ಬಳ್ಳಾರಿ
ಮಾಜಿ ಪ್ರಿಯಕರನ ಕಾಟ: ಮದುವೆ ಸಿದ್ಧತೆಯಲ್ಲಿದ್ದ ಯುವತಿ ಸುಸೈಡ್
ಮದುವೆ ಸಿದ್ಧತೆಯಲ್ಲಿದ್ದ ಯುವತಿ ಮಾಜಿ ಪ್ರಿಯಕರನ ಕಿರುಕುಳ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೌಲ್ ಬಜಾರ್‌ನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಫಿರ್ದೋಸ್ ಕೌಲ್ ಬಜಾರ್ ನಿವಾಸಿ ಅಜೀಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತನ ವರ್ತನೆಯಿಂದ ಬೇಸತ್ತು ಬಳಿಕ ಆತನ ಸ್ನೇಹಿತ ಸೋಹೈಲ್ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಳು. ಈ ವಿಚಾರ ತಿಳಿದು ಕೋಪಗೊಂಡ ಅಜೀಂ, ತನ್ನ ಜೊತೆಗಿರುವ ಖಾಸಗಿ ಫೋಟೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು.
ಬಳ್ಳಾರಿಯಲ್ಲಿ ಪತ್ನಿ, ಏಳು ತಿಂಗಳ ಮಗು ಕೊಂದು ವ್ಯಕ್ತಿ ಪರಾರಿ
ಬಳ್ಳಾರಿ ನಗರದ ಅಂದ್ರಾಳ್ ಪ್ರದೇಶದಲ್ಲಿ ಸುತ್ತಿಗೆಯಿಂದ ಹೊಡೆದು ಪತ್ನಿ ಮತ್ತು ಏಳು ತಿಂಗಳ ಮಗುವನ್ನು ವ್ಯಕ್ತಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೊನ್ನೂರಸ್ವಾಮಿ ಎಂಬಾತ ಪತ್ನಿ ರಾಜೇಶ್ವರಿ ಹಾಗೂ ಮಗಳು ಅಶ್ವಿನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು
ಬರ ಘೋಷಿಸದಿದ್ದರೆ “ಹೊಲ ಗದ್ದೆ ಚಲೋ” ಆರಂಭ: ಆರ್ ಅಶೋಕ ಎಚ್ಚರಿಕೆ
ರಾಜ್ಯ ಸರ್ಕಾರ ಕೂಡಲೇ ಬರಗಾಲ ಘೋಷಣೆ ಮಾಡದಿದ್ದರೆ ಆಗಸ್ಟ್ 3 ರಿಂದ ʼಚಲೋ ಹೊಲ ಗದ್ದೆʼ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌ಅಶೋಕ ಎಚ್ಚರಿಸಿದರು. ಬಳ್ಳಾರಿಯ ಕರೆಕಲ್ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ
ವಿಚ್ಛೇದಿತೆಯೊಂದಿಗೆ ಪ್ರೇಮವಿವಾಹ: ಅರತಕ್ಷತೆ ರಾತ್ರಿಯೇ ಯುವಕನ ಕೊಲೆ
ಬಳ್ಳಾರಿಯ ಬಟ್ಟಿ ಏರಿಯಾದಲ್ಲಿ ಪ್ರೀತಿಸಿ ಮದುವೆಯಾಗಿದ್ದ ನಭೀ ರಸೂಲ್ ಎಂಬ ಯುವಕನನ್ನು ಆರತಕ್ಷತೆ ದಿನವೇ ರಾತ್ರಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಯುವತಿಯ ಮನೆಯವರ ವಿರೋಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವುದಾಗಿ ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನಭೀ ರಸೂಲ್ ಹತ್ಯೆಯಾದ
ಕೌಟುಂಬಿಕ ಕಲಹ: ರಾಜಿ ಮಾಡಿಸಲು ಬಂದಿದ್ದ ಮಾವ, ಪತ್ನಿಯ ಕೊಲೆ
ಹೆಂಡತಿಯ ಮೇಲೆ ಅನುಮಾನ ವ್ಯಕ್ತಪಡಿಸಿ ನಿತ್ಯ ಜಗಳವಾಡುತ್ತಿದ್ದ ಪತಿಯೊಬ್ಬ, ರಾಜಿ ಪಂಚಾಯಿತಿ ಮಾಡಲು ಬಂದಿದ್ದ ಮಾವನೊಂದಿಗೆ ತನ್ನ ಪತ್ನಿಯನ್ನು ಕೂಡ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಳ್ಳಾರಿ ನಗರದ ಗುಗ್ಗರಹಟ್ಟಿಯಲ್ಲಿ ನಡೆದಿದೆ. ನಾಗಲಕ್ಷ್ಮೀ (24) ಹಾಗೂ ತಂದೆ ಶ್ರೀನಿವಾಸ
ವಾರಕ್ಕೊಂದು ಬೈಕ್ ಕಳವು: ನಕಲಿ ಆರ್‌ಸಿ ಜೊತೆ ರೈತರಿಗೆ ಮಾರಾಟ
ಬಳ್ಳಾರಿಯ ಸಿರಗುಪ್ಪ ತಾಲೂಕು ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ 20.50 ಲಕ್ಷ ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ 41 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳ್ಳಾರಿಯ ಅಹಂಬಾವಿ ನಗರದ ನಿವಾಸಿ, ಆಟೋ ಚಾಲಕ ಸಿದ್ದಾರೆಡ್ಡಿ ಬಂಧಿತ ಆರೋಪಿ. ಒಂದೂವರೆ ವರ್ಷದಿಂದ ಬೈಕ್ ಕಳ್ಳತನದಲ್ಲಿ ತೊಡಗಿದ್ದ
ಎರಡು ಕೋಟಿ ವಿಮೆ ಹಣಕ್ಕಾಗಿ ಪ್ರಿಯಕರನ ಜೊತೆ ಸೇರಿ ಗಂಡನಿಗೆ ವಿಷವಿಕ್ಕಿ ಕೊಲೆ
ಎರಡು ಕೋಟಿ ರೂ. ವಿಮೆ ಹಣ ಪಡೆಯುವುದಕ್ಕಾಗಿ ಚಿಕ್ಕೋಡಿಯಲ್ಲಿ ಮಾಜಿ ಸೈನಿಕನನ್ನು ಪತ್ನಿಯೇ ಕೊಂದಿರುವ ಘಟನೆಯೊಂದು ಬಹಿರಂಗಗೊಂಡಿದೆ. ಗಂಡನಿಗೆ ವಿಷದ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿರುವ ಆರೋಪ ಗಂಡ ಇದ್ದಾಗಲೂ ಕೊಲೆಗಡುಕಿ ಪತ್ನಿ ಪ್ರಿಯಕರನ ಜೊತೆ ಓಡಾಡಿಕೊಂಡಿದ್ದಳು, ಪ್ರಿಯಕರನ ಜೊತೆ ಸೇರಿ
ಪಂಕ್ಚರ್ ಆಗಿ ನಿಂತಿದ್ದ ಟ್ಯಾಂಕರ್‌ಗೆ ಲಾರಿ ಡಿಕ್ಕಿ: ಚಾಲಕ ಸಜೀವ ದಹನ
ಪಂಕ್ಚರ್ ಆಗಿ ನಿಂತಿದ್ದ ಟ್ಯಾಂಕರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳು ತಕ್ಷಣ ಹೊತ್ತಿ ಉರಿದಿದ್ದು, ಚಾಲಕ ಸಜೀವ ದಹನವಾಗಿರುವ ಘಟನೆ ಬಳ್ಳಾರಿ ಜಿಲ್ಲೆ ಗಡಿಭಾಗ ಆಂಧ್ರದ ಅನಂತಪುರ ಜಿಲ್ಲೆಯ ಡಿ. ಹಿರೇಹಾಳ ಬಳಿ ನಡೆದಿದೆ. ಪಂಕ್ಚರ್ ಆಗಿದ್ದ ಸಿಮೆಂಟ್ ಟ್ಯಾಂಕರ್
ಬಳ್ಳಾರಿ ಪಿಜಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು: ಕೊಲೆಯೆಂದು ಪೋಷಕರ ಆರೋಪ
ಬಳ್ಳಾರಿಯ ಅಶೋಕ್ ನಗರದ ಚೌದ್ರಿ ರೆಸಿಡೆನ್ಸ್ ಪಿಜಿ ಕೊಠಡಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಶ್ವಾಸ್ (24) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಮೃತನ ತಲೆಗೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ. ಹೀಗಾಗಿ
ಸಿರಗುಪ್ಪದಲ್ಲಿ ಬೈಕ್ ರಸ್ತೆ ಗುಂಡಿಗೆ ಬಿದ್ದು ನರ್ಸ್ ಬಲಿ
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಾಣಕನೂರು ಕ್ರಾಸ್ ಬಳಿ ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ನರ್ಸ್ ಬಲಿಯಾಗಿದ್ದು, ಆಕೆಯ ಪತಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ರಾತ್ರಿ ಡ್ಯೂಟಿ ಮುಗಿಸಿ ಮನೆಗೆ ಮರಳುತ್ತಿದ್ದ ದಂಪತಿ ಬೈಕ್ ಸಮೇತ ರಸ್ತೆ ಗುಂಡಿಗೆ ಬಿದ್ದಿದ್ದು, ಪತ್ನಿ




