಿ
ಬಾಗಲಕೋಟೆ ಡಿಸಿ ಕಚೇರಿ ಎದುರು ಮುಂದುವರಿದ ಆಶಾ ಕಾರ್ಯಕರ್ತೆಯರ ಧರಣಿ
ಬಾಗಲಕೋಟೆಯ ಡಿಸಿ ಕಚೇರಿ ಎದುರು AIUTUC ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರ ಅಹೋ ರಾತ್ರಿ ಪ್ರತಿಭಟನೆ ಮುಂದುವರಿದಿದೆ. ಮೂರು ದಿನಗಳಿಂದ ಡಿಸಿ ಕಚೇರಿ ಮುಂಭಾಗ ಆಶಾ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದಾರೆ. ಮಾಸಿಕ ಕನಿಷ್ಠ 10 ಸಾವಿರ ವೇತನ ಹೆಚ್ಚಳ, ಆಶಾ ಸುಗಮಕಾರರನ್ನು
ಕಾರವಾರದಲ್ಲಿ ಶಾಸಕ ಸತೀಶ್ ಸೈಲ್ ಮನೆಗೆ ಇಡಿ ರೇಡ್
ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 12 ಪ್ಯಾರಾ ಮಿಲಿಟರಿ ಶಸಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ ದಾಳಿ ಮಾಡಿದೆ. ದಾಳಿ ವೇಳೆ
ಹಾಸನದಲ್ಲಿ ಆನೆ ಕಾರಿಡಾರ್: ಕೇಂದ್ರದ ಅನುಮತಿ ಸಿಗಬೇಕಿದೆ ಎಂದ ಸಚಿವ ಖಂಡ್ರೆ
ಹಾಸನದಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ರಾಜ್ಯ ಸರಕಾರ 53 ಕೋಟಿ ರೂ. ಅನುದಾನ ಒದಗಿಸಿದ್ದು, ಕೇಂದ್ರ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಚನ್ನರಾಯಪಟ್ಟಣದ ಬೆಲಸಿಂದ ಅರಣ್ಯ ಪ್ರದೇಶದಲ್ಲಿ ನವೀಕೃತ ಪ್ರಕೃತಿ ವನ ಉದ್ಘಾಟಿಸಿ ಮಾತನಾಡಿದರು.
ಕೆಎನ್ ರಾಜಣ್ಣ ಸಚಿವ ಸ್ಥಾನದಿಂದ ವಜಾ: ಮಧುಗಿರಿ ಪುರಸಭೆ ಸದಸ್ಯೆ ರಾಜೀನಾಮೆ, ಬೆಂಬಲಿಗರ ಪ್ರತಿಭಟನೆ
ಸಚಿವ ಸ್ಥಾನದಿಂದ ಕೆಎನ್ ರಾಜಣ್ಣ ಅವರ ವಜಾ ಖಂಡಿಸಿ ಮಧುಗಿರಿ ಪುರಸಭೆ ಸದಸ್ಯತ್ವಕ್ಕೆ ಮಧುಗಿರಿ 10ನೇ ವಾರ್ಡ್ ನ ಗಿರಿಜಾ ಮಂಜುನಾಥ್ ರಾಜೀನಾಮೆ ಸಲ್ಲಿಸಿದ್ದಾರೆ. ಸ್ವ ಇಚ್ಛೆಯಿಂದ ರಾಜೀನಾಮೆ ನೀಡರುವುದಾಗಿ ಪತ್ರದಲ್ಲಿ ಉಲ್ಲೇಖಿಸಿ ಮಧುಗಿರಿ ಉಪ ವಿಭಾಗಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಣ್ಣ
ಇಂಡಿಯಲ್ಲಿ ಬಾವಿಗೆ ಬಿದ್ದು ಬಾಲಕಿ ಸಾವು
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಧನಸಿಂಗ್ ತಾಂಡಾದಲ್ಲಿ ಆಟವಾಡಲು ಹೋಗಿ ಬಾಲಕಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಅರ್ಚನಾ ದೀಪಕ್ ರಾಠೋಡ (8) ಮೃತ ಬಾಲಕಿ. ಸೋಮವಾರ ಸಂಜೆ ಬಾಲಕಿತಾಯಿಯೊಂದಿಗೆ ಕುರಿ ಮೇಯಿಸಲು ಹೋಗಿದ್ದಳು. ಈ ವೇಳೆ ಆಟವಾಡುತ್ತಿದ್ದ ಬಾಲಕಿ
ಚಿಕ್ಕಬಳ್ಳಾಪುರ ಡಿಸಿ ಕಚೇರಿಯ ಎಸ್ಬಿಐ ಬ್ಯಾಂಕ್ ದರೋಡೆ
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಒಳಗೆ ಇರುವ ಎಸ್ಬಿಐ ಬ್ಯಾಂಕ್ ದರೋಡೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಬ್ಯಾಂಕ್ ಬೀಗ ಒಡೆದು ಲಕ್ಷಾಂತರ ರೂಪಾಯಿ ದೋಚಿರುವ ಶಂಕೆ ವ್ಯಕ್ತವಾಗಿದೆ. ಭದ್ರತಾ ಸಿಬ್ಬಂದಿ ಇದ್ದರೂ ರಾತ್ರಿ ಬೀಗ ಒಡೆದು ದರೋಡೆ ಮಾಡಿರುವ ಕಳ್ಳರು ಅಲ್ಲಿದ್ದ
ಸೆಲ್ಫಿ ಹುಚ್ಚಿನಿಂದ ಕಾಡಾನೆಗೆ ಕೀಟಲೆ: ವ್ಯಕ್ತಿಗೆ ದಂಡ ವಿಧಿಸಿ ತಪ್ಪೊಪ್ಪಿಗೆ ಪಡೆದ ಅಧಿಕಾರಿಗಳು
ಆನೆ ಜೊತೆ ಸೆಲ್ಫಿ ಹುಚ್ಚಿನಿಂದ ಕೀಟಲೆ ಮಾಡಿ ಆನೆ ದಾಳಿಗೆ ಒಳಗಾಗಿದ್ದ ವ್ಯಕ್ತಿಗೆ ಅರಣ್ಯಾಧಿಕಾರಿಗಳು 25 ಸಾವಿರ ದಂಡ ವಿಧಿಸಿದ್ದಾರೆ. ಕಾಡಾನೆ ಜೊತೆ ಉದ್ಘಟತನ ಮೆರೆದ ನಂಜನಗೂಡು ನಿವಾಸಿ ಆರ್.ಬಸವರಾಜುವನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು
ಮಂಡ್ಯದಲ್ಲಿ ಮೊಟ್ಟೆ ವಿರೋಧಿಸಿ ಶಾಲೆ ತೊರೆದ ವಿದ್ಯಾರ್ಥಿಗಳು
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಶಾಲೆಯಲ್ಲಿ ಮೊಟ್ಟೆ ಕೊಡುತ್ತಿರುವುದನ್ನು ವಿರೋಧಿಸಿ 70 ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟರೆ ಶಾಲೆ ಬಿಡಿಸುವುದಾಗಿ ಹೆಚ್ಚಿನ ಪೋಷಕರು ಈ ಹಿಂದೆಯೇ ತಿಳಿಸಿದ್ದರು. ಕೆಲವು ಪೋಷಕರು ಮೊಟ್ಟೆ ನೀಡುವಂತೆ ಆಗ್ರಹಿಸಿದ್ದರು. ಅಧಿಕಾರಿಗಳು ನಿಯಮದಂತೆ ಮೊಟ್ಟೆ