Menu

ಹುಬ್ಬಳ್ಳಿಯಲ್ಲಿ ದಲಿತನ ಮದುವೆಯಾದ ಸಿಟ್ಟಿಗೆ ಗರ್ಭಿಣಿ ಮಗಳ ಕೊಲೆಗೈದ ತಂದೆ

ಪ್ರೀತಿಸಿ ಮದುವೆಯಾದ ಮಗಳು ಆರು ತಿಂಗಳ ಗರ್ಭಿಣಿಯಾಗಿರುವಾಗಲೇ ತಂದೆ ಕೊಲೈದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಏಳು ತಿಂಗಳ ಹಿಂದೆ ಮಾನ್ಯ ಪಾಟೀಲ್ ಮತ್ತು ವಿವೇಕಾನಂದ್ ದೊಡ್ಡಮನಿ ಪ್ರೀತಿಸಿ ಮದುವೆಯಾಗಿದ್ದರು. ವಿವೇಕಾನಂದ ದೊಡ್ಡಮನಿ ದಲಿತ ಸಮುದಾಯಕ್ಕೆ ಸೇರಿದ್ದರಿಂದ ಮಾನ್ಯ ಪಾಟೀಲ್ ಕುಟುಂಬಸ್ಥರುಈ ಮದುವೆಯನ್ನು ವಿರೋಧಿಸಿದ್ದರು. ಇದೇ ವಿಚಾರಕ್ಕೆ ಗಲಾಟೆಯಾಗಿ ಎರಡು ಕುಟುಂಬಗಳ ನಡುವೆ ಪೊಲೀಸರು ರಾಜಿ ಪಂಚಾಯ್ತಿ ನಡೆಸಿದ್ದರು. ರಿಜಿಸ್ಟರ್ ಮದುವೆಯಾದ ಬಳಿಕ ಮಾನ್ಯ ಮತ್ತು ವಿವೇಕಾನಂದ್ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು.

ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ: ಸಿಎಂ ಸಿದ್ದರಾಮಯ್ಯ

ಮನುಷ್ಯ ಮನುಷ್ಯನನ್ನು ಪ್ರೀತಿಸುವ ಮನುಷ್ಯ ಸಮಾಜ ನಿರ್ಮಾಣವಾಗಬೇಕು. ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಹೋರಾಟ ನಮ್ಮೆಲ್ಲರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಳವಳ್ಳಿಯದಲ್ಲಿ ಆಯೋಜಿಸಲಾಗಿದ್ದ ಶ್ರೀ ಮತ್ಸು ತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ

ಕಾಂಗ್ರೆಸ್‌ನವರು ಅಧಿಕಾರದ ಕುರ್ಚಿಗಾಗಿ ಜನರ ನೆಮ್ಮದಿ ಹಾಳು ಮಾಡಿದ್ದಾರೆ: ವಿ ಸೋಮಣ್ಣ 

ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಅಧಿಕಾರ ಏನಾದರೂ ಆಗಲಿ, ಯಕ್ಕುಟ್ಟು ಹೋಗಲಿ. ಅಧಿಕಾರದ ಕುರ್ಚಿಗಾಗಿ ಕಿತ್ತಾಡಿಕೊಂಡು ಜನರ ನೆಮ್ಮದಿ ಹಾಳು ಮಾಡುತ್ತಿದ್ದು, ಸಣ್ಣ ಗುಂಡಿಗಳನ್ನು ಮುಚ್ಚಲು ಅವರಿಗೆ ಯೋಗ್ಯತೆಯಿಲ್ಲವೆಂದು ಕೇಂದ್ರ ರೈಲ್ವೇ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಕಿಡಿಕಾರಿದರು. ಕೋಲಾರ ನಗರದ

ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಬಾಲಕನಿಗೆ ಹಿಂಸೆ, ಶಿಕ್ಷಕ ದಂಪತಿ ಅರೆಸ್ಟ್‌, ಪರವಾನಗಿಯಿಲ್ಲದ ಶಾಲೆ ಬಂದ್‌

ಬಾಗಲಕೋಟೆಯ ನವನಗರದ 54ನೇ ಸೆಕ್ಟರ್​​ನಲ್ಲಿರುವ ದಿವ್ಯಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಬಾಲಕನ ಮೇಲೆ ಶಿಕ್ಷಕ ದಂಪತಿ ಅಮಾನವೀಯವಾಗಿ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದೆ. ಯಾವುದೇ ಪರವಾನಗಿ ಪಡೆಯದೆ ಈ ಶಾಲೆ ನಡೆಸುತ್ತಿರೆಂಬ ವಿಷಯ ಬಯಲಾಗಿದೆ.

ಎಲ್‌ಕೆಜಿಯಿಂದ ದ್ವಿತೀಯ ಪಿಯು ಕೆಪಿಎಸ್ ಶಾಲೆಯಲ್ಲಿ ಪಠ್ಯ, ನೋಟ್ ಪುಸ್ತಕ, ಬಿಸಿಯೂಟ

ಕೆಪಿಎಸ್ ಶಾಲೆಯಲ್ಲಿ ಮಕ್ಕಳು ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ 14 ವರ್ಷ ವ್ಯಾಸಂಗ ಮಾಡಬಹುದಾಗಿದೆ, ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿವರೆಗೂ ಪಠ್ಯ ಹಾಗೂ ನೋಟ್ ಪುಸ್ತಕ, ಬಿಸಿಯೂಟ ನೀಡಲಾಗುವುದು. ನೋಟ್ ಬುಕ್ ಕೂಡ ನೀಡುತ್ತಿದ್ದೇವೆ, ಕೆಪಿಎಸ್ ಶಾಲೆಗಳಲ್ಲಿ ಕಡ್ಡಾಯವಾಗಿ ಸಂಗೀತ ಹಾಗೂ

ಕೊಲ್ಲೂರು ದೇಗುಲ ನಕಲಿ ವೆಬ್‌ಸೈಟ್‌: ಭಕ್ತರಿಗೆ ವಂಚಿಸುತ್ತಿದ್ದಾತ ರಾಜಸ್ಥಾನದಲ್ಲಿ ಅರೆಸ್ಟ್‌

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನಕಲಿ ವೆಬ್‌ಸೈಟ್ ಮೂಲಕ ಭಕ್ತರಿಗೆ ವಂಚಿಸುತ್ತಿದ್ದ ರಾಜಸ್ಥಾನದ ತಿಜಾರಿ ಜಿಲ್ಲೆಯ ನಾಸೀರ್ ಹುಸೇನ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ವೆಬ್‌ಸೈಟ್‌ ಮೂಲಕ ದೇವಸ್ಥಾನಕ್ಕೆ ಆಗಮಿಸುವ  ಭಕ್ತರಿಂದ ರೂಮ್ ಬುಕ್ಕಿಂಗ್ ಮಾಡಿಸುವುದಾಗಿ ಹೇಳಿ ಹಣ ಪಡೆದು,

ದ್ವೇಷ ಭಾಷಣ ನಿಯಂತ್ರಣ ಮಸೂದೆ ಚರ್ಚೆಯಿದು, ಬಿಲ್‌ ಬಗ್ಗೆ ಮಾತನಾಡಿ ಸಿಟಿ ರವಿಗೆ ಲಾಡ್‌ ಕೌಂಟರ್‌

ಬೆಳಗಾವಿ ಸುವರ್ಣ ಸೌಧದಲ್ಲಿ  ನಡೆದ ವಿಧಾನಪರಿಷತ್‌ ಕಲಾಪದ ವೇಳೆ ದ್ವೇಷ ಭಾಷಣ ನಿಯಂತ್ರಣ ಮಸೂದೆ  ಕುರಿತು ಚರ್ಚೆ ನಡೆಯುತ್ತಿರುವಾಗ  ಎಂಎಲ್ಸಿ ಸಿಟಿ ರವಿ ಅವರ ಮಾತುಗಳಿಗೆ  ಆಕ್ರೋಶಗೊಂಡ ಸಚಿವ ಸಂತೋಷ್‌ ಲಾಡ್‌ ತಿರುಗೇಟು ನೀಡಿದರು. ಜಿಹಾದ್‌, ಕಾಫೀರ್‌ ಅರ್ಥವನ್ನು ಗೂಗಲ್‌ನಲ್ಲಿ ಪಡೆಯಬಹುದು

ಕಲ್ಯಾಣಕರ್ನಾಟಕದಲ್ಲಿ 371ಜೆ ಜಾರಿ ಸಾಧ್ಯವಿಲ್ಲ ಎಂದವರು ನೀವು, ಜಾರಿಗೊಳಿಸಿದವರು ನಾವು: ಬಿಜೆಪಿಗೆ ಕುಟುಕಿದ ಸಿಎಂ ಸಿದ್ದರಾಮಯ್ಯ

371 ಜೆ ಜಾರಿ ಮಾಡಲು ಹೋರಾಡಿದ್ದು-ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ, ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಯ ವೇಗಕ್ಕೆ 371ಜೆ ಮೂಲಕ ಚಾಲನೆ ನೀಡಿದ್ದು ನಾವು, ನೀವೇನು ಮಾಡಿದ್ದೀರಿ ದಾಖಲೆ ಕೊಡಿ. ಅಡ್ವಾನಿ‌ ಮತ್ತು ವಾಜಪೇಯಿ ಇಬ್ಬರೂ ಕೇಂದ್ರದಲ್ಲಿ ಸರ್ಕಾರ ನಡೆಸುವಾಗ

ಔಟ್‌ಗೋಯಿಂಗ್‌ ಮತ್ತು ಇನ್‌ಕಮಿಂಗ್‌ ಪಾಲಿಟಿಕ್ಸ್‌ನಲ್ಲಿ ಜನ ಹೈರಾಣ: ಛಲವಾದಿ

ರಾಜ್ಯದಲ್ಲಿ ಔಟ್‌ಗೋಯಿಂಗ್‌ ಮತ್ತು ಇನ್‌ಕಮಿಂಗ್‌ ಪಾಲಿಟಿಕ್ಸ್‌ನಲ್ಲಿ ಜನರ ಮಾರಣಹೋಮವಾಗುತ್ತಿದೆ. ಅಭಿವೃದ್ಧಿ ಶೂನ್ಯವಾಗಿದೆ. ಬರೀ ಲೂಟಿ ಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಬೆಳಗಾವಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ

ಮೈಸೂರು: ಸಂಪಾದಿಸಿದ ಹಣವನ್ನೇ ಕೊಡದ ಪತ್ನಿ ಕೊಲೆಗೆ ಸುಪಾರಿ ನೀಡಿದ ಪತಿ!

ಗಂಡನೊಬ್ಬತಾನು ದುಡಿದು ಸಂಪಾದಿಸಿದ ಹಣವನ್ನು ಹೆಂಡತಿ ತನಗೆ ಕೊಡುತ್ತಿಲ್ಲವೆಂದು ಆಕೆಯನ್ನು  ಕೊಲ್ಲಲು ಸುಪಾರಿ ನೀಡಿರುವ ಪ್ರಕರಣ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. ಗಂಡನ ಈ ಕೃತ್ಯಕ್ಕೆ ಆತನ ಸ್ನೇಹಿತರು ಸಹಕರಿಸಿದ್ದು, ಮೇಟಗಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್,