Tuesday, September 02, 2025
Menu

ಯಾದಗಿರಿಯಲ್ಲಿ ಅಣ್ಣ ತಮ್ಮ ಹೃದಯಾಘಾತಕ್ಕೆ ಬಲಿ

ಯಾದಗಿರಿಯ ಸುರಪುರ ತಾಲೂಕಿನ ಕೆಂಭಾವಿಯ ಮನೆಯೊಂದರಲ್ಲಿ ಅಣ್ಣ ಮತ್ತು ತಮ್ಮ ಹೃದಯಾಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ಶಂಶೋದ್ದೀನ್ (42) ಮತ್ತು ಇರ್ಫಾನ್ (38) ಮೃತಪಟ್ಟ ಸೋದರರು. ತಮ್ಮ ಇರ್ಫಾನ್‌ಗೆ ಎದೆನೋವು ಕಾಣಿಸಿಕೊಂಡು ಹೃದಯಾಘಾತವಾದ ಸುದ್ದಿ ತಿಳಿದ ಕೂಡಲೇ ಅಣ್ಣ ಶಂಶೋದ್ದೀನ್‌ಗೂ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಅಸು ನೀಗಿದ್ದಾರೆ. ಇರ್ಫಾನ್ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು, ಆದರೆ ಶಂಶೋದ್ದೀನ್ ಕೃಷಿಯಲ್ಲಿ ಜೀವನ ಮಾಡುತ್ತಿದ್ದರು.

Suicide death- ಬೀದರ್‌ ಸಾರಿಗೆ ಸಂಸ್ಥೆ ಬಸ್‌ನಲ್ಲೇ ಚಾಲಕ ಆತ್ಮಹತ್ಯೆ: ಮ್ಯಾನೇಜರ್‌ ಕಿರುಕುಳ ಕಾರಣವೆಂದ ಕುಟುಂಬ

ರಾಜ್ಯ ಸಾರಿಗೆ ಸಂಸ್ಥೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸ್ ಚಾಲಕರೊಬ್ಬರು ಮ್ಯಾನೇಜರ್‌ ಕಿರುಕುಳಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ–ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಕರ್ತವ್ಯ ನಿರ್ವಹಿಸುತ್ತಿದ್ದ

ಶಹಾಪುರ ವಸತಿ ಶಾಲೆ ಶೌಚಾಲಯದಲ್ಲೇ ವಿದ್ಯಾರ್ಥಿನಿ ಹೆರಿಗೆ

ಯಾದಗಿರಿ ಜಿಲ್ಲೆಯ ಶಹಾಪುರ ನಗರದ  ಸರ್ಕಾರಿ ವಸತಿ ಶಾಲೆಯ  ಶೌಚಾಲಯದಲ್ಲೇ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ವ್ಯವಸ್ಥೆಗೆ ಸಂಬಂಧಿಸಿದಂತೆ ವ್ಯಾಪಕ ಆತಂಕಕ್ಕೆ ಕಾರಣವಾಗಿದೆ.  ವಿಷಯ ತಿಳಿದು ಆತಂಕಗೊಂಡ ಮಕ್ಕಳ ಪೋಷಕರು ವಸತಿ ಶಾಲೆಯ  ಬಳಿ ಸೇರಿದ್ದಾರೆ. ವಿದ್ಯಾರ್ಥಿನಿ ಗರ್ಭಿಣಿ ಎನ್ನುವ ವಿಚಾರವನ್ನು

ಕಲಬುರಗಿಯಲ್ಲಿ ಶಾಲಾ ಪುಸ್ತಕ ದಾಸ್ತಾನಿಗೆ ಬೆಂಕಿ

ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಶಾಲೆಗಳಿಗೆ ಸರಬರಾಜು ಮಾಡಲು ಇಡಲಾಗಿದ್ದ ಪುಸ್ತಕ ದಾಸ್ತಾನಿಗೆ ಬೆಂಕಿ ಬಿದ್ದು ಸುಟ್ಟು ಹೋಗಿದೆ. ಲಕ್ಷಾಂತರ ರೂ. ಮೌಲ್ಯದ ಪುಸ್ತಕಗಳು ಹಾಗೂ ಹಳೆಯ ಶಾಲಾ ಸಮವಸ್ತ್ರಗಳು ಬೆಂಕಿಗಾಹುತಿಯಾಗಿವೆ. 4ನೇ ತರಗತಿಯಿಂದ 8ನೇ ತರಗತಿ ಕನ್ನಡ ಮಾಧ್ಯಮದ ಪುಸ್ತಕಗಳು

ಜಾತಕದೋಷವೆಂದು ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿ ಅರೆಸ್ಟ್‌

ಜಾತಕದಲ್ಲಿ ದೊಡ್ಡ ದೋಷವಿದೆ, ಪೂಜೆ ಮಾಡಿ ಸರಿ ಮಾಡುವುದಾಗಿ ಹೇಳಿ ನಂಬಿಸಿ ಮಹಿಳಾ ಪೊಲೀಸ್‌ಗೆ 5 ಲಕ್ಷ ವಂಚಿಸಿದ್ದ ಜ್ಯೋತಿಷಿಯನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಆಡುಗೋಡಿಯ ಪೊಲೀಸ್ ಕ್ವಾಟ್ರಸ್‌ನಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್‌ ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ

ಯಾದಗಿರಿಯಲ್ಲಿ ಸಾಲ ಮರಳಿಸು ಅಂದ ಅಳಿಯನ ಕೊಲೆಗೈದ ಮಾವ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶಾಖಾಪುರ(ಎಸ್‌.ಕೆ) ಗ್ರಾಮದಲ್ಲಿ ಕೊಟ್ಟ ಸಾಲ ಮರಳಿ ಕೊಡುವಂತೆ ಕೇಳಿದ ಅಳಿಯನನ್ನು ಆತನ ಸೋದರ ಮಾವ ಕೊಲೆ ಮಾಡಿರುವ ಘಟನೆ ನಡೆದಿದೆ. ಲಕ್ಷ್ಮಣ ಚಿಗರಿಹಾಳ (25) ಹತ್ಯೆಗೀಡಾದ ಯುವಬಕ. ಆತನ ಸೋದರ ಮಾವ ಮಾನಪ್ಪ ಎಂಬಾತ ಕೊಲೆ

ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು: ಪ್ರಿಯಾಂಕ್‌ ಖರ್ಗೆ

ಏಪ್ರಿಲ್ 22ರಂದು ಪೆಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಪ್ರಧಾನಿ ಮೋದಿ ಬಿಹಾರ ಚುನಾವಣೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜಮ್ಮು ಕಾಶ್ಮೀರ, ಆದಂಪುರ ಸೇರಿದಂತೆ ಎಲ್ಲೆಡೆ ಬ್ಲಾಕ್‌ಔಟ್ ಆಗಿದ್ದಾಗ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಏಪ್ರಿಲ್ 22ರಿಂದ ಮೇ 12ರವರೆಗೆ ಪ್ರಧಾನಿ ಎಲ್ಲಿದ್ದರು ಎಂದು ಐಟಿ-ಬಿಟಿ ಸಚಿವ

ದ್ವೇಷ ಹರಡುವ ವೀಡಿಯೊ ಪೋಸ್ಟ್​: ಯಾದಗಿರಿಯ ಯುವಕನ ಬಂಧನ

ಧರ್ಮ ಹಾಗೂ ಸಮುದಾಯಗಳ ಮಧ್ಯೆ ದ್ವೇಷ ಹರಡುವ ವೀಡಿಯೊ ಪೋಸ್ಟ್​ ಮಾಡಿದ ಆರೋಪದಲ್ಲಿ ಯಾದಗಿರಿ ನಗರದ ನಿವಾಸಿ ಜಾಫರ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಲ್ಮಾ ಪಠಣಕ್ಕೆ ಸಂಬಂಧಿಸಿದ ಬರಹ ಇತ್ತು ಎನ್ನಲಾದ ಕರಪತ್ರಗಳನ್ನು ಕೆಲವರು ಕಾಲಿನಿಂದ ಒದೆಯುತ್ತಿರುವ ವೀಡಿಯೊ ಪೋಸ್ಟ್

ಲಿಫ್ಟ್‌ನಲ್ಲಿ ಸಿಲುಕಿದ ಬಿಮ್ಸ್‌ ಸಿಬ್ಬಂದಿ: ಗೋಡೆ ಒಡೆದ ಬಳಿಕ ಹೊರಕ್ಕೆ

ಕಲಬುರಗಿ ಜಿಮ್ಸ್ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಲಿಫ್ಟ್‌ ಸ್ಥಗಿತಗೊಂಡು ಆಸ್ಪತ್ರೆಯ 8 ಸಿಬ್ಬಂದಿ ಲಿಫ್ಟ್ ನಲ್ಲಿ ಸಿಲುಕಿ ಪರದಾಡುವಂತಾಗಿ, ಸ್ಥಳದಲ್ಲಿದ್ದವರಲ್ಲಿ ಆತಂಕ ಸೃಷ್ಟಿಸಿತ್ತು.  ಒಂದು ಗಂಟೆಗೂ ಹೆಚ್ಚು ಸಮಯ ಸಿಬ್ಬಂ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದು, ಲಿಫ್ಟ್ ಗೋಡೆ ಒಡೆದ ಬಳಿಕ ಹೊರಬಂದಿದ್ದಾರೆ. ಗಂಟೆಗೂ

ಪಾರ್ಲಿಮೆಂಟ್ ಸಭೆ ಕರೆಯುವಂತೆ ಪ್ರಧಾನಿಗೆ ಪತ್ರ, ರೆಸ್ಪಾನ್ಸ್ ಇಲ್ಲ: ಮಲ್ಲಿಕಾರ್ಜುನ ಖರ್ಗೆ

ಭಾರತ -ಪಾಕಿಸ್ತಾನ ಮಧ್ಯೆ ಯುದ್ಧ ಬಿಕ್ಕಟ್ಟು ಪರಿಸ್ಥಿತಿಯಲ್ಲಿ  ನಮ್ಮ ಪಕ್ಷ ಮತ್ತು ಘಟಬಂಧನ್ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದೆ. ಈ ವಿಚಾರದ ಬಗ್ಗೆ ಚರ್ಚೆಗೆ ಬೇಗನೇ ಪಾರ್ಲಿಮೆಂಟ್ ಸಭೆ ಕರೆಯಿರಿ ಮಾತಾಡೋಣ ಅಂತ ಪ್ರಧಾನಿಗೆ ಪತ್ರ ಬರೆದಿದ್ದೇವೆ.ಆದರೆ ಪ್ರಧಾನಿ ಅವರಿಂದ