Menu

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ  ನಾಳೆ ಜೆಡಿಎಸ್‌ ಪ್ರತಿಭಟನೆ

ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ, ಇದು  ಬೆಲೆ ಏರಿಕೆಯಿಂದ ಬಸವಳಿದಿರುವ ಸಾಮಾನ್ಯ ಕನ್ನಡಿಗನ ದನಿ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು,  ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಂತ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ “ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ” ಎಂಬ ಘೋಷವಾಕ್ಯದೊಂದಿಗೆ ನಾಳೆ ನಡೆಯುವ “ವಿಧಾನಸೌಧ” ಚಲೋ ಚಳುವಳಿಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬೆಲೆಗಳು ಏರಿಕೆಯಾಗುತ್ತಲೇ ಇವೆ. 48 ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ವಿರುದ್ದ ನಮ್ಮ ಹೋರಾಟ. ಯಾವುದನ್ನೂ  ಬೆಲೆ ಏರಿಕೆ ಬಿಟ್ಟಿಲ್ಲ. ಜನರು ಜೀವನ ಮಾಡೋಕೆ ಆಗ್ತಿಲ್ಲ ಎಂದು ಕಿಡಿಕಾರಿದರು.

ವಿದ್ಯುತ್ ಬೆಲೆ ಹೆಚ್ಚಳವಾಯಿತು, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳವಾಯಿತು, ಹಾಲಿನ ದರ ಹೆಚ್ಚಳವಾಯಿತು, ರಾಜ್ಯದಲ್ಲಿರುವ ಟೋಲ್ ಗಳ ದರ ಹೆಚ್ಚಳವಾಯಿತು, ಕಸ ಸಂಗ್ರಹಣೆ ಮೇಲೂ ತೆರಿಗೆ ಹಾಕಲಾಗಿತು, ನಮ್ಮ ಮಟ್ರೋ ದರ, ಕೆಎಸ್ ಆರ್ ಟಿಸಿ ಬಸ್ಸುಗಳ ಟಿಕೆಟ್ ದರ ಏರಿಕೆ, ನೀರಿನ ದರ ಏರಿಕೆ ಹೀಗೆ…  ಜನರಿಗೆ ದಶದಿಕ್ಕುಗಳಿಂದಲೂ ಬೆಲೆಯೇರಿಕೆಯ ಬರೆಗಳು ಬೀಳುತ್ತಲೇ ಇವೆ ಎಂದು ನಿಖಿಲ್ ಕುಮಾರಸ್ವಾಮಿ  ಆರೋಪಿಸಿದರು.

Related Posts

Leave a Reply

Your email address will not be published. Required fields are marked *