Menu

ಜೈಸ್ವಾಲ್ ಅಜೇಯ ಶತಕ: ಬೃಹತ್ ಮೊತ್ತದತ್ತ ಭಾರತ

yashswi jaiswal

ನವದೆಹಲಿ: ಆರಂಭಿಕ ಯಶಸ್ವಿ ಜೈಸ್ವಾಲ್ ಶತಕ ಹಾಗೂ ಸಾಯಿ ಸುದರ್ಶನ್ ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬೃಹತ್ ಮೊತ್ತದತ್ತ ಮುನ್ನಡೆದಿದೆ.

ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ದಿನದಾಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 2 ವಿಕೆಟ್ ಕಳೆದುಕೊಂಡು 318 ರನ್ ಗಳಿಸಿದೆ.

ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಕೆಎಲ್ ರಾಹುಲ್ 38 ರನ್ ಗಳಿಸಿದ್ದಾಗ ವಾರಿಕನ್ ಎಸೆತದಲ್ಲಿ ಎಡವಿ ನಿರ್ಗಮಿಸಿದರು. ಮತ್ತೊಂದೆಡೆ ಮೊದಲ ಟೆಸ್ಟ್ ನಲ್ಲಿ ವಿಫಲರಾಗಿದ್ದ ಜೈಸ್ವಾಲ್ ಶತಕ ಸಿಡಿಸಿ ತಂಡವನ್ನು ಆಧರಿಸಿದರು.

145 ಎಸೆತಗಳಲ್ಲಿ ಶತಕ ಪೂರೈಸಿದ ಯಶಸ್ವಿ ಜೈಸ್ವಾಲ್ 253 ಎಸೆತಗಳಲ್ಲಿ 22 ಬೌಂಡರಿ ಒಳಗೊಂಡ 173 ರನ್ ಬಾರಿಸಿ ಔಟಾಗದೇ ಉಳಿಯುವ ಮೂಲಕ ದ್ವಿಶತಕದತ್ತ ದಾಪುಗಾಲಿರಿಸಿದ್ದಾರೆ. ಇದು ಜೈಸ್ವಾಲ್ ಗೆ 7ನೇ ಟೆಸ್ಟ್ ಶತಕವಾಗಿದೆ.

ಟೆಸ್ಟ್ ತಂಡದಲ್ಲಿ ಜಾಗ ಪಡೆದ ನಂತರ ಸತತ ವೈಫಲ್ಯ ಅನುಭವಿಸುತ್ತಿದ್ದ ಸಾಯಿ ಸುದರ್ಶನ್ 165 ಎಸೆತಗಳಲ್ಲಿ 12 ಬೌಂಡರಿಯೊಂದಿಗೆ 87 ರನ್ ಸಿಡಿಸಿದ್ದಾಗ ವಾರಿಕನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದು ಚೊಚ್ಚಲ ಶತಕದಿಂದ ವಂಚಿತರಾದರು.

ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಎರಡನೇ ವಿಕೆಟ್ ಗೆ 193 ರನ್ ಜೊತೆಯಾಟದಿಂದ ತಂಡವನ್ನು ಆಧರಿಸಿದರು. ಇವರಿಬ್ಬರ ಜೊತೆಯಾಟ ಬೇರ್ಪಟ್ಟ ನಂತರ ಆಗಮಿಸಿದ ನಾಯಕ ಶುಭಮನ್ ಗಿಲ್ ಅಜೇಯ 20 ರನ್ ಬಾರಿಸಿ ಜೈಸ್ವಾಲ್ ವಿಕೆಟ್ ಕಾಯ್ದುಕೊಂಡಿದ್ದಾರೆ.

ಮೊದಲ ಪಂದ್ಯಕ್ಕೆ ಹೋಲಿಸಿದರೆ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿ ಸಾಕಷ್ಟು ಸುಧಾರಿಸಿದ್ದು, ಭಾರತದ ಬ್ಯಾಟ್ಸ್ ಮನ್ ಗಳು ಎಚ್ಚರಿಕೆಯಿಂದ ಆಡುವಂತೆ ಮಾಡಿದರು. ಆದರೆ ಜೊಮಲ್ ವಾರಿಕನ್ 2 ವಿಕೆಟ್ ಪಡೆದು ಯಶಸ್ವಿ ಎನಿಸಿಕೊಂಡರೆ ಉಳಿದ ಬೌಲರ್ ಗಳು ನಿರಾಸೆ ಮೂಡಿಸಿದರು.

ಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 90 ಓವರ್ ಗಳಲ್ಲಿ 2 ವಿಕೆಟ್ ಗೆ 318 (ಜೈಸ್ವಾಲ್ ಅಜೇಯ 173, ಸಾಯಿ ಸುದರ್ಶನ್ 87, ಕೆಎಲ್ ರಾಹುಲ್ 38, ಗಿಲ್ ಅಜೇಯ 20, ವಾರಿಕನ್ 60/2).

Related Posts

Leave a Reply

Your email address will not be published. Required fields are marked *