Menu

ಸಾಲದ ಬಾಧೆ ತಾಳಲಾರದೇ ನದಿಗೆ ಹಾರಿ 28 ವರ್ಷದ ರೈತ ಆತ್ಮಹತ್ಯೆ

ಹಾಸನ: ಸಾಲಭಾದೆ ತಾಳಲಾರದೆ ಯುವ ರೈತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಲೂರು ತಾಲ್ಲೂಕಿನ ಮಂದಿರ ಗ್ರಾಮದ ಬಳಿ ನಡೆದಿದೆ. ನಿರಂಜನ್ ಡಿ. (28) ನದಿಗೆ ಹಾರಿ ಆತ್ಮಹತ್ಯೆ ಶರಣಾದ ಯುವ ರೈತ. ಮೃತ ನಿರಂಜನ್ ಕೃಷಿ ಹಾಗೂ ವಿವಿಧ ಬೆಳೆ ಬೆಳೆಯಲು ಬ್ಯಾಂಕ್, ಫೈನಾನ್ಸ್, ಸ್ನೇಹಿತರ ಬಳಿ ಲಕ್ಷಾಂತರ ರೂ ಸಾಲ ಸೇರಿದಂತೆ ಕೃಷಿಗಾಗಿ ಚಿನ್ನಾಭರಣಗಳನ್ನು ಸಹ ಅಡವಿಟ್ಟು ಸಾಲ ಮಾಡಿದ್ದರು. ಬೆಳೆ ಕೈಕೊಟ್ಟು ಬಾರಿ ನಷ್ಟ

RCB Victory tragedy: ಭೂಮಿಗೆ ಹೇಗೆ ಬಂದಿದ್ದನೋ ಹಾಗೇ ಕಳಿಸಿದೆ ಎಂದು ಭೂಮಿಕ್‌ ತಂದೆ ಹೇಳಿದ್ದೇಕೆ

ಐಪಿಎಲ್ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ ಭೂಮಿಕ್ ನನ್ನು ಆತ ಭೂಮಿಗೆ ಹೇಗೆ ಬಂದಿದ್ದನೋ ಹಾಗೇ ಕಳಿಸಿಬಿಟ್ಟೆ ಎಂದು ತಂದೆ ಲಕ್ಷ್ಮಣ್ ಹೇಳಿದ್ದಾರೆ. ಹಾಸನದ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಮಾತನಾಡಿದ ಅವರು, ನನ್ನ ಮಗ ಭೂಮಿಕ್ ಒಂದೇ

ಅಕ್ರಮ ಸಂಬಂಧಕ್ಕೆ ಅಡ್ಡಿ: ಗಂಡ ಹಾಗೂ ಕುಟುಂಬಕ್ಕೆ ವಿಷ ಹಾಕಿದಾಕೆ ಅರೆಸ್ಟ್‌

ಹಾಸನದ ಬೇಲೂರು ತಾಲೂಕಿನ ಕೆರಳೂರು ಗ್ರಾಮದಲ್ಲಿ ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಗಂಡ ಮತ್ತು ಮನೆಯ ವರಿಗೆಲ್ಲ ವಿಷ ಹಾಕಿ ಕೊಲ್ಲಲು ಯತ್ನಿಸಿದ ಮಹಿಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ. ಕೆರಳೂರು ಗ್ರಾಮದ ಗಜೇಂದ್ರ ಹಾಗೂ ಅವರ ಕುಟುಂಬನ್ನು ಕೊಲ್ಲಲು ಯತ್ನಿಸಿದ್ದ ಚೈತ್ರಾಳನ್ನು

Accident death: ಹಾಸನದ ಗ್ರೀನ್ ಗ್ರಾನೈಟ್ ಕ್ವಾರಿಯಲ್ಲಿ ಮಣ್ಣು ಕುಸಿದು ವ್ಯಕ್ತಿ ಸಾವು

ಹಾಸನ ತಾಲೂಕಿನ ಧೂಮಗೆರೆ ಗ್ರಾಮದಲ್ಲಿ ಗ್ರೀನ್ ಗ್ರಾನೈಟ್ ಗಣಿಗಾರಿಕೆ ವೇಳೆ ಬಂಡೆಯ ಮಣ್ಣು ಕುಸಿದು ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಮೃತ ಕಾರ್ಮಿಕ ತಮಿಳುನಾಡು ಮೂಲದ ಮಣಿ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಮಣಿಯನ್ನು ಬೆಂಗಳೂರಿಗೆ ಚಿಕಿತ್ಸೆಗೆ ಸಾಗಿಸುವಾಗ ದಾರಿ

Heart Attack: ಹಾಸನದಲ್ಲಿ ಪದವಿ ವಿದ್ಯಾರ್ಥಿನಿ ಕುಸಿದು ಸಾವು

ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ಯುವತಿಯೊಬ್ಬಳು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಮೃತ ಯುವತಿ ೨೧ ವರ್ಷದ ಕವನ ಅಂತಿಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ರಾಜ್ಯದಲ್ಲಿ ಇತ್ತೀಚೆಗೆ ಯುವ ಸಮೂಹದಲ್ಲಿ ಹೃದಯಾಘಾತದಿಂದ ಸಾವಿನ ಸಂಖ್ಯೆ ವರದಿಯಾಗುತ್ತಲೇ ಇದೆ. ನಿಂತಲ್ಲ,

ಸಕಲೇಶಪುರದಲ್ಲಿ ಮಳೆಯಿಂದ ರಸ್ತೆ ಕಾಣದೆ ಡಿವೈಡರ್‌ಗೆ ಕಾರು ಡಿಕ್ಕಿ: ಯುವಕರಿಬ್ಬರ ಸಾವು

ಹಾಸನ ಜಿಲ್ಲೆಯ ಸಕಲೇಶಪುರದ ಬಾಗೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರಸ್ತೆ ಕಾಣದೆ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಅಸು ನೀಗಿದ್ದಾರೆ. ಮೃತರನ್ನು ಬೆಂಗಳೂರು ಮೂಲದ ಅಭಿಷೇಕ್ ಹಾಗೂ ಶರತ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇನ್ನಿಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ

ಹಾಸನದಲ್ಲಿ ವರ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆಯೇ ಪ್ರಿಯಕರನ ಕರೆ, ಹೊರ ನಡೆದ ವಧು

ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಜೋಡಿಯೊಂದರ ಮದುವೆಗೆ ತಯಾರಿ ನಡೆದಿದ್ದು, ವಧು, ವರರ ಕುಟುಂಬಗಳು ಮದುವೆಗೆ ಎಲ್ಲ ಸಿದ್ಧತೆ ನಡೆಸಿವೆ, ಸಾವಿರಕ್ಕೂ ಹೆಚ್ಚು ಆಪ್ತರು, ಕುಟುಂಬಸ್ಥರು ಆಗಮಿಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಮದುವೆ ನಿಂತು ಹೋಗಿದೆ. ಹಾಸನ ತಾಲೂಕಿನ

ಬೆಂಗಳೂರಿನಲ್ಲಿ ಯುವಕ, ಹಾಸನದಲ್ಲಿ ಯುವತಿ ಕುಸಿದು ಬಿದ್ದು ಸಾವು

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅರಕಲಗೂಡಿನ ಯುವಕನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಹತ್ತೊಂಬತ್ತು ವರ್ಷದ ಯುವಕ ಅಭಿಷೇಕ್‌ ಮೃತಪಟ್ಟವ ಎಂದು ಗುರುತಿಸಲಾಗಿದೆ. ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರನಾದ

ಚನ್ನರಾಯಪಟ್ಟಣದಲ್ಲಿ 15ಕೋಟಿ ರೂ. ಮೌಲ್ಯದ 27 ಎಕರೆ ಅರಣ್ಯ ಒತ್ತುವರಿ ತೆರವು

ಅರಣ್ಯಾಧಿಕಾರಿಗಳು ಹಾಸನದ ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿಯ ಮಡಬ ಗ್ರಾಮದಲ್ಲಿ 27 ಎಕರೆ ಅರಣ್ಯ ಒತ್ತುವರಿ ತೆರವು ಮಾಡಿಸಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ. ಮಡಬ ಗ್ರಾಮದ ಸರ್ವೆ ನಂ. 27ರಲ್ಲಿ ಸುಮಾರು 10-15

ಬೈಕ್‌ಗೆ ಲಾರಿ ಡಿಕ್ಕಿ: ಪೊಲೀಸ್ ಕಾನ್ಸ್‌ಟೇಬಲ್‌ ಸಾವು

ಹಾಸನ ಹೊರವಲಯದ ಕೆಂಚನಹಳ್ಳಿ ಬಳಿ ಚಲಿಸುತ್ತಿದ್ದ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಪೊಲೀಸ್ ಕಾನ್ಸ್‌ಟೇಬಲ್‌ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕಾಶ್ (38) ಮೃತಪಟ್ಟ ಪೊಲೀಸ್ ಕಾನ್ಸ್‌ಟೇಬಲ್‌. ಅವರು 1ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಕಾಶ್ ಹಾಸನ