Menu

ಬೇರೆ ಜಾತಿಯವನೊಂದಿಗೆ ಮಗಳ ಮದುವೆ: ಚಾಮರಾಜನಗರದಲ್ಲಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

ಬೇರೆ ಜಾತಿ ಯುವನೊಂದಿಗೆ ಮಗಳ ಮದುವೆ ಮಾಡಿದ್ದಕ್ಕಾಗಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಂಡಿಗೆರೆ ಗ್ರಾಮದ ಕೃಷ್ಣರಾಜು ಎಂಬವರ ಕುಟುಂಬನ್ನು ಬಹಿಷ್ಕರಿಸಲಾಗಿದೆ. ಈ ಬಹಿಷ್ಕಾರ ತೆರವಾಗಬೇಕಾದರೆ 5 ಲಕ್ಷ ರೂ. ತಪ್ಪು ಕಾಣಿಕೆ ಕೊಡಬೇಕು ಎಂದು ಹೇಳಲಾಗಿದೆ. ಕೃಷ್ಣಮೂರ್ತಿ ತಮ್ಮ ಮಗಳಿಗೆ ಆಕೆಯ ಆಸೆಯಂತೆ ಪ್ರೀತಿಸಿದ್ದ ಬೇರೆ ಜಾತಿಯ ಯುವಕನ ಜೊತೆ 2023ರಲ್ಲಿ ಮದುವೆ ಮಾಡಿದ್ದರು. ಮಗಳು ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ಗಂಡನನ್ನು ಕಳೆದುಕೊಂಡಿದ್ದಾಳೆ.

ಕರ್ತವ್ಯ ಮುಗಿಸಿ ಮನೆಗೆ ಹೋದ ಎಎಸ್‌ಐ ಕುಸಿದು ಸಾವು

ರಾತ್ರಿ ಕರ್ತವ್ಯ ಮುಗಿಸಿ ಬೆಳಗಿನ ಜಾವ ಮನೆಗೆ ಬಂದ ಎಎಸ್‌ಐವೊಬ್ಬರು ಹೃದಯಾಘಾತದಿಂದ ಕುಸಿದು ಮೃತಪಟ್ಟಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಸಂತೇಮರಹಳ್ಳಿ ಪೊಲೀಸ್ ಠಾಣೆಯ ಎಎಸ್‌ಐ ನಾಗನಾಯಕ ಹೃದಯಾಘಾತದಿಂದ ಮೃತಪಟ್ಟವರು. ನಾಗನಾಯಕ ರಾತ್ರಿ ಡ್ಯೂಟಿ ಮುಗಿಸಿ ಚಾಮರಾಜ ನಗರದ ಪೊಲೀಸ್ ಗೃಹಕ್ಕೆ ಬೆಳಗ್ಗೆ

ಕುತೂಹಲಕ್ಕಾಗಿ ಚಿರತೆ ಬೋನಿನೊಳಗೆ ಹೋಗಿದ್ದ ರೈತ ಮೂರು ಗಂಟೆ ಲಾಕ್‌

ಚಾಮರಾಜನಗರ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ರೈತರೊಬ್ಬರು ಕುತೂಹಲದಿಂದ ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ ಹೋಗಿದ್ದು, ಮೂರು ಗಂಟೆ ಅದರೊಳಗೆ ಲಾಕ್‌ ಆಗಿದ್ದಾರೆ. ಗ್ರಾಮದ ಕಿಟ್ಟಿ ಎಂಬವರು ಯಾರೂ ಇಲ್ಲದ ವೇಳೆ ಕುತೂಹಲದಿಂದ ಬೋನಿನೊಳಗೆ ಹೋಗಿ ಸಿಕ್ಕಿಹಾಕಿಕೊಂಡು ಮೂರು ಗಂಟೆ ಅದರೊಳಗೆ ಪರದಾಡಿದ್ದಾರೆ.

ಚಾಮರಾಜನಗರದಲ್ಲಿ ಒಂದೇ ಕಡೆ 5 ಹುಲಿಗಳು ಪತ್ತೆ: ನಿಷೇಧಾಜ್ಞೆ ಜಾರಿ

ಚಾಮರಾಜನಗರದ ನಂಜೇದೇವನಪುರ ಗ್ರಾಮದ ಬಳಿ 5 ಹುಲಿಗಳು ಕಾಣಿಸಿಕೊಂಡಿರುವ ಹಿನ್ನೆಲೆ ಸುರಕ್ಷತಾ ಕ್ರಮವಾಗಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಂಜೇದೇವನಪುರ, ವೀರನಪುರ ಹಾಗೂ ಉಡಿಗಾಲ ಗ್ರಾಮದ ಜಮೀನು ಗಳಲ್ಲಿ ಹುಲಿಗಳು ಓಡಾಡುತ್ತಿರುವುದು ಡ್ರೋನ್‌ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಸ್ಥಳೀಯರಲ್ಲಿ ಭೀತಿ ಆವರಿಸಿಕೊಂಡಿದೆ. ಹೀಗಾಗಿ ಈ

ಬಂಡೀಪುರದಲ್ಲಿ ಕೇರಳ ಆಭರಣ ತಯಾರಕನನ ಅಡ್ಡಗಟ್ಟಿ ಕಾರು ಸಮೇತ ಚಿನ್ನ ದರೋಡೆ

ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ಮೊಬೈಲ್ ನೆಟ್‌ವರ್ಕ್ ಇಲ್ಲದ ಪ್ರದೇಶವಾಗಿರುವ ಮೂಲೆಹೊಳೆ ಚೆಕ್ ಪೋಸ್ಟ್ ಸಮೀಪ ಆಭರಣ ತಯಾರಕ ವಿನು ಅವರ 1.3 ಕೆಜಿಗೂ ಹೆಚ್ಚು ಚಿನ್ನವನ್ನು ದರೋಡೆ ಮಾಡಿ ಕಾರು ಸಹಿತ ಆರೋಪಿಗಳು ಪರಾರಿಯಾಗಿದ್ದಾರೆ. ಕೇರಳದ ಗ್ಯಾಂಗ್​ವೊಂದು ಪೂರ್ವನಿಯೋಜಿತ ಕೃತ್ಯ ಎಸಗಿರುವ

ಸಹಕಾರ ಸಂಘದ ನೇಮಕಾತಿಗಳಲ್ಲಿ ಸಹಕಾರ ಪದವಿ ಪಡೆದವರಿಗೆ ಆದ್ಯತೆ: ಸಿಎಂ ಘೋಷಣೆ

ಸಹಕಾರ ಸಂಘದ ನೇಮಕಾತಿಗಳಲ್ಲಿ ಸಹಕಾರ ಡಿಪ್ಲಮೋ, ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು, ಪಠ್ಯಗಳಲ್ಲಿ ಸಹಕಾರಿ ತತ್ವದ ಮಹತ್ವವನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಉದ್ಘಾಟಿಸಿದ ಸಿಎಂ  ಮಾತನಾಡಿ,  ಗ್ರಾಮೀಣ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರತೀ

ಚಾಮರಾಜನಗರಕ್ಕೆ ಬಂದಿರುವ ನನ್ನ ಅಧಿಕಾರ ಭವಿಷ್ಯದಲ್ಲಿಯೂ ಭದ್ರ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೂಢನಂಬಿಕೆ. ಆ ಮೌಢ್ಯವನ್ನು ಹೋಗಲಾಡಿಸಲು ಇಲ್ಲಿಗೆ ಭೇಟಿ ನೀಡಿದ್ದು, ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ ಎಂದು  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಾಮರಾಜನಗರ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ  ಸಿಎಂ  ಮಾತನಾಡಿದರು.  ಐದು ವರ್ಷಗಳಲ್ಲಿ

ಗುಂಡ್ಲುಪೇಟೆಯಲ್ಲಿ ಕೊಟ್ಟ ಸಾಲ ವಾಪಸ್‌ ಕೇಳಿದ್ದಕ್ಕೆ ವ್ಯಕ್ತಿಯ ಕೊಂದೇ ಬಿಟ್ಟರು

ಗುಂಡ್ಲುಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ವೃದ್ಧರೊಬ್ಬರ ಶವವೊಂದು ಪತ್ತೆಯಾಗಿದ್ದು, ಮೃತರನ್ನು ಸ್ವಾಮಿ (70) ಎಂದು ಗುರುತಿಸಲಾಗಿದೆ. ಅವರ ಮೈಮೇಲಿದ್ದ ಚಿನ್ನ ದೋಚಿ ಕೊಲೆ ಮಾಡಲಾಗಿದೆ ಎಂದು ಪತ್ನಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ

ಗುಂಡ್ಲುಪೇಟೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಚಿರತೆ ದಾಳಿ

ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿ ಬಳಿ ಚಿರತೆ ಮೇಕೆಯನ್ನು ಹೊತ್ತೊಯ್ದ ಸ್ಥಳದಲ್ಲಿ  ಕೂಂಬಿಂಗ್ ನಡೆಸುವಾಗ ಅರಣ್ಯ ಇಲಾಖೆಯ ಆನೆ ಕಾವಲುಪಡೆ ಸಿಬ್ಬಂದಿ ಬಂಗಾರ್ ಎಂಬವವರ ಮೇಲೆ  ಚಿರತೆ  ದಾಳಿ ನಡೆಸಿದ್ದು ಕತ್ತು, ತಲೆ, ಕೈ ಗಳನ್ನು ಗಾಯಗೊಳಿಸಿದೆ. ಮೇಕೆಯನ್ನು ಹೊತ್ತೊಯ್ದ  ಸಂದರ್ಭದಲ್ಲಿ ರೈತರು 

ನೀರಾವರಿ ಇಲಾಖೆಗೆ 200-300 ಕೋಟಿ ರೂ. ಅನುದಾನ ನೀಡಬೇಕು: ಆರ್‌ ಅಶೋಕ ಆಗ್ರಹ

ಚಾಮರಾಜನಗರದಲ್ಲಿ ಕೆರೆ ತುಂಬಿಸಲು ಕಾಂಗ್ರೆಸ್‌ ಸರ್ಕಾರ ನೀರಾವರಿ ಇಲಾಖೆಗೆ 200-300 ಕೋಟಿ ರೂ. ಅನುದಾನ ನೀಡಬೇಕು. ಮಾನವ-ವನ್ಯಜೀವಿ ಸಂಘರ್ಷ ತಡೆಯಲು ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌  ಅಶೋಕ ಆಗ್ರಹಿಸಿದರು. ರೈತರೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,