Saturday, November 08, 2025
Menu

ಗುಂಡ್ಲುಪೇಟೆಯಲ್ಲಿ ಆನೆ ದಾಂಧಲೆ; ದಿಕ್ಕಾಪಾಲಾಗಿ ಓಡಿದ ಜನರು

ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಕರೆತಂದ ಆನೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ನುಗ್ಗಿ ದಾಂಧಲೆ ಮಾಡಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿದ ಘಟನೆ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ತಾಲೂಕಿನ ಕಲ್ಲಹಳ್ಳಿ ಗ್ರಾಮಕ್ಕೆ ಹುಲಿ ಸೆರೆಗಾಗಿ ಕರೆತಂದಿದಂತಹ ಪಾರ್ಥಸಾರಥಿ ಎಂಬ ಗಂಡು ಸಾಕನೆ ಮದ ಏರಿದ ಹಿನ್ನೆಲೆ ಕಲ್ಲಹಳ್ಳಿ ಶಿಬಿರದಿಂಧ ತಪ್ಪಿಸಿಕೊಂಡು ಅಡ್ಡಾದಿಡ್ಡಿಯಾಗಿ ಪಟ್ಟಣದಲ್ಲಿ ಓಡಾಡಿದೆ. ಪಟ್ಟಣದ ವ್ಯಾಪ್ತಿಯ ಮುಖ್ಯ ರಸ್ತೆಯಲ್ಲಿ ಓಡಾಡಿ ಆತಂಕ ಮೂಡಿಸಿದ ಪಾರ್ಥ ಸಾರಥಿ

ಸರಗೂರಿನಲ್ಲಿ ಹುಲಿ ದಾಳಿಗೆ ವ್ಯಕ್ತಿ ಬಲಿ

ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೇಹೆಗ್ಗೂಡಿಲು ಗ್ರಾಮದಲ್ಲಿ ಜಮೀನಿಗೆ ತೆರಳುತ್ತಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿದ್ದು, ದಂಡನಾಯ್ಕ ಅಲಿಯಾಸ್​ ಸ್ವಾಮಿ (58) ಮೃತಪಟ್ಟಿದ್ದಾರೆ. ನುಗು ವನ್ಯಜೀವಿಧಾಮ ವ್ಯಾಪ್ತಿಯ ಅರಣ್ಯದಲ್ಲಿ ಘಟನೆ ನಡೆದಿದ್ದು, ಇದೇ ವ್ಯಕ್ತಿ ಎಂಟು ತಿಂಗಳ ಹಿಂದೆ ಆನೆ

ಗ್ರೇಟರ್ ಮೈಸೂರು ಆಗಬೇಕು, ಘನತೆ, ಸಂಸ್ಕೃತಿಗೆ ಧಕ್ಕೆ ಆಗಬಾರದು: ಸಿದ್ದರಾಮಯ್ಯ

ಗ್ರೇಟರ್ ಮೈಸೂರು ಆಗಬೇಕು. ಆದರೆ ಈಗಿನ ಮೈಸೂರಿನ ಘನತೆ, ಸಂಸ್ಕೃತಿಗೆ, ವಿಶಾಲತೆಗೆ ಧಕ್ಕೆ ಆಗಬಾರದು‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು. ಬೆಂಗಳೂರಿನ‌ ರೀತಿ ಟ್ರಾಫಿಕ್ ಸಮಸ್ಯೆ, ಒಳಚರಂಡಿ, ಫುಟ್ ಪಾತ್, ಕುಡಿಯುವ ನೀರು, STP ಯಾವುದರ ಸಮಸ್ಯೆಯೂ

ಸಿಎಂ ಬದಲಾವಣೆ: ಹೈಕಮಾಂಡ್‌ ನಿರ್ಧಾರವೇ ಅಂತಿಮವೆಂದ ಮುಖ್ಯಮಂತ್ರಿ

ಜನರು ಅಭಿಪ್ರಾಯವೇನೇ ಇದ್ದರೂ ಹೈಕಮಾಂಡ್ ನ ನಿರ್ಧಾರವೇ ಅಂತಿಮ. ಪಕ್ಷದ ವರಿಷ್ಠರು ಸಿಎಂ ಬದಲಾವಣೆ ಬಗ್ಗೆ ಏನೂ ಹೇಳಿರುವುದಿಲ್ಲ. ಬಿಹಾರ ಚುನಾವಣೆಯ ನಂತರ ರಾಜ್ಯದಲ್ಲಿ ಸಂಪುಟ ಪುನರ್‌ ರಚನೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ನೆಲೆಸಿರುವ

ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ: ಸಿದ್ದರಾಮಯ್ಯ

ಅಸಮಾನತೆ ನಿವಾರಣೆ ಪ್ರತಿಯೊಬ್ಬ ರಾಜಕಾರಣಿಯ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದಾರೆ. ಮೈಸೂರು  ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನೂತನವಾಗಿ ಸ್ಥಾಪಿಸಿರುವ ದೇವರಾಜ ಅರಸು ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದರು. ಅವಕಾಶ ವಂಚಿತರಿಗೆ ಅವಕಾಶ ಒದಗಿಸಿಕೊಡುವುದು ಪ್ರತಿಯೊಬ್ಬ ರಾಜಕಾರಣಿಯ ಹೊಣೆಗಾರಿಕೆ ಆಗಬೇಕು. ಅರಸು

ವಿದ್ಯಾರ್ಥಿನಿ ಗರ್ಭಿಣಿಯಾಗಲು ನಾನು ಕಾರಣನಲ್ಲ: ವಾಯ್ಸ್‌ ನೋಟ್‌ ಮಾಡಿಟ್ಟು ಪಿರಿಯಾಪಟ್ಟಣದಲ್ಲಿ ಯುವಕ ಆತ್ಮಹತ್ಯೆ

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಶಾಲಾ ವಿದ್ಯಾರ್ಥಿನಿ ಗರ್ಭಿಣಿಯಾಗಲು ಕಾರಣನೆಂಬ ಆರೋಪ ಎದುರಿಸುತ್ತಿದ್ದ ರಾಮು ಎಂಬ 27 ವರ್ಷದ ಯುವಕ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮೊದಲು ಆತ ವಾಯ್ಸ್ ನೋಟ್ ರೆಕಾರ್ಡ್ ಮಾಡಿಟ್ಟಿದ್ದು, ತನ್ನ ಮೇಲಿನ ಆರೋಪ ಸುಳ್ಳು.

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಪಿರಿಯಾಪಟ್ಟಣ : ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಹೆತ್ತ ತಾಯಿಯೇ ಹಸು ಗೂಸನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ನಡೆದಿದೆ. 9 ದಿನದ ಮಗು ಮತ್ತು ಎರಡು ವರ್ಷದ ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯೇ ಅರ್ಬಿಯಾ ಬಾನು.

ನನಗೆ ಜಾತಿಗೆಟ್ಟ ಬುದ್ದಿ ಇಲ್ಲ, ಪಕ್ಷ ನಿಷ್ಠೆ ಇರುವ ವ್ಯಕ್ತಿ: ಜಿಟಿ ದೇವೇಗೌಡ

ಮೈಸೂರು: ನನಗೆ ಆ ಜಾತಿಗೆಟ್ಟ ಬುದ್ಧಿ ಇಲ್ಲ. ನಾನು ಪಕ್ಷ ನಿಷ್ಠೆ ಇರುವ ವ್ಯಕ್ತಿ ಎಂದು ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ಸಿದ್ದರಾಮಯ್ಯ ಪರ ಹೇಳಿಕೆ ಕೊಟ್ಟೆ ಎಂದು ನಾನು ಕಾಂಗ್ರೆಸ್

ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ವ್ಯಕ್ತಿ ಮೇಲೆ ದೌರ್ಜನ್ಯ: ಸರಗೂರು ಪೊಲೀಸ್‌ ವಿರುದ್ಧ ದೂರು

ಮೈಸೂರಿನ ಮೇಟಗಳ್ಳಿಯಲ್ಲಿ ಸರಗೂರು ಪೊಲೀಸ್ ಪೇದೆಗಳು ಹಣ ಸೆಟ್ಲಮೆಂಟ್‌ ಡೀಲ್‌ನಲ್ಲಿ ತೊಡಗಿದ್ದು, ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ದೌರ್ಜನ್ಯ ನಡೆಸುತ್ತಿರುವುದಾಗಿ ಆರೋಪ ಕೇಳಿ ಬಂದಿದೆ. ಸರಗೂರು ಪೊಲೀಸ್ ಠಾಣೆ ಪೇದೆಗಳಾದ ಕೃಷ್ಣಯ್ಯ, ಸುನೀಲ್ ಎಂಬವರು ಮೇಟಗಳ್ಳಿಯಲ್ಲಿ ಬಾಡಿಗೆ

ಹುಣಸೂರಿನಲ್ಲಿ ವಿದ್ಯುತ್‌ ತಂತಿ ತಗುಲಿ ತಾಯಿ, ಮಗ ಸಾವು

ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗ ಮೃತಪಟ್ಟಿದ್ದಾರೆ. ನೀಲಮ್ಮ (39) ಮತ್ತು ಹರೀಶ್ (19) ಮೃತ ದುರ್ದೈವಿಗಳು. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ನೀಲಮ್ಮ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿಕೊಂಡು ಒದ್ದಾಡುತ್ತಿರುವಾಗ ರಕ್ಷಿಸಲು ಹೋದ ಮಗ ಕೂಡ