Menu

ಶೃಂಗೇರಿಯಲ್ಲಿ ಕಾಡಾನೆ ದಾಳಿಗೆ ರೈತರಿಬ್ಬರು ಬಲಿ

ಶೃಂಗೇರಿ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದಾರೆ. ಮೃತಪಟ್ಟ ರೈತರನ್ನು ಹರೀಶ್ (44) ಮತ್ತು ಉಮೇಶ್ (40) ಎಂದು ಗುರುತಿಸಲಾಗಿದೆ. ಕೊಟ್ಟಿಗೆಗೆ ಸೊಪ್ಪು ತರಲೆಂದು ಇಬ್ಬರೂ ಕಾಡಿಗೆ ಹೋಗಿದ್ದಾಗ ಆನೆ ದಾಳಿ ನಡೆಸಿ ಈ ದುರಂತ ಸಂಭವಿಸಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಶೃಂಗೇರಿ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ

ವರದಕ್ಷಿಣೆ ಕಿರುಕುಳ ಆರೋಪ: ಚಿಕ್ಕಮಗಳೂರಿನಲ್ಲಿ ವಿಷ ಸೇವಿಸಿದ್ದ ಮಹಿಳೆ ಸಾವು

ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೂಜಾ ಎಂದು (30) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ

ತರೀಕೆರೆಯಲ್ಲಿ ನಾಳೆ ಮದುವೆ: ವಧು ಇಂದು ಹೃದಯಾಘಾತಕ್ಕೆ ಬಲಿ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ ವಧು ಶೃತಿ (32) ಅವರ ಮದುವೆ ನಾಳೆ ತರೀಕೆರೆಯಲ್ಲಿ ನಡೆಯಲು ಎಲ್ಲ ಸಿದ್ಧತೆ ಆಗಿತ್ತು, ಆದರೆ ಇಂದು ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಳೆ ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶೃತಿ ಮತ್ತು

ಮೂಡಿಗೆರೆ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಯುವತಿ ಸಾವು

ಬೆಂಗಳೂರಿನಿಂದ ಸ್ನೇಹಿತೆಯ ಮದುವೆ ನಿಶ್ಚಿತಾರ್ಥಕ್ಕೆ ಬಂದಿದ್ದ ಯುವತಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿ ಗ್ರಾಮದ ಹೋಂಸ್ಟೇ ಬಾತ್‌ರೂಮ್‌ನಲ್ಲಿ ಕುಸಿದು ಬಿದ್ದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ರಂಜಿತಾ (27) ಮೃತ ಯುವತಿ, ಈಕೆ ಬೇಲೂರು ತಾಲೂಕಿನ ದೇವಲಾಪುರ ಗ್ರಾಮದ ನಿವಾಸಿ. ಶುಕ್ರವಾರ ಈ

ಚಿಕ್ಕಮಗಳೂರು: ಮದುವೆಯಾದ ಕೆಲವೇ ದಿನಕ್ಕೆ ತೊರೆದ ಪತ್ನಿಯ ಕೊಲೆಗೈದ ಪತಿ

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣ ಸಮೀಪದ ಹವ್ವಳ್ಳಿ ಗ್ರಾಮದಲ್ಲಿ ಐದು ತಿಂಗಳ ಹಿಂದೆ ಮದುವೆಯಾಗಿರುವ ದಂಪತಿ ಮಧ್ಯೆ ಕೌಟುಂಬಿಕ ಕಲಹ ತೀವ್ರಗೊಂಡು ಹೆಂಡತಿಯು ಗಂಡನ ಮನೆ ತೊರೆದು ತವರು ಮನೆಗೆ ವಾಪಸ್‌ ಆಗಿದ್ದಳು. ಇದರಿಂದ ರೊಚ್ಚಿಗೆದ್ದ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ

ಚಿಕ್ಕಮಗಳೂರಿನಲ್ಲಿ ಡ್ರಗ್ಸ್‌ ಪತ್ತೆಗೆ ರುದ್ರ ನಿಯೋಜನೆ

ಮಾದಕ ದ್ರವ್ಯ ಪತ್ತೆ ಕಾರ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಿದೆ. ವಿಶೇಷ ತರಬೇತಿ ಪಡೆದ ‘ರುದ್ರ’ ಹೆಸರಿನ ಶ್ವಾನ ಅಧಿಕೃತವಾಗಿ ಜಿಲ್ಲೆಯ ಪೊಲೀಸ್ ಕರ್ತವ್ಯದ ಭಾಗವಾಗಿದೆ. 21 ಆಗಸ್ಟ್ 2024ರಂದು ಜನಿಸಿದ ರುದ್ರ ಶ್ವಾನವು ಬೆಂಗಳೂರಿನ

ಚಿಕ್ಕಮಗಳೂರಿನಲ್ಲಿ ಹಸು ಬಾಲಕ್ಕೆ ಬೆಂಕಿ ಹಚ್ಚಿದ ಬಾಲಕನ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಬಾಲಕನೊಬ್ಬ ಹಸುವಿನ ಬಾಲಕ್ಕೆ ಸೆಂಟ್‌ ಸ್ಪ್ರೇ ಮಾಡಿ ಲೈಟರ್‌ನಿಂದ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಬಾಲಕ ನಡೆಸಿರುವ ಈ ದುಷ್ಕೃತ್ಯವು ಸಾರ್ವಜನಿಕರಲ್ಲಿ ಆಕ್ರೋಶವುಂಟು ಮಾಡಿದೆ. ಸಂಜೆ ರಸ್ತೆಯಲ್ಲಿ ನಿಂತಿದ್ದ ಹಸುವಿನ ಬಾಲಕ್ಕೆ ಬಾಲಕ ಕೈಯಲ್ಲಿದ್ದ ಸೆಂಟ್

ವರ್ಕ್‌ಫ್ರಮ್‌ ಹೋಂ ಜಾಹೀರಾತು ನಂಬಿ: ಹಣ ಕಳೆದುಕೊಂಡ ಮಹಿಳೆ

ಆನ್‌ಲೈನ್‌ನಲ್ಲಿ ವರ್ಕ್‌ಫ್ರಮ್‌ ಹೋಂ ಕುರಿತಾದ ಜಾಹೀರಾತು ನಂಬಿ ಚಿಕ್ಕಮಗಳೂರಿನ ಮಹಿಳೆಯೊಬ್ಬರು 2,57,600 ರೂ. ಕಳೆದುಕೊಂಡಿದ್ದಾರೆ. ಸೈಬರ್‌ ವಂಚಕರು ಟೆಲಿಗ್ರಾಂ ಆ್ಯಪ್‌ ಮೂಲಕ ‘ವರ್ಕ್‌ಫ್ರಮ್‌ ಹೋಂ ಮಾಡಲು ಇಚ್ಛಿಸುವವರು ಈ ಲಿಂಕ್‌ ಕ್ಲಿಕ್‌ ಮಾಡಿ’ ಎಂದು ಜಾಹೀರಾತು ಕಳುಹಿಸಿದ್ದರು. ಮಹಿಳೆ ಲಿಂಕ್‌ ಕ್ಲಿಕ್‌

ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ

ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದೇಶದಲ್ಲಿಯೇ ಮೊದಲು ಜಾರಿಗೆ ತಂದ ರಾಜ್ಯ ನಮ್ಮದು. ಅಪಘಾತದಿಂದ ಮರಣ ಹೊಂದಿದಲ್ಲಿ ವಿಮಾ ಪರಿಹಾರ ರೂ. ೨ ಲಕ್ಷ ಹಾಗೂ ಜೀವ ವಿಮಾ ರೂ. ೨ ಲಕ್ಷ

ಕೆಮ್ಮಣ್ಣುಗುಂಡಿಯಲ್ಲಿ ಪತ್ನಿ ಜೊತೆ ಸೆಲ್ಫಿ: ಕಾಲು ಜಾರಿ ಕಂದಕಕ್ಕೆ ಬಿದ್ದು ಪತಿ ಸಾವು

ಕೆಮ್ಮಣ್ಣುಗುಂಡಿಯ ಪ್ರವಾಸಿ ತಾಣದ ವೀವ್ ಪಾಯಿಂಟ್​​ನಲ್ಲಿ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಹೋಗಿ ಗಂಡ ಆಳದ ಪ್ರಪಾತಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿರುವಂತಹ ಘಟನೆ ನಡೆದಿದೆ. ಶಿಕ್ಷಕರಾಗಿದ್ದ ಸಂತೋಷ್ (40) ಮೃತಪಟ್ಟವರು. ಸಂತೋಷ್ ಮತ್ತು ಹೆಂಡತಿ ಶ್ವೇತ ಕೆಮ್ಮಣ್ಣುಗುಂಡಿ ನೋಡಲು ಬಂದಿದ್ದರು. ಕೆಮ್ಮಣ್ಣುಗುಂಡಿ