ಜಿಲ್ಲಾ ಸುದ್ದಿ
ಸೆಲ್ಫಿ ಗೀಳಿಗೆ ಅಂಜನಾದ್ರಿ ಬೆಟ್ಟದ ಕಂದಕಕ್ಕೆ ಬಿದ್ದ ಯುವತಿ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದ ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಪೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಬೆಟ್ಟದ ಹಿಂಬಾಗದಲ್ಲಿರುವ ಬಂಡೆಗಲ್ಲಿನ ಮೇಲೆ ನಿಂತು ಕೆಲವು ಪ್ರವಾಸಿಗರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಆಂಜನೇಯನ ದರ್ಶನ ಪಡೆಯುಲು ಬೆಟ್ಟ ಹತ್ತಿದ್ದ ಯುವತಿಯೊಬ್ಬಳು ಬೆಟ್ಟದಿಂದ ಇಳಿಯುವ ಮೊದಲೇ ಬೆಟ್ಟದ ಮೇಲಿರುವ ಬಂಡೆಗಲ್ಲಿನ ಮೇಲಿಂದ 30 ರಿಂದ 40 ಅಡಿ ಕೆಳಗೆ ಬಿದ್ದಿದ್ದಾಳೆ. ಕೆಳಕ್ಕೆ ಬೀಳುತ್ತಿದ್ದಂತೆ
ಇನ್ಮುಂದೆ ಹುಬ್ಬಳ್ಳಿ, ಧಾರವಾಡ ಪ್ರತ್ಯೇಕ ಪಾಲಿಕೆ
ಹುಬ್ಬಳ್ಳಿ ಧಾರವಾಡ ಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ಮಾಡಲು ಗುರುವಾರ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಧಾರವಾಡ ನಗರದ ಮಹಾನಗರ ಪಾಲಿಕೆಯಲ್ಲಿ 2,75,339 ಜನಸಂಖ್ಯೆ ಮತ್ತು ಒಟ್ಟಾರೆ
ವಿಜಯಪುರ-ಮಂಗಳೂರು ರೈಲು ಯಲಿವಿಗಿಯಲ್ಲಿ ನಿಲುಗಡೆಗೆ ಅವಕಾಶ: ರೈಲ್ವೆ ಇಲಾಖೆಗೆ ಬೊಮ್ಮಾಯಿ ಧನ್ಯವಾದ
ಹಾವೇರಿ: ವಿಜಯಪುರ – ಮಂಗಳೂರು ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ರೈಲನ್ನು ಯಲವಿಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಿರುವ ಕೇಂದ್ರ ರೈಲ್ವೆ ಸಚಿವರು ಹಾಗೂ ಅಧಿಕಾರಿಗಳಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಧನ್ಯವಾದ ತಿಳಿಸಿದ್ದಾರೆ.
ಅಪ್ರಾಪ್ತ ಹುಡುಗರ ಮೇಲೆ ಹಲ್ಲೆ, ಜಾತಿ ನಿಂದನೆ: ಮೂವರ ಮೇಲೆ ಪ್ರಕರಣ ದಾಖಲು
ಧಾರವಾಡ: ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಾಲ್ಕು ಜನ ಅಪ್ರಾಪ್ತ ಹುಡುಗರ ಮೇಲೆ ಹಲ್ಲೆ ಮಾಡಿದ ಘಟನೆ ಜರುಗಿದೆ. ಕಿರಣ ಕುಮಾರ ಶಿವಪ್ಪ ದೊಡ್ಡಮನಿ, ಅಮಿತ ವಿಷ್ಣು ಮಾದರ, ಪವನ ನಾಗರಾಜ ಮೇಲಿನಮನಿ, ಮುತ್ತುರಾಜ ಸುರೇಶ ಮಾದರ ಎಂಬುವವರು ಕುರಿಗಳಿಗೆ
ಕಾಂಗ್ರೆಸ್ ಗೆ ಚುನಾವಣೆ ಸಮಯದಲ್ಲೇ ಸೇರುತ್ತಿದ್ದೆ: ಪ್ರತಾಪ್ ಸಿಂಹ
ಮೈಸೂರು: ಸಿದ್ದರಾಮಯ್ಯ ಹೆಸರಿಡಿ ಅಂದ ತಕ್ಷಣ ನಾನು ಸಿದ್ದರಾಮಯ್ಯ ಪರ ಅಥವಾ ಕಾಂಗ್ರೆಸ್ ಪರ ಅಂತಲ್ಲ. ಕಾಂಗ್ರೆಸ್ ಕೂಡ ಸೇರಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕೆ.ಆರ್.ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಾನು
ಹೊಸ ವರ್ಷಾಚರಣೆಗೆ ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಮಾರ್ಗಸೂಚಿ ಪ್ರಕಟ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲಾಗಿದ್ದು, ಮುಳ್ಳಯ್ಯನಗಿರಿ ಮುಂತಾದ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಗಳೂರು ಎಸ್ ಪಿ ವಿಕ್ರಮ್ ಅಮ್ಟೆ ಸೋಮವಾರ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಿದ್ದು, ನಾಳೆ ಸಂಜೆ ಅಂದರೆ ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ
ಸತತ ಪ್ರಯತ್ನ ಯಶಸ್ಸಿನ ಗುಟ್ಟು: ಡಾ.ಡಿ.ವೀರೇಂದ್ರ ಹೆಗ್ಗಡೆ
ಧಾರವಾಡ: ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ಸಾಧಿಸಲು ಗಮನಹರಿಸಬೇಕು ಮತ್ತು ಸಮಾಜದ ಸೌಕರ್ಯಕ್ಕಾಗಿ ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಮೌಲ್ಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ ಎಂದು ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು. 2024-25 ನೇ ಬ್ಯಾಚ್ನ ಯುಜಿ ಮತ್ತು ಪಿಜಿ ಕಾರ್ಯಕ್ರಮಗಳಿಗೆ ಹೊಸದಾಗಿ ಪ್ರವೇಶ ಪಡೆದ
ಶಿಕ್ಷಣ ಪ್ರೇಮಿ ಸಾವಮ್ಮ ಹೊಂಗಲ ಇನ್ನಿಲ್ಲ
ಧಾರವಾಡ ತಾಲೂಕಿನ ಜೀರಿಗವಾಡ ಗ್ರಾಮದ ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ (92) ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ. ಶಿಕ್ಷಣ ಪ್ರೇಮಿ ಸಾವಮ್ಮ ಈರಪ್ಪ ಹೊಂಗಲ ತಮ್ಮೂರಿನ ಶಾಲೆಯ ಶಿಕ್ಷಕರಿಗೆ ಸತತ 42 ವರ್ಷಗಳವರೆಗೆ ತಮ್ಮ ಜೀವಿತಾವಧಿಯವರೆಗೂ ಅನ್ನದಾನದ ಮೂಲಕ
ಧಾರವಾಡದಲ್ಲಿ ನಟೋರಿಯಸ್ ಚಡ್ಡಿಗ್ಯಾಂಗ್ ದರೋಡೆಕೋರ ಮೇಲೆ ಪೊಲೀಸರಿಂದ ಫೈರಿಂಗ್!
ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಗಂಡ ಹೆಂಡತಿಯ ಕೈಕಾಲು ಕಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ, ನಗದು ದರೋಡೆ ಮಾಡಿ ಪರಾರಿಯಾಗಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್ ದರೋಡೆಕೋರನ ಮೇಲೆ ಧಾರವಾಡದ ವಿದ್ಯಾಗಿರಿ ಠಾಣೆಯ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಕಳೆದ
ಕಂದಕಕ್ಕೆ ಕಾರು ಉರುಳಿ ತಂದೆ ಮಗ ಸೇರಿ ಮೂವರು ದುರ್ಮರಣ
ಕಂದಕಕ್ಕೆ ಕಾರು ಉರುಳಿ ಬಿದ್ದು ತಂದೆ-ಮಗ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಂಭವಿಸಿದೆ. ಪುತ್ತೂರು ತಾಲೂಕಿನ ಪರ್ಲಡ್ಕದಲ್ಲಿ ಸಂಭವಿಸಿದ ಅಪಘಾತದಲ್ಲಿ ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿಗಳಾದ ತಂದೆ ಮಗ ಅಣ್ಣು ನಾಯ್ಕ್, ರಮೇಶ್ ನಾಯ್ಕ್