ಕೋಲಾರ
ಯತೀಂದ್ರ ಸಿಎಂ ಬದಲಾವಣೆ ಹೇಳಿಕೆ ಕೊಡಬಾರದಿತ್ತು: ಶಾಸಕ ನಂಜೇಗೌಡ
ಯತೀಂದ್ರ ಸಿದ್ದರಾಮಯ್ಯ ಆರಾಮವಾಗಿ ಇರಬೇಕು ಅಷ್ಟೇ, ಅಧಿಕಾರ ಹಂಚಿಕೆ ವಿಚಾರವಾಗಿ ಇಂತಹ ಹೇಳಿಕೆ ಕೊಡಬಾರದಿತ್ತು. ಸಿದ್ದರಾಮಯ್ಯ ರಾಜ್ಯದ ನಾಯಕ, ಅವಕಾಶ ಸಿಕ್ಕಿದರೆ ರಾಷ್ಟ್ರೀಯ ನಾಯಕರೂ ಆಗಬಹುದು ಎಂದು ಶಾಸಕ ಕೆವೈ ನಂಜೇಗೌಡ ಹೇಳಿದರು ಕೋಲಾರದ ಬೆಳಗಾನಹಳ್ಳಿಯಲ್ಲಿರುವ ಹಾಲು ಒಕ್ಕೂಟದ ಕಚೇರಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ಪರ ತುಂಬಾ ಶಾಸಕರು ಇದ್ದಾರೆ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅಧಿಕಾರ ಹಂಚಿಕೆ ವಿಚಾರವಾಗಿ ಯಾವುದೇ ಶಾಸಕರು ಮಾತನಾಡಬಾರದು. ಈ ಸಂಬಂಧ ನಮಗೆ ಹೈಕಮಾಂಡ್ ಸೂಚನೆ
ಕೋಲಾರದಲ್ಲಿ ಏಳು ದಿನದ ಹೆಣ್ಣು ಮಗುವನ್ನು ಬಿಟ್ಟು ಅಸ್ಸಾಂ ದಂಪತಿ ಸುಸೈಡ್
ಕೋಲಾರದ ಶ್ರೀನಿವಾಸಪುರ ತಾಲೂಕಿನ ಉಪ್ಪಾರಪಲ್ಲಿ ಗ್ರಾಮದಲ್ಲಿ ಅಸ್ಸಾಂ ಮೂಲದ ದಂಪತಿ ಏಳು ದಿನಗಳ ಹೆಣ್ಣು ಶಿಶುವನ್ನು ಬಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೆಹಮಾನ್ (28) ಮತ್ತು ಪತ್ನಿ ಫರಿಜಾ (22) ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ಗುರುತಿಸಲಾಗಿದೆ. ದಂಪತಿ ಅಸ್ಸಾಂನವರಾಗಿದ್ದು,
ಕೋಲಾರದಲ್ಲಿ ಭೀಕರ ಅಪಘಾತ: ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ 5 ಮಂದಿ ಸಾವು
ಬಂಗಾರಪೇಟೆ: ಯಮ್ಮಿಗನೂರು ಮಂಡಲದ ಕೋಟೆಕಲ್ ತಿರುವಿನ ಬಳಿ ಫಾರ್ಚೂನರ್ ಎಸ್‌ಯುವಿ ಮತ್ತು ಮಾರುತಿ ಸ್ವಿಫ್ಟ್ ಡಿಜೈರ್ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಹುಲಿಬೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹೊಸಹಳ್ಳಿ
ಕೋಲಾರದಲ್ಲಿ ಶಿಕ್ಷಕಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂ. ವಂಚಿಸಿದ ದಂಪತಿ ಆರೆಸ್ಟ್
ಕೋಲಾರದ ಮಾಲೂರಿನ ಖಾಸಗಿ ಶಾಲಾ ಶಿಕ್ಷಕಿಯೊಬ್ಬರಿಗೆ ಆನ್‌ಲೈನ್‌ನಲ್ಲಿ 20 ಲಕ್ಷ ರೂಪಾಯಿ ವಂಚನೆ ಮಾಡಿರುವ ವಂಚಕ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕ ದಂಪತಿಯನ್ನು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ರಾಧ/ಪಾವನ ಹಾಗೂ ಸತೀಶ್
ಕೋಲಾರದಲ್ಲಿ ಆರ್‌ಟಿಒದಿಂದ ಖಾಸಗಿ ಬಸ್‌ಗಳ ಸೀಜ್, ಕೋಟಿಗೂ ಅಧಿಕ ದಂಡ ವಸೂಲಿ
ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಾರಾಜ್ಯ ಖಾಸಗಿ ಬಸ್‌ಗಳನ್ನು ಕೋಲಾರದಲ್ಲಿ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿರುವ ಬಸ್‌ಗಳನ್ನು ಸೀಜ್ ಮಾಡಿದ್ದು, ಒಂದು ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಆಂಧ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ
ಕೋಲಾರದಲ್ಲಿ ಮನೆಗೆ ನುಗ್ಗಿ ವೃದ್ಧನ ಕೊಂದು ಹಣ, ಚಿನ್ನಾಭರಣ ದರೋಡೆ
ಕೋಲಾರ ತಾಲೂಕಿನ ಸೀಪುರ ಗ್ರಾಮದಲ್ಲಿ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವೃದ್ಧರ ತಲೆಗೆ ಹೊಡೆದು ಕತ್ತು ಸೀಳಿ ಕೊಲೆ ಮಾಡಿ ಹಣ, ಚಿನ್ನಾಭರಣ ದರೋಡೆಗೈದು ಪರಾರಿಯಾಗಿ ದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮನೆಯಲ್ಲಿ ವೆಂಕಟರಾಮಪ್ಪ
ಮಾಲೂರಿನಲ್ಲಿ ಬ್ರಿಡ್ಜ್‌ನಿಂದ ಉರುಳಿದ ಕಾರು: ಸ್ಥಳದಲ್ಲೇ ನಾಲ್ವರು ಯುವಕರ ಸಾವು
ಕೋಲಾರದ ಮಾಲೂರು ತಾಲೂಕಿನ ಅಬ್ಬೇನಹಳ್ಳಿ ಬ್ರಿಡ್ಜ್ ಬಳಿ ತಡರಾತ್ರಿ ಚೆನ್ನೈ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಬ್ರಿಡ್ಜ್ ಮೇಲಿನಿಂದ ಉರುಳಿ ನಾಲ್ವರು ಯುವಕರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟ ಯುವಕರು ಚೆನ್ನೈನವರಾಗಿದ್ದು, ಗೋಪಿ (38), ಗೌತಮ್ ರಮೇಶ್ (28), ಹರಿಹರನ್ (27),
ಕೋಲಾರದಲ್ಲಿ ಆಗಾಗ ತವರುಮನೆಗೆ ಹೋಗುತ್ತಿದ್ದಳೆಂದು ಪತ್ನಿಯ ಕೊಲೆಗೈದ ಪತಿ
ಕೋಲಾರದ ಜನ್ನಘಟ್ಟ ಗ್ರಾಮದಲ್ಲಿ ಆಗಾಗ ತವರು ಮನೆಗೆ ಹೋಗಿ ಬರುತ್ತಿದ್ದ ಪತ್ನಿಯ ಮೇಲೆ ಅನುಮಾನ ಪಟ್ಟ ಪತಿ ಆಕೆಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹೆಂಡತಿಯನ್ನು ಕುತ್ತಿಗೆ ಹಿಸುಕಿ ಕೊಂದ ಗಂಡ ಸಹಜ ಸಾವೆಂದು ಬಿಂಬಿಸಲು ಹೊರಟಿದ್ದ. ಅನುಮಾನಗೊಂಡ ಮೃತಳ ಪೋಷಕರು
ಧರ್ಮದ ಹೆಸರಲ್ಲಿ ಸರ್ಕಾರಿ ಜಾಗ ಅತಿಕ್ರಮಣ, ರಿಯಲ್ ಎಸ್ಟೇಟ್‌ಗೆ ಅವಕಾಶವಿಲ್ಲ: ಹೈಕೋರ್ಟ್
ಧರ್ಮ, ದೇವರ ಹೆಸರಲ್ಲಿ ಸರಕಾರಿ ಜಾಗ ಅತಿಕ್ರಮಿಸಲು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅವಕಾಶ ನೀಡುವುದಕ್ಕೆ ಆಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಕೋಲಾರದ ವೇಮಗಲ್ ಹೋಬಳಿಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್ ಹಾಗೂ ಗ್ರಾಮದ ರಸ್ತೆಯ
ಗೌರಿಬಿದನೂರಿನಲ್ಲಿ ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತ್ನಿಯ ಕೊಲೆಗೈದ ಪತಿ
ಗೌರಿಬಿದನೂರು ತಾಲೂಕಿನ ಹುದುಗೂರು ಗ್ರಾಮದಲ್ಲಿ ಕುಡಿದು ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಪಾವನಿ(30) ಕೊಲೆಯಾದ ಮಹಿಳೆ. ಕೊಲೆ ಆರೋಪಿ ರಾಘವೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಐದು ವರ್ಷಗಳ ಹಿಂದೆ ಪಾವನಿ ಹಾಗೂ ರಾಘವೇಂದ್ರ ಮದುವೆಯಾಗಿದ್ದರು. ಇತ್ತೀಚೆಗೆ ರಾಘವೇಂದ್ರ




