Menu

ರುಚಿಕರ ಪ್ರಾನ್ಸ್‌ ಸುಕ್ಕ ತಯಾರಿಸುವುದು ಸುಲಭ

ಸ್ವಲ್ಪ ದುಬಾರಿ ಎನಿಸಿದರೂ ಸಿಗಡಿ ಸುಕ್ಕ ಕರಾವಳಿಯಲ್ಲಿ ಬಹಳ ಅಚ್ಚುಮೆಚ್ಚಿನ ಡಿಶ್‌ ಆಗಿದ್ದು, ಸಾಮಾನ್ಯವಾಗಿ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುತ್ತಾರೆ.
ಬೇಕಾದ ಸಾಮಗ್ರಿಗಳು: ಕ್ಲೀನ್‌ ಮಾಡಿದ ಅರ್ಧಕೆಜಿ ಸಿಗಡಿ, ಎರಡು ಈರುಳ್ಳಿ, ಸ್ವಲ್ಪ ಶುಂಠಿ, ಐದು ಎಸಳು ಬೆಳ್ಳುಳ್ಳಿ, ಕರಿಬೇವು ಎಲೆ, ಕೊತ್ತಂಬರಿ ಸೊಪ್ಪು, ತುಪ್ಪ. ಹುರಿದಿಟ್ಟ ಒಂದು ಟೇಬಲ್‌ ಸ್ಪೂನ್‌ ಕೊತ್ತಂಬರಿ ಬೀಜ, ಅರ್ಧಟೇಬಲ್‌ ಸ್ಪೂನ್‌ ಜೀರಿಗೆ, ನಾಲ್ಕೈದು ಮೆಂತೆ ಕಾಳು, ನಾಲ್ಕೈದು ಕರಿಮೆಣಸು, ಹತ್ತು ಒಣಮೆಣಸು.

ಮಾಡುವುದು ಹೇಗೆ: ಪಾತ್ರೆ ಬಿಸಿಯಾದ ಮೇಲೆ ಸ್ವಲ್ಪ ತುಪ್ಪ ಹಾಕಿ, ನಂತರ ಹೆಚ್ಚಿದ ಒಂದು ಈರುಳ್ಳಿ ಮತ್ತು ಟೊಮೆಟೊ, ಕರಿಬೇವು ಸೇರಿಸಿ ಅದು ಸ್ವಲ್ಪ ಮೆತ್ತಗಾದ ಮೇಲೆ ಕ್ಲೀನ್‌ ಮಾಡಿಟ್ಟ ಸಿಗಡಿ, ಸ್ವಲ್ಪ ಅರಶಿಣ, ಸ್ವಲ್ಪ ಉಪ್ಪು ಸೇರಿಸಿ ಹತ್ತು ನಿಮಿಷ ಸಣ್ಣ ಉರಿಯಲ್ಲಿ ಐದು ನಿಮಿಷ ಮುಚ್ಚಿಟ್ಟು ಬೇಯಿಸಿ. ಬಳಿಕ ಹುರಿದಿಟ್ಟ ಮಸಾಲೆ ಸಾಮಗ್ರಿಗಳನ್ನು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಮಿಕ್ಸಿಯಲ್ಲಿ ತರಿತರಿ ಪೌಡರ್‌ ಮಾಡಿ ಬೇಯುತ್ತಿರುವ ಸಿಗಡಿಗೆ ಸೇರಿಸಿ ನಿಮಗೆ ಬೇಕಿರುವಷ್ಟು ಹದಕ್ಕೆ ಸ್ವಲ್ಪವೇ ನೀರು ಸೇರಿಸಿ ಮಿಕ್ಸ್‌ ಮಾಡಿ ಐದು ನಿಮಿಷ ಸಣ್ಣ ಉರಿಯಲ್ಲಿ ಬಿಡಿ, ಒಂದು ಹೆಚ್ಚಿದ ಈರುಳ್ಳಿ ಮತ್ತು ಕಾಯಿ ತುರಿಯನ್ನು ಸ್ವಲ್ಪ ಹುರಿದು ತರತರಿ ಪೌಡರ್‌ ಮಾಡಿ ಬೇಯುತ್ತಿರುವ ಸಿಗಡಿಗೆ ಸೇರಿಸಿ, ಬೇಕಿದ್ದರೆ ಉಪ್ಪು ಕೂಡ ಸೇರಿಸಿ ಎರಡು ನಿಮಿಷ ಸಣ್ಣ ಉರಿಯಲ್ಲಿ ಮುಚ್ಚಿಡಿ ,ಮಧ್ಯೆ ಒಮ್ಮೆ ತಿರುವಿ. ಕೊನೆಗೆ ಸ್ವಲ್ಪ ಕೊತಂಬರಿ ಸೊಪ್ಪು ಹಾಕಿ. ರೆಡಿಯಾದ ಸಿಗಡಿ ಸುಕ್ಕ ಊಟದ ಜೊತೆಗೆ ಅದ್ಭುತ ಸೈಡ್‌ ಡಿಶ್‌.

Related Posts

Leave a Reply

Your email address will not be published. Required fields are marked *