Menu

 ಕನ್ನಡ ಧ್ವಜ ಹಿಡಿದು ಜೈ ಕರ್ನಾಟಕವೆಂದ ಮಹಾರಾಷ್ಟ್ರ ಚಾಲಕ

ಮಹಾರಾಷ್ಟ್ರದಲ್ಲಿ ಕನ್ನಡ, ಕನ್ನಡಿಗರ ಮೇಲೆ ಮರಾಠಿಗರು ನಡೆಸುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಬಾಗಲಕೋಟೆಯಲ್ಲಿ ಕನ್ನಡಿಗರು ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದುರ್ಗ ಹಾಗೂ ಸೋಲಾಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕನ್ನಡಪರ ಹೋರಾಟಗಾರರು ಮಹಾರಾಷ್ಟ್ರ ಬಸ್‌ಗೆ ‘ಜೈ ಕರ್ನಾಟಕ’ ಎಂದು ಬರೆದು ಕನ್ನಡಾಭಿಮಾನ ಮೆರೆದಿದ್ದಾರೆ. ಇಳಕಲ್ ಬಸ್ ನಿಲ್ದಾಣದಿಂದ ಮಹಾರಾಷ್ಟ್ರದ ಸೋಲಾಪುರ ಕಡೆ ಹೊರಟಿದ್ದ ಬಸ್‌ ಅನ್ನು ಕೂಡಲಸಂಗಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದ ಬಾಗಲಕೋಟೆ ಜನರು, ಬಸ್ ಮುಂಭಾಗದ ಗಾಜಿನ ಮೇಲೆ ‘ಜೈ

ಕಂಡಕ್ಟರ್ ಮೇಲೆ ಹಲ್ಲೆ ಅತ್ಯಂತ ಖಂಡನೀಯ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಬೆಳಗಾವಿ: ಬೆಳಗಾವಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಸರ್ಕಾರಿ ನೌಕರನ ಮೇಲೆ ಹಲ್ಲೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇ ಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕೆಎಸ್ಸಾರ್ಟಿಸಿ ಕಂಡಕ್ಟರ್‌ ಮೇಲೆ ಹಲ್ಲೆಕೋರರ ವಿರುದ್ಧ ಗೂಂಡಾ ಕಾಯ್ದೆ: ಸಚಿವ ರಾಮಲಿಂಗಾ ರೆಡ್ಡಿ ತಾಕೀತು

ಬೆಳಗಾವಿಯಲ್ಲಿ ಕರ್ನಾಟಕದ ಬಸ್ ನಿರ್ವಾಹಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕ್ಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಕನ್ನಡದಲ್ಲಿ ಮಾತನಾಡಿ ಎಂದ ವಿಚಾರಕ್ಕೆ ದುಷ್ಕರ್ಮಿಗಳು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಬೆಳಗಾವಿಗೆ ಭೇಟಿ

ಕುಂಭಮೇಳಕ್ಕೆ ತೆರಳುತ್ತಿದ್ದ ಗೋಕಾಕ್‌ನ ಏಳು ಮಂದಿ ಅಪಘಾತಕ್ಕೆ ಬಲಿ

ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಗೋಕಾಕ್‌ನ ಏಳು ಮಂದಿ ಮಧ್ಯಪ್ರದೇಶದಲ್ಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಮಧ್ಯಪ್ರದೇಶದ ಜಬಲಪೂರ ಪೆಹರಾ‌ ಟೋಲ್ ನಾಕಾ ಬಳಿ ಈ ದುರಂತ ಸಂಭವಿಸಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ,

ಕನ್ನಡಿಗರ ವಿರುದ್ಧ ಅವಹೇಳನ: ಎಂಇಎಸ್‌ ಮುಖಂಡನ ವಿರುದ್ಧ ಕೇಸ್‌

ಕೆಎಸ್​ಆರ್​ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಿಗರ ವಿರುದ್ಧ ಹೀನಾಯವಾಗಿ ಮಾತನಾಡಿರುವ ಎಂ​ಇಎಸ್​ ಮುಖಂಡನ ಶುಭಂ‌ ಶಳಕೆ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇಂದು (ಸೋಮವಾರ) ಬೆಳಗಾವಿಯ ಕೆಎಸ್ಸಾರ್ಟಿಸಿ ಘಟಕಕ್ಕೆ

ಮಹಾರಾಷ್ಟ್ರ, ಕರ್ನಾಟಕ ನಡುವೆ ಸಾರಿಗೆ ಬಸ್​ ಸ್ಥಗಿತ

ಕನ್ನಡ ಮಾತನಾಡಿ ಎಂದು ಹೇಳಿದ್ದಕ್ಕೆ ಮರಾಠಿಗರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಂಡಕ್ಟರ್​ ಮೇಲೆ ಮರಾಠಿಗರು ಬೇರೆ ಆರೋಪಗಳನ್ನು ಮಾಡಿದ ಹಿನ್ನೆಲೆ ಕಂಡಕ್ಟರ್​ ವಿರುದ್ಧ ಫೋಕ್ಸೊ ಪ್ರಕರಣ ದಾಖಲಾಗಿದೆ. ಇದರಿಂದ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು,

ಆಕಸ್ಮಿಕವಾಗಿ ಗುಂಡು ಹಾರಿ ಬೆಳಗಾವಿಯ ಯೋಧ ಸಾವು

ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ನೌಕಾಪಡೆಯ ಯೋಧರೊಬ್ಬರು ಚೆನ್ನೈನಲ್ಲಿ ಮೃತಪಟ್ಟಿದ್ದಾರೆ. ಮೃತ ಯೋಧನನ್ನು ಬೆಳಗಾವಿ ಜಿಲ್ಲೆಯ ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್ ಸುಭಾಷ್ ಖಾನಗೌಡರ ಎಂದು ಗುರುತಿಸಲಾಗಿದೆ. ಅವರು ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದು ಅವರ

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆಗೈದು ನದಿಗೆಸೆದಳು

ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ ಜೊತೆಗೆ ಸೇರಿಕೊಂಡು ಪತ್ನಿ ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾಳೆ. ಬಸ್ತವಾಡ ಗ್ರಾಮದ ಅಪ್ಪಾಸಾಬ ಕೊಲೆಯಾ ಗಿದ್ದು, ಆರೋಪಿ ಪತ್ನಿ ಸಿದ್ದವ್ವ ಓಲೇಕಾರ್ ಮತ್ತು ಆಕೆಯ ಪ್ರಿಯಕರ ಗಣಪತಿ

ಪೊಲೀಸ್​ ಠಾಣೆ ಮುಂದೆ‌ ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ

ಬೆಳಗಾವಿಯ ರಾಯಬಾಗ ತಾಲೂಕಿನ ಹಾರೂಗೇರಿಯಲ್ಲಿ ಪೊಲೀಸ್​ ಠಾಣೆಯ ಎದರು ತಂದೆಯ ಶವವಿಟ್ಟು ಇನ್​ಸ್ಪೆಕ್ಟರ್ ಪ್ರತಿಭಟನೆ ನಡೆಸಿದ್ದಾರೆ. ದೇವದುರ್ಗ  ಠಾಣೆಯ ಇನ್​ಸ್ಪೆಕ್ಟರ್​​ ಅಶೋಕ ಸದಲಗಿಯವರು ಹಾರೂಗೇರಿ ಠಾಣೆ ಪಿಎಸ್​ಐ ಮಾಳಪ್ಪ ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್​ಸ್ಪೆಕ್ಟರ್​​ ಅಶೋಕ ಸದಲಗಿ ತಂದೆ

ಮನೆಯವರನ್ನು ಹೊರಗಟ್ಟಿ ಬೀಗ ಜಡಿದ ಮೈಕ್ರೋ ಫೈನಾನ್ಸ್ ಸಿಬ್ಬಂದಿ

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ, ಮನೆ ತೊರೆಯುವುದರ ಜೊತೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಯೇ ಸಾಲಗಾರರನ್ನು ಮನೆಯಿಂದ ಹೊರಗಟ್ಟಿ ಬೀಗ ಜಡಿಯುತ್ತಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದ ಮೌಲಾಸಾಬ ಬೂಕಟಗಾರ ಕುಟುಂಬ ಮತ್ತು ಗದಗ ಜಿಲ್ಲೆ ರೋಣದ ಶ್ಯಾನಭೋಗರ