ಜಿಲ್ಲಾ ಸುದ್ದಿ
ಬಿಆರ್ ಪಾಟೀಲ್ ನೀತಿ ಯೋಜನಾ ಆಯೋಗದ ಅಧ್ಯಕ್ಷ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿ ಅಸಮಾಧಾನ ವ್ಯಕ್ತಪಡಿಸಿದ್ದ ಅಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಗೆ ಹೊಸ ಹುದ್ದೆ ನೀಡಲಾಗಿದೆ. ಕಲಬುರಗಿ ಜಿಲ್ಲೆ ಆಳಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಿ.ಆರ್.ಪಾಟೀಲ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಮತ್ತು ಎಲ್ಲಾ ಸೌಲಭ್ಯ ನೀಡವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಿಎಂ ಸಲಹೆಗಾರ
ಅರಸೀಕೆರೆಯಲ್ಲಿ ಒಂದೇ ದಿನ ಹೃದಯಾಘಾತದಿಂದ ಉಸಿರು ಚೆಲ್ಲಿದ ಅತ್ತಿಗೆ,ನಾದಿನಿ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ಅತ್ತಿಗೆ ಮತ್ತು ನಾದಿನಿ ಒಂದೇ ದಿನ ಹೃದಯಾಘಾತಕ್ಕೊಳಗಾಗಿ ಮೃತಪಟಟ್ಟಿದ್ದಾರೆ. ಅರಸೀಕೆರೆ ತಾಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷರಾದ ಕೇಶವಮೂರ್ತಿ ಅವರ ಸಹೋದರಿ ಜಾವಗಲ್ ಗ್ರಾಮದ ಪಿಎಸಿಎಸ್ ಹಾಲಿ ನಿರ್ದೇಶಕಿ ಹಾಗೂ ಮಾಜಿ ಅಧ್ಯಕ್ಷೆ, ಗ್ರಾ.ಪಂ ಮಾಜಿ ಸದಸ್ಯೆ
ಕೋಲಾರ ಪತ್ರಕರ್ತರ ಸಂಘದ ಕಲ್ಯಾಣನಿಧಿಗೆ ಮುಖ್ಯಮಂತ್ರಿಗಳಿಂದ 25 ಲಕ್ಷ ರೂ.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಸ್ಥಾಪಿಸಿರುವ ಕಾರ್ಯನಿರತ ಪತ್ರಕರ್ತರ ಕಲ್ಯಾಣನಿಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಜೂರು ಮಾಡಿದ್ದ 25 ಲಕ್ಷರೂ ಅನುದಾನವು ಸಂಘದ ಕಲ್ಯಾಣನಿಧಿ ಖಾತೆಗೆ ಬಿಡುಗಡೆಯಾಗಿದೆ. 2022 ಫೆಬ್ರವರಿ 17 ರಂದು ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯ ಪದಾಧಿಕಾರಿಗಳ ತಂಡವು ಆಯ್ಕೆಯಾಗಿದ್ದ ಸಂದರ್ಭದಲ್ಲಿ
ಧಾರವಾಡದಲ್ಲಿ ಪತಿಯ ಸಾವಿನ ಆಘಾತದಿಂದ ಪತ್ನಿಯೂ ಸಾವು
ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಯಲ್ಲಿ ಪತಿಯ ಸಾವಿನ ಸುದ್ದಿ ತಿಳಿದು ಪತ್ನಿಗೂ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಪತಿ ಈಶ್ವರಪ್ಪಾ(79), ಪಾರ್ವತೆವ್ವಾ(74) ಮೃತ ದಂಪತಿ. ಭಾನುವಾರ ರಾತ್ರಿ 10 ಗಂಟೆ ಇಬ್ಬರೂ ಕುಳಿತು ಊಟ ಮಾಡಿದ್ದರು. ಆಗ ಏಕಾಏಕಿ ಈಶ್ವರಪ್ಪಾಗೆ ಹೃದಯಾಘಾತ ವಾಗಿ ಮೃತಪಟ್ಟಿದ್ದರು.
ದಾವಣಗೆರೆಯಲ್ಲಿ ಪೂಜೆ ಹೆಸರಲ್ಲಿ ಚಿನ್ನಾಭರಣ ದೋಚಿದ್ದವರು ಸೆರೆ
ಇತ್ತೀಚೆಗೆ ದಾವಣಗೆರೆಯಲ್ಲಿ ಪೂಜೆ ಮಾಡಿ ಕಷ್ಟವನ್ನು ಪರಿಹರಿಸುತ್ತೇವೆಂದು ನಂಬಿಸಿ ದಂಪತಿಯ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದ ವಂಚಕರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒರಿಸ್ಸಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನಾಬೇಗಂ ಬಂಧಿತರು. ಆರೋಪಿಗಳಿಂದ 8.65 ಲಕ್ಷ ರೂ. ಮೌಲ್ಯದ 90
ನಾಗಮಂಗಲದಲ್ಲಿ ಅಣ್ಣನ ಗನ್ ಆಟಕ್ಕೆ 3 ವರ್ಷದ ಮಗು ಬಲಿ
ಹದಿಮೂರು ವರ್ಷದ ಬಾಲಕನೊಬ್ಬ ಆಟವಾಡುವಾಗ ಆಕಸ್ಮಿಕವಾಗಿ ತನ್ನ 3 ವರ್ಷದ ತಮ್ಮನ ಮೇಲೆ ಗುಂಡು ಹಾರಿಸಿದ್ದರಿಂದ ಆ ಮಗುವಿನ ಹೊಟ್ಟೆ ಛಿದ್ರವಾಗಿದ್ದು ಅಸು ನೀಗಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದಿದೆ. ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ
ಮೈಸೂರು ಅಪಾರ್ಟ್ಮೆಂಟ್ನಲ್ಲಿ ತಾಯಿ, ಪತ್ನಿ, ಮಗನಿಗೆ ವಿಷವುಣಿಸಿ ಸಾಯಿಸಿ ವ್ಯಕ್ತಿ ಆತ್ಮಹತ್ಯೆ ಶಂಕೆ
ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ನಲ್ಲಿ ಬಾಲಕ ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಸ್ಥಿತಿ ಯಲ್ಲಿ ಪತ್ತೆಯಾಗಿದ್ದಾರೆ. ಕುಶಾಲ್ (15), ಚೇತನ್ (45), ರೂಪಾಲಿ (43), ಪ್ರಿಯಂವಧಾ (62)ಮೃತಪಟ್ಟವರು. ಚೇತನ್ ಮೊದಲಿಗೆ ತಾಯಿ ಪ್ರಿಯಂವಧಾ, ಪತ್ನಿ ರೂಪಾಲಿ ಮತ್ತು ಮಗ ಕುಶಾಲ್ಗೆ ವಿಷವುಣಿಸಿ
ಮದ್ದೂರಿನಲ್ಲಿ ಆಸ್ತಿಗಾಗಿ ಅಣ್ಣನ ಕೊಲೆ ಮಾಡಿಸಿ ಕುಂಭ ಮೇಳಕ್ಕೆ ತೆರಳಿದ್ದಾತ ಅರೆಸ್ಟ್
ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಗ್ರಾಮದಲ್ಲಿ ಜಮೀನಿನಲ್ಲಿ ಫೆಬ್ರವರಿ 11 ರಂದು ರೈತ ಕೃಷ್ಣೇಗೌಡ (45) ಎಂಬ ಹತ್ಯೆ ನಡೆದಿತ್ತು, ತನಿಖೆ ಆರಂಭಿಸಿದ ಪೊಲೀಸರು ಆಸ್ತಿಗಾಗಿ ಮೃತ ಕೃಷ್ಣೇಗೌಡನ ಸಹೋದರನೇ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದಾಗಿ ಖಚಿತಪಡಿಸಿದ್ದಾರೆ. ಮನೆಯಿಂದ ಜಮೀನನ ಬಳಿ ಎಮ್ಮೆಗಳನ್ನು
ಬುರ್ಖಾ ಹಾಕಿಕೊಂಡು ಹೋಗಿ ಗಲಾಟೆ ಮಾಡಿರುವ ವೀಡಿಯೊವಿದೆ ಎಂದ ಬಿಕೆ ಹರಿಪ್ರಸಾದ್
ಸಂಘ ಪರಿವಾರದವರು ಕೆಲವು ಕಡೆ ಬುರ್ಖಾ ಹಾಕಿಕೊಂಡು ಗಲಾಟೆ ಮಾಡಲು ಹೋಗುತ್ತಾರೆ, ಇದೇನು ಹೊಸದಲ್ಲ, ನನ್ನ ಬಳಿ ವೀಡಿಯೊ ಇದೆ ಎಂದು ಕಾಂಗ್ರೆಸ್ ನ ಹಿರಿಯ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಆರೆಸ್ಸೆಸ್ಗೆ ನೂರು ವರ್ಷ ತುಂಬುತ್ತಿದೆ.
ಶಿವಮೊಗ್ಗ ಖಾಸಗಿ ಆಸ್ಪತೆಯಲ್ಲಿ ಬಾಣಂತಿ ಸಾವು
ರಾಜ್ಯದಲ್ಲಿ ಸರ್ಕಾರಿ ಖಾಸಗಿ ಎಂಬ ವ್ಯತ್ಯಾವಿಲ್ಲದೆ ಆಸ್ಪತ್ರೆಗಳಲ್ಲಿ ಬಾಣಂತಿಯ ಸಾವು ಪ್ರಕರಣಗಳು ವರದಿಯಾಗುತ್ತಿರುವುದು ಮುಂದುವರಿದಿದ್ದು, ಜನರಲ್ಲಿ ಆತಂಕವುಂಟಾಗಿದೆ. ಕಳೆದ 6 ದಿನಗಳ ಹಿಂದೆ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿ, ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಾಳೂರು