ಮಧ್ಯಪ್ರದೇಶದ ಮಂದ್ಸೌರ್ನಲ್ಲಿ ಆಭರಣ ವ್ಯಾಪಾರಿ ಮತ್ತು ಪತ್ನಿಯನ್ನು ಮನೆಯೊಳಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವ್ಯವಹಾರದ ವಿವಾದವೇ ಈ ಕೊಲೆಗಳಿಗೆ ಕಾರಣ ಎನ್ನಲಾಗಿದೆ. ಅದೇ ಸ್ಥಳದಲ್ಲಿ ಮತತ್ತೊಬ್ಬ ವ್ಯಕ್ತಿ ವಿಕಾಸ್ ಎಂಬವವರ ಶವವೂ ಪತ್ತೆಯಾಗಿದೆ.
ದಿಲೀಪ್ ಜೈನ್ ಮತ್ತು ಅವರ ಪತ್ನಿ ರೇಖಾ ಕೊಲೆಯಾಗಿರುವ ದಂಪತಿ. ಮತ್ತೊಬ್ಬ ವ್ಯಕ್ತಿಯನ್ನು ರಾಜಸ್ಥಾನದ ನಿವಾಸಿ ವಿಕಾಸ್ ಸೋನಿ ಎಂದು ಪೊಲೀಸರು ಗುರುತಿಸಿದ್ದಾರೆ. ಗುಂಡಿನ ದಾಳಿ ನಡೆಯುವ ಮುನ್ನ ಮೂವರು ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಬಳಿಕ ಮನೆಯೊಳಗೆ ಗುಂಡು ಹಾರಿಸಿದ ಸದ್ದು ಕೇಳಿಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ಮೀನಾ ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲಿ ಒಂದು ಪಿಸ್ತೂಲ್ ಮತ್ತು ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ವಿಕಾಸ್ ಸೋನಿ ಆಯುಧವನ್ನು ತಂದಿದ್ದರೋ ಅಥವಾ ಘಟನೆಯಲ್ಲಿ ಬೇರೆ ಯಾರದಾದರೂ ಪಾತ್ರವಿದೆಯೇ ಎಂಬ ಬಗ್ಗೆ ಪೊಲೀಸರು ತನಿಕೆ ಕೈಗೊಂಡಿದ್ದಾರೆ.
ಮನೆಯ ಸುತ್ತ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡು ದಾಖಲಾಗಿರುವ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.


