ಜಿಲ್ಲಾ ಸುದ್ದಿ
ಮಂಗಳೂರು ಮುಡಾ ಆಯುಕ್ತರಿಗೆ ಬ್ರೋಕರ್ಗಳಿಂದ ವಾಮಾಚಾರದ ಬೆದರಿಕೆ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ನೂರ್ ಝಹರಾ ಖಾನಂ ಅವರಿಗೆ ದಲ್ಲಾಳಿಗಳು ವಾಮಾಚಾರ ಪ್ರಯೋಗದ ಬೆದರಿಕೆ ಒಡ್ಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಭ್ರಷ್ಟಾಚಾರ ಮತ್ತು ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಕ್ಕೆ ತನಗೆ ವಾಮಾಚಾರದ ಬೆದರಿಕೆಯೊಡ್ಡಿರುವುದಾಗಿ ಆಯುಕ್ತರು ಇಬ್ಬರು ದಲ್ಲಾಳಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಬ್ರೋಕರ್ ವಹಾಬ್ (45) ಮತ್ತು ಅಸಿಸ್ಟೆಂಟ್ ಬ್ರೋಕರ್ ಸಾಬಿತ್ (25) ವಿರುದ್ದ ಮೌಢ್ಯ ನಿರ್ಬಂಧ ಕಾಯ್ದೆ 2020ರ ಅಡಿ ಕೇಸು ದಾಖಲಿಸಬೇಕೆಂದು ಕಮಿಷನರ್
ಚಿಕ್ಕಮಗಳೂರಲ್ಲಿ ಮಗಳು ಸೇರಿ ಮೂವರಿಗೆ ಗುಂಡಿಕ್ಕಿ ಕೊಂದು ವ್ಯಕ್ತಿ ಆತ್ಮಹತ್ಯೆ
ಚಿಕ್ಕಮಗಳೂರು ತಾಲೂಕಿನ ಖಾಂಡ್ಯಾ ಸಮೀಪದ ಮಾಗಲು ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ 7 ವರ್ಷದ ಮಗಳು ಸೇರಿ ಒಂದೇ ಮನೆಯಲ್ಲಿದ್ದ ಮೂವರಿಗೆ ಗುಂಡು ಹಾರಿಸಿ ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅತ್ತೆ ಜ್ಯೋತಿ(50), ನಾದಿನಿ ಸಿಂಧು(26), ಮಗಳು ಖುಷಿ(7) ಕೊಲೆಯಾದವರು. ಮಾಗಲು
ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಕೇಂದ್ರಕ್ಕೆ ಡಿಕೆ ಶಿವಕುಮಾರ್ ಮನವಿ
ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನ ಗಳನ್ನು ನೀಡಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮೂಲಕ
ಗನ್ ಹಿಡ್ಕೊಂಡು ರೀಲ್ಸ್ ಮಾಡಿ ಜೈಲು ಸೇರಿದ್ದಾತನಿಂದ ಕಂತೆ ಕಂತೆ ನೋಟು ಹಿಡಿದು ರೀಲ್ಸ್
ಕಂತೆ ಕಂತೆ ನೋಟು ಹಿಡ್ಕೊಂಡು ಅದನ್ನು ಎಸೆಯುತ್ತ ರೀಲ್ಸ್ ಮಾಡಿ ಇನ್ಸ್ ಸ್ಟಾ ಗ್ರಾಮ್ ನಲ್ಲಿ ಸ್ಟೋರಿ ಅಪ್ಲೋಡ್ ಮಾಡಿ ಬಿಲ್ಡಪ್ ಕೊಡುತ್ತಿದ್ದ ಶೋಕಿವಾಲನ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಫಾಲೋ ಮಾಡಿದವ್ರಿಗೆ, ಟೆಲಿಗ್ರಾಮ್ ಪೇಜ್ ಜಾಯಿನ್ ಆದರವರಿಗೆ ದುಡ್ಡು
ನ್ಯಾಮತಿಯಲ್ಲಿ ಕದ್ದ ಚಿನ್ನ ತಮಿಳುನಾಡಿನ ಪಾಳುಬಾವಿಯಲ್ಲಿ ಪತ್ತೆ
ದಾವಣಗೆರೆಯ ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ ನಡೆದು ಆರು ತಿಂಗಳ ಬಳಿಕ ಚಿನ್ನಾಭರಣ ಸಮೇತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ವೇಳೆ ಚಿನ್ನ ಮುಚ್ಚಿಟ್ಟಿದ್ದು, ದರೋಡೆಗೆ ಕಾರಣ, ಸಂಚು ಮತ್ತಿತರ ವಿವರಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ
ಸಾಲದ ಶೂಲ: ದೊಡ್ಡಬಳ್ಳಾಪುರದಲ್ಲಿ ತಿಂಗಳ ಹಿಂದೆ ತಾಯಿ, ಇಂದು ಮಗ ಆತ್ಮಹತ್ಯೆ
ಸಾಲದ ಸುಳಿಗೆ ಸಿಲುಕಿ ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ನಂದಿ ಮೋರಿ ಬಳಿ ಸೋಮವಾರ ಬೆಳಗ್ಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ತಾಲೂಕಿನ ಕೊನಘಟ್ಟ
ಬೀದಿ ನಾಯಿಗಳ ದಾಳಿಗೆ ಆರು ವರ್ಷದ ಬಾಲಕ ಸಾವು
ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ಬರುವ ಕಸಬಾಲಿಂಗಸುಗೂರು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಿದ್ದಪ್ಪ ಬೀರಪ್ಪ (6) ಎಂಬ ವರ್ಷದ ಮಗು ಮೃತಪಟ್ಟಿದೆ. ಬಾಲಕ ಸಂಜೆ ಬಯಲು ಬಹಿರ್ದೆಸೆಗೆ ಹೋದಾಗ ಐದಾರು ಬೀದಿ ನಾಯಿಗಳ ಹಿಂಡು ದಾಳಿ ಮಾಡಿದೆ. ಪುರಸಭೆ ಅಧಿಕಾರಿಗಳು ಬೀದಿ
ಹುಬ್ಬಳ್ಳಿ-ಧಾರವಾಡದಲ್ಲಿ ಧಾರಾಕಾರ ಮಳೆ: ಸಿಡಿಲಿಗೆ ವ್ಯಕ್ತಿ ಬಲಿ
ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಹುಬ್ಬಳ್ಳಿ-ಧಾರವಾಡದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರವಾಡದಲ್ಲಿ ಸತತ ಒಂದು ಗಂಟೆ ಧಾರಾಕಾರವಾಗಿ ಮಳೆಯಾಗಿದ್ದು, ರೈತರ ಮೊಗದಲ್ಲಿ ನಗು ತರಿಸಿದೆ. ಮುಂಗಾರು ಬಿತ್ತನೆಗೆ ಭೂಮಿ ಸಜ್ಜು ಮಾಡಿಕೊಳ್ಳಲು ಈ ಮಳೆ ಸಹಕಾರಿಐಆಗಿದೆ. ನಾಲ್ಕು ದಿನಗಳ
ಯುಗಾದಿ ಹಬ್ಬಕ್ಕೆ ಹಸು ತೊಳೆಯಲು ಹೋಗಿ ಮೂವರು ಕೆರೆ ಪಾಲು
ಮೈಸೂರು: ಯುಗಾದಿ ಹಬ್ಬದ ಅಂಗವಾಗಿ ಹಸು ತೊಳೆಯಲು ಕೆರೆಗೆ ಹೋಗಿದ್ದ ಮೂವರು ನೀರು ಪಾಲಾಗಿರುವ ಧಾರುಣ ಘಟನೆ ನಂಜನಗೂಡು ತಾಲೂಕಿನ ಕಾಮಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿನೋದ್ (೧೭), ಬಸವೇಗೌಡ (೪೫) ಮತ್ತು ಮುದ್ದೇಗೌಡ (೪೮) ನೀರುಪಾಲಾದವರಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ
ಚಿತ್ರದುರ್ಗದಲ್ಲಿ ಭೀಕರ ಅಪಘಾತಕ್ಕೆ ಮೂವರು ಸಾವು
ಟಿಟಿ ವಾಹನಕ್ಕೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ತಿಮ್ಮಣ್ಣನಹಳ್ಳಿಯ ಶಂಕರಿಬಾಯಿ (65), ಕುಮಾರನಾಯ್ಕ್ (46), ಶ್ವೇತಾ (38) ಎಂದು ಗುರುತಿಸಲಾಗಿದೆ.