ದಾವಣಗೆರೆ
ದಾವಣಗೆರೆಯಲ್ಲಿ ನೀರು ತುಂಬಿದ್ದ ಪಾತ್ರೆಗೆ ಬಿದ್ದು ಮಗು ಸಾವು
ದಾವಣಗೆರೆಯ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ. ನಿಬಗೂರು ಗೊಲ್ಲರಹಟ್ಟಿ ಗ್ರಾಮದ ಮಂಜುನಾಥ್, ರಾಜೇಶ್ವರಿ ದಂಪತಿಯ ಪುತ್ರಿ ವೇದ(2) ಮೃತಪಟ್ಟ ಮಗು. ಮನೆಯಲ್ಲಿಯೇ ಆಟವಾಡುತ್ತ ಸ್ನಾನಗೃಹದಲ್ಲಿನ ನೀರು ತುಂಬಿದ ಪ್ಲಾಸ್ಟಿಕ್ ಟಬ್ಗೆ ಮಗು ಬಿದ್ದಿದೆ. ತಲೆಕೆಳಗಾಗಿ ಬಿದ್ದಿದ್ದರಿಂದ ಮೇಲೆಳಲು ಆಗದೆ ಉಸಿರುಗಟ್ಟಿ ಒದ್ದಾಡಿ ಮೃತಪಟ್ಟಿದೆ. ಮಗು ಕಾಣಿಸದ ಹಿನ್ನೆಲೆ ಪೋಷಕರು ಎಲ್ಲ ಕಡೆ ಹುಡುಕಾಡಿದ್ದು, ಸ್ನಾನ ಗೃಹದಲ್ಲಿ ಹೋದಾಗ
ದಾವಣಗೆರೆ ಚಿನ್ನ ದರೋಡೆ: ಪಿಎಸ್ಐಗಳಿಬ್ಬರು ಸೇರಿ ನಾಲ್ವರ ಬಂಧನ
ದಾವಣಗೆರೆಯಲ್ಲಿ ಚಿನ್ನದ ವ್ಯಾಪಾರಿಯ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಟಿಜೆ ನಗರ ಠಾಣೆ ಪೊಲೀಸರು ಇಬ್ಬರು ಪಿಎಸ್ಐಗಳು ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಮಾಳಪ್ಪ ಚಿಪ್ಪಲಕಟ್ಟಿ, ಪ್ರವೀಣ್ ಕುಮಾರ್ ಬಂಧಿತ ಪಿಎಸ್ಐಗಳು ಎಂದು ಗುರುತಿಸಲಾಗಿದೆ. ಇಬ್ಬರಿಗೆ ಸಹಕರಿಸಿದ್ದ ಚಿನ್ನದಂಗಡಿಯ ಕೆಲಸಗಾರರಾದ ಸತೀಶ್ ರೇವಣಕರ್,
ಟೀಕೆ ಮಾಡುತ್ತಿರುವವರಿಂದಲೇ ನಮ್ಮ ಗ್ಯಾರಂಟಿ ಯೋಜನೆಗಳ ನಕಲು: ಡಿಕೆ ಶಿವಕುಮಾರ್
“ನಾವು ಕರ್ನಾಟಕದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿಯವರು ಟೀಕೆ ಮಾಡುತ್ತಿದ್ದರು. ಈಗ ಹರಿಯಾಣ, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರದ
ಕೂಡ್ಲಿಗಿಯಲ್ಲಿ 74 ಕೆರೆಗಳಿಗೆ 870 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಸಿಎಂ ಚಾಲನೆ
1,70,000 ಜನರಿಗೆ ಕುಡಿಯುವ ನೀರು ಒದಗಿಸುವ ಜೊತೆಗೆ ಕೂಡ್ಲಿಗಿಯ ಅಂತರ್ಜಲ ವೃದ್ಧಿಗೆ ಶ್ರಮಿಸಿ ಯಶಸ್ವಿಯಾದ ಶಾಸಕ ಶ್ರೀನಿವಾಸ್ ಅವರನ್ನು ಪಡೆದ ಕೂಡ್ಲಿಗಿ ಜನತೆ ಅತ್ಯಂತ ಅದೃಷ್ಟವಂತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ
ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತು: ತಪ್ಪು ಮಾಡಿದವರ ವಿರುದ್ಧ ಗಂಭೀರ ಕ್ರಮವೆಂದ ಸಿಎಂ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಐಷಾರಾಮಿ ಸವಲತ್ತುಗಳು ದೊರಕುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಗೃಹ ಸಚಿವರು ಈ ಬಗ್ಗೆ ಸಭೆ ಕರೆದಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇನ್ನೂ ಮುಂದೆ ಇಂಥದ್ದು ನಡೆಯದಂತೆ ಕ್ರಮ ವಹಿಸಲಾಗುವುದು ಎಂದು
ದಾವಣಗೆರೆಯಲ್ಲಿ ಕಾರು ಕಾಲುವೆಗೆ ಉರುಳಿ ಇಬ್ಬರ ಸಾವು
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಹೊಸೂರು ಗ್ರಾಮದಲ್ಲಿ ಭದ್ರಾ ಕಾಲುವೆಗೆ ಕಾರು ಬಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮಲ್ಲಿಕಾರ್ಜುನ(29) ಹಾಗೂ ಸಿದ್ದೇಶ್(38) ಮೃತಪಟ್ಟವರು. ದಾವಣಗೆರೆಯ ಆರು ಜನ ಮಂಗಳೂರು ಪ್ರವಾಸಕ್ಕೆ ಹೋಗಿ ವಾಪಸ್ ಬರುವಾಗ ಈ ದುರಂತ ನಡೆದಿದೆ. ನಿದ್ದೆ ಮಂಪರಿನಲ್ಲಿ
ದಾವಣಗೆರೆಯಲ್ಲಿ ಸರ್ಕಾರಿ ನೌಕರಿ ಆಮಿಷವೊಡ್ಡಿ ಲಕ್ಷಾಂತರ ರೂ. ವಂಚನೆ ಆರೋಪಿ ಅರೆಸ್ಟ್
ದಾವಣಗೆರೆಯಲ್ಲಿ ಜನರಿಗೆ ಸರ್ಕಾರಿ ನೌಕರಿ ಕೊಡಿಸುವ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಶ್ರೀನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಶ್ರೀನಾಥ್ ರಾಜಕೀಯ ನಾಯಕನ ಸೋಗಿನಲ್ಲಿ ಕೆಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳಿಗೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಜಲಸಂಪನ್ಮೂಲ ಇಲಾಖೆಯಲ್ಲಿ ಡಿ
ದಾವಣಗೆರೆಯಲ್ಲಿ ಅಕ್ರಮ ಔಷಧ ಮಾರಾಟ ಜಾಲ ಪತ್ತೆ: 5 ಮಂದಿ ಅರೆಸ್ಟ್
ವೈದ್ಯರ ಶಿಫಾರಸು ಇಲ್ಲದ, ಪರವಾನಗಿ ಇಲ್ಲದೇ ದಾವಣಗೆರೆಯಲ್ಲಿ ಅಕ್ರಮವಾಗಿ ಔಷಧ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಾದಕ ದ್ರವ್ಯ ನಿಗ್ರಹ ಪಡೆ 5 ಮಂದಿಯನ್ನು ಬಂಧಿಸಿದೆ. ಬಸವನಗರ ಠಾಣಾ ವ್ಯಾಪ್ತಿಯ ದೇವರಾಜ ಅರಸ್ ಬಡಾವಣೆ ಫ್ಲೈಓವರ್ ಪಕ್ಕದ ಸರ್ವೀಸ್ ರಸ್ತೆಯಲ್ಲಿರುವ ಎಸ್ಪಿಎಸ್
ಹೊನ್ನಾಳಿಯಲ್ಲಿ ಬಾಯ್ಲರ್ ಸ್ಫೋಟ: ಬಾಲಕಿ ಸಾವು
ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಉತ್ತರ ಭಾಗದಲ್ಲಿ ಮನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು 11 ವರ್ಷದ ಬಾಲಕಿ ಮೃತಪಟ್ಟಿದ್ದು, ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಸ್ವೀಕೃತಿ ಮೃತ ಬಾಲಕಿ, ತೀರ್ಥಿಬಾಯಿ, ಹೂವಾ ನಾಯ್ಕ್, ಸುನೀತಾ ಬಾಯಿ ಗಂಭೀರವಾಗಿ ಗಾಯಗೊಂಡವರು. ಮನೆಯಲ್ಲಿ ಬೆಳಗ್ಗೆ ಬಾಯ್ಲರ್ ಆನ್
ದಾವಣಗೆರೆಯಲ್ಲಿ “ಐ ಲವ್ ಮಹಮ್ಮದೀಯ” ಫ್ಲೆಕ್ಸ್ : ಕೋಮುಗಳ ಮಧ್ಯೆ ಜಗಳ
ದಾವಣಗೆರೆ ನಗರದ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಐ ಲವ್ ಮಹಮ್ಮದೀಯ ಫ್ಲೆಕ್ಸ್ ಹಾಕಿದ್ದಕ್ಕೆ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ. ಕಾರ್ಲ್ ಮಾರ್ಕ್ಸ್ ನಗರದ 13ನೇ ಕ್ರಾಸ್ ನಲ್ಲಿ ಅನ್ಯ ಕೋಮಿನ ಮನೆ ಮುಂದೆ ಐ ಲವ್ ಮಹಮ್ಮದೀಯ




