Menu

ಮುಡಾ ಅಕ್ರಮದಲ್ಲಿ “ಕೋಕನಟ್‌” ಕೋಡ್‌ವರ್ಡ್‌ : ಸಿಕ್ಕಿಬಿದ್ದ ಬಿಲ್ಡರ್‌

ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ 300 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ  ಮುಟ್ಟುಗೋಲು ಹಾಕಿದ ಬೆನ್ನಲ್ಲೇ “ಕೋಕನಟ್‌” ಕೋಡ್‌ವರ್ಡ್‌ ಬಳಸಿ ಅಕ್ರಮ ವ್ಯವಹಾರಗಳನ್ನು ನಡೆಸುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ಇಡಿ ಅಧಿಕಾರಿಗಳು ಬಿಲ್ಡರ್‌ ಜಯರಾಮ್ ಮನೆ ಮೇಲೆ ದಾಳಿ ನಡೆಸಿದ್ದರು. ಈತ ಮುಡಾ ಅಕ್ರಮದ ಕಿಂಗ್‌ಪಿನ್‌ ಎನ್ನಲಾಗಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಜಯರಾಮ್ ಮನೆ ಹಾಗೂ ಕಚೇರಿಯಲ್ಲಿ ಇಡಿ ಅಧಿಕಾರಿಗಳು 70 ಗಂಟೆ ಶೋಧ ನಡೆಸಿದ್ದರು.

ಮುಡಾ ಅಕ್ರಮ ತನಿಖೆ ಸಿಬಿಐಗೆ ವಹಿಸಿ: ಅರ್ಜಿಯ ವಿಚಾರಣೆ ಜ.27ಕ್ಕೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ. ಲೋಕಾಯುಕ್ತ ತನಿಖೆಯಿಂದ ಸತ್ಯ ಹೊರ ಬರುವುದಿಲ್ಲ, ಹೀಗಾಗಿ ತನಿಖೆಯನ್ನು

ಪ್ರೊ.ಮುಜಾಫರ್‌ ಅಸ್ಸಾದಿ, ಜಿ.ಸಿ.ಬಯ್ಯಾರೆಡ್ಡಿಗೆ ಸಿಎಂ ಸಂತಾಪ

ಚಿಂತಕ, ಲೇಖಕ ಪ್ರೊ.ಮುಜಾಫರ್‌ ಅಸ್ಸಾದಿ (63) ಮತ್ತು ಸಿಪಿಐ(ಎಂ) ನಾಯಕ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಅವರು  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾಗಿದ್ದಾರೆ. ಈ ಇಬ್ಬರು ಸಮಾಜಮುಖಿ ಗಣ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ಮುಜಾಫರ್‌ ಅಸ್ಸಾದಿ

ಸಿಎಂ ತವರಲ್ಲೇ ದಲಿತ ಕುಟುಂಬಕ್ಕೆ ಬಹಿಷ್ಕಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ವರುಣಾ ವ್ಯಾಪ್ತಿಯಲ್ಲಿ ಬರುವ ಸಿದ್ದರಾಮಯ್ಯಹುಂಡಿ ಬಳಿಯ ಶ್ರೀನಿವಾಸಪುರ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ನೊಂದ ಕುಟುಂಬದವರು ಜಿಲ್ಲಾಧಿಕಾರಿ, ಪೊಲೀಸರು ಹಾಗೂ ತಹಶೀಲ್ದಾರ್​ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಕಾಂಗ್ರೆಸ್ ಗೆ ಚುನಾವಣೆ ಸಮಯದಲ್ಲೇ ಸೇರುತ್ತಿದ್ದೆ: ಪ್ರತಾಪ್ ಸಿಂಹ

ಮೈಸೂರು: ಸಿದ್ದರಾಮಯ್ಯ ಹೆಸರಿಡಿ ಅಂದ ತಕ್ಷಣ ನಾನು ಸಿದ್ದರಾಮಯ್ಯ ಪರ ಅಥವಾ ಕಾಂಗ್ರೆಸ್ ಪರ ಅಂತಲ್ಲ. ಕಾಂಗ್ರೆಸ್ ಕೂಡ ಸೇರಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು, ಕೆ.ಆರ್.ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರವಾಗಿ ನಾನು

ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವುದು ತಪ್ಪಲ್ಲ: ಪ್ರತಾಪ ಸಿಂಹ

ಮೈಸೂರು:  ಮೈಸೂರಿನ ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಹೆಸರಿಡಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ಪರ–ವಿರೋಧ  ವ್ಯಕ್ತವಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಪರ ಮಾಜಿ ಸಂಸದ ಪ್ರತಾಪ್ ಸಿಂಹ ಬ್ಯಾಟ್ ಬೀಸಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಸಂಸದ