ಮೈಸೂರು
ವೇಶ್ಯವಾಟಿಕೆಗೆ ಅಪ್ರಾಪ್ತ ವಯಸ್ಕ ಬಾಲಕಿಯರು: ಆರೋಪಿಗಳಿಬ್ಬರು ಅರೆಸ್ಟ್
ಮೈಸೂರಿನಲ್ಲಿ ಅಪ್ರಾಪ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಗಷ್ಟೇ ಋತುಮತಿಯಾದ ಬಾಲಕಿಯರನ್ನು ತೋರಿಸಿ ಗ್ರಾಹಕರನ್ನು ಸೆಳೆಯುತ್ತಿದ್ದ ಶೋಭಾ ಹಾಗೂ ತುಳಸಿಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ವಾಟ್ಸಾಪ್ ಮೂಲಕ ಬಾಲಕಿಯರ ವೀಡಿಯೊವನ್ನು ಗ್ರಾಹಕರಿಗೆ ತೋರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಕ ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕಕ್ಕೆ 20 ಲಕ್ಷ ರೂಪಾಯಿ ನಿಗದಿ ಮಾಡಿದ್ದರು ಎಂದು ಒಡನಾಡಿ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಈ ಮಾಹಿತಿ
ರೈತ ದಸರಾಗೆ ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ ಚಾಲನೆ
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ರೈತ ದಸರಾ ೨೦೨೫ ಕಾರ್ಯಕ್ರಮಕ್ಕೆ ನಂದಿ ಪೂಜೆಯೊಂದಿಗೆ ನಗಾರಿ ಬಾರಿಸುವ ಮೂಲಕ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಚಾಲನೆ ನೀಡಿದರು. ಇದೇ ವೇಳೆ ಹಳ್ಳಿಕಾರ್ ಎತ್ತಿಗೆ ಪೂಜೆ ಸಲ್ಲಿಸಿದರು. ರೈತ ದಸರಾ
ಸರಕಾರಿ ಗೌರವಗಳೊಂದಿಗೆ ಎಸ್.ಎಲ್ ಭೈರಪ್ಪ ಅಂತ್ಯ ಸಂಸ್ಕಾರ
ಕನ್ನಡದ ಖ್ಯಾತ ಕಾದಂಬರಿಕಾರ, ಪದ್ಮಭೂಷಣ, ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್ ಎಲ್ ಭೈರಪ್ಪ ಅವರ ಅಂತ್ಯ ಸಂಸ್ಕಾರ ಚಾಮುಂಡಿ ಬೆಟ್ಟದ ಪಾದದ ಬಳಿಯ ರುದ್ರಭೂಮಿಯಲ್ಲಿ ನೆರವೇರಿತು. ಅವರ ಪುತ್ರರಾದ ರವಿಶಂಕರ್, ಉದಯಶಂಕರ್ ಅಂತ್ಯ ಸಂಸ್ಕಾರದ ವಿಧಿ ವಿಧಾನ ಪೂರೈಸಿದರು. ಜೊತೆಗೆ ಸಹನಾ
ದಕ್ಷಿಣ ಭಾರತದ ಹೆಮ್ಮೆ ‘ಕಾವೇರಿ ಆರತಿ’: ಡಿಕೆ ಶಿವಕುಮಾರ್ ದೂರದೃಷ್ಟಿ, ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು
ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ದೂರದೃಷ್ಟಿ ಮತ್ತು ಸಕ್ರಿಯ ಮುಂದಾಳತ್ವದ ಫಲವಾಗಿ, ಇದೇ ಸೆಪ್ಟೆಂಬರ್ 26 ರಿಂದ ಕೃಷ್ಣರಾಜ ಸಾಗರ (KRS) ಜಲಾಶಯದ ಬಳಿ ʻಕಾವೇರಿ ಆರತಿ’ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಭಾರತದ ಪ್ರತಿಯೊಬ್ಬ ಪ್ರವಾಸಿ ಮತ್ತು ಅಧ್ಯಾತ್ಮಿಕ
ಇಂದಿನಿಂದ ಕೆಆರ್ ಎಸ್ ನಲ್ಲಿ ಐದು ದಿನ ಕಾವೇರಿ ಆರತಿ, ಉಚಿತ ಲಾಡು ಪ್ರಸಾದ
ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕಾವೇರಿ ನದಿಗೆ “ಕಾವೇರಿ ಆರತಿ” ಮಾಡುವ ಕಾರ್ಯಕ್ರಮವು ಸೆಪ್ಟೆಂಬರ್ 26 ರ ಶುಕ್ರವಾರದಿಂದ ಐದು ದಿನ ಕೆಆರ್ ಎಸ್ ನ ಬೃಂದಾವನ ಉದ್ಯಾನವನದಲ್ಲಿ ನೆರವೇರಲಿದೆ. ಸಂಜೆ ಡಿಸಿಎಂ ಡಿ.ಕೆ. ಶಿವಕುಮಾರ್ ಕಾವೇರಿ
ಇಂದು ಮೈಸೂರಿನಲ್ಲಿ ಚಾಮುಂಡಿ ದರ್ಶನವಿಲ್ಲದೆ ಭಕ್ತರು ವಾಪಸ್ ಏಕೆ
ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾದ ಎರಡನೇ ದಿನವಾದ ಮಂಗಳವಾರ ಸೂತಕ ಆವರಿಸಿದೆ. ಸೋಮವಾರ ತಡ ರಾತ್ರಿ ಚಾಮುಂಡಿಬೆಟ್ಟದ ಶಿವಾರ್ಚಕ ರಾಜು ಮೃತಪಟ್ಟಿದ್ದು, ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಅವಕಾಶ ಇಲ್ಲವಾಗಿದೆ. ಸಾರ್ವಜನಿಕರಿಗೆ ಇಂದು ಬೆಳಗ್ಗೆಯಿಂದ ರಾತ್ರಿಯವರೆಗೂ ದೇವಿಯ ದರ್ಶನ ಇಲ್ಲದಂತಾಗಿದೆ. ಈ ಸೂತಕದ
ಒಲಂಪಿಕ್ಸ್ ತರಬೇತಿಗೆ ತಲಾ ರೂ 10 ಲಕ್ಷ ಸಹಾಯಧನ: ಸಿಎಂ ಸಿದ್ದರಾಮಯ್ಯ
ಮುಂದಿನ ಒಲಂಪಿಕ್ಸ್ ತರಬೇತಿ ಪಡೆಯಲು ರಾಜ್ಯದ 60 ಅತ್ಯಂತ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ ರೂ 10 ಲಕ್ಷ ಸಹಾಯಧನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟವನ್ನು
KSRTC ದಸರಾ ವಿಶೇಷ ಟೂರ್ ಪ್ಯಾಕೇಜ್: ಯಾವಾಗಿಂದ ಆರಂಭ? ದರ ಎಷ್ಟು?
ನಾಡಹಬ್ಬ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ವಿಶೇಷ ಟೂರ್ ಪ್ಯಾಕೇಜ್ (Tour Package) ಪ್ರಾರಂಭಿಸಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 7 ರವರೆಗೆ ಈ ಪ್ಯಾಕೇಜ್ನ ಸೇವೆಯ ಬಸ್‌ಗಳು ಕಾರ್ಯಾ ನಿರ್ವಹಿಸಲಿವೆ.
ನನ್ನ ಬದುಕಿನ ದರ್ಶನ ಎಂದಿಗೂ ಜೀವಪರ, ಪ್ರಜಾಪ್ರಭುತ್ವ ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ: ಬಾನು ಮುಷ್ತಾಕ್
ಮೈಸೂರು ದಸರಾ ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ ಎಂದು 2025ರ ಬುಕರ್ ವಿಜೇತ ಸಾಹಿತಿ ಬಾನು ಮುಷ್ತಾಕ್ ಹೇಳಿದರು. ನನ್ನ ಬದುಕು ಕಲಿಸಿದ ಮುಖ್ಯ ಪಾಠವೆಂದರೆ ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವ ದಾರಿ ಮಾತ್ರ ನಿಜವಾದ ದಾರಿ.
ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ: ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ: ಸಿಎಂ ಸಿದ್ದರಾಮಯ್ಯ
ಗೋಡಾ ಹೈ-ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಾಲು ಎಸೆದರು. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ನಾಡಹಬ್ಬ ಐತಿಹಾಸಿಕ ದಸರಾ ಉದ್ಘಾಟನೆ ಬಳಿಕ




