ಯಾದಗಿರಿ:ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯನವರನ್ನು ಕೆಳಗಿಳಿಸುವುದು ಕಷ್ಟ. ಸ್ವತಃ ಅವರೇ ಅಧಿಕಾರ ತ್ಯಜಿಸಬೇಕಾಗುತ್ತದೆ ಎಂದು ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ.
ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಡಿಕೆ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆ ಯಾವಾಗ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಭವಿಷ್ಯವಾಣಿ ಹೊರಬಿದ್ದಿದೆ.
ಮುಂದಿನ ಮುಖ್ಯವಾಗಿ ಯಾರಾಗಲಿದ್ದಾರೆ, ಡಿಕೆ ಶಿವಕುಮಾರ್ ಜೊತೆ ಅಧಿಕಾರ ಹಂಚಿಕೆ ಯಾವಾಗ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಮುಂಬರುವ ವರ್ಷದಲ್ಲಿ ರಾಜ್ಯಕ್ಕೆ ಉತ್ತಮ ಮಳೆ, ಬೆಳೆ ಮತ್ತು ಸುಭೀಕ್ಷೆ ಇರುತ್ತದೆ ಎಂದು ಭವಿಷ್ಯ ನುಡಿದಿರುವ ಸ್ವಾಮೀಜಿ, ಜಾಗತಿಕವಾಗಿ ತೊಂದರೆಗಳು ಹೆಚ್ಚಾಗಲಿವೆ ಎಂದು ಎಚ್ಚರಿಸಿದ್ದಾರೆ.
ಭೂಕಂಪ, ಸುನಾಮಿಗಳು ಹೆಚ್ಚಾಗಿ ಸಂಭವಿಸುವ ಸಾಧ್ಯತೆ ಇದೆ, ಯುಗಾದಿ ನಂತರ ವಿವರವಾದ ಭವಿಷ್ಯ ನುಡಿಯುವುದಾಗಿ ಹೇಳಿದ್ದಾರೆ.
ಅಷ್ಟು ಸುಲಭವಲ್ಲ!
ಹಾಲುಮತ ಸಮಾಜದ ಬಗ್ಗೆ ಮಾತನಾಡುತ್ತ, ಹಾಲು ಮತ ಸಮಾಜವು ಪ್ರಾಚೀನ ಕಾಲದಿಂದ ದೈವದಾರಾಧನೆ ಮಾಡುವ ಸಮಾಜ, ಹಾಲು ಕೆಟ್ಟರು ಹಾಲು ಸಮಾಜ ಕೆಡದು, ಹಕ್ಕು ಬುಕ್ಕರು ವಿಜಯನಗರ ಸಾಮ್ರಾಜ್ಯ ಕಟ್ಟಿದರು, ಹಾಲು ಮತ ಸಮಾಜದವರಲ್ಲಿ ರಾಜ್ಯದ ಅಧಿಕಾರವಿದೆ, ಸಿಎಂ ಕುರ್ಚಿಯಿಂದ ಬಿಡಿಸುವದು ಅಷ್ಟು ಸುಲಭವಲ್ಲ, ಸಿಎಂ ಸಿದ್ದರಾಮಯ್ಯ ಅವರು ಅವರಾಗೆ ಸಿಎಂ ಸ್ಥಾನ ಬಿಡಬೇಕು ಹೊರತು ನೀವು ಬಿಡಿಸಿಕೊಳ್ಳುವದು ಅಷ್ಟು ಸುಲಭವಲ್ಲ ಎಂದಿದ್ದಾರೆ.
ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ:
ಯುಗಾದಿ ಇನ್ನೂ ಒಂದು ತಿಂಗಳಿದ್ದು,ಈಗಲೇ ಮುಂದಿನದು ಹೇಳುವದು ಕಷ್ಟ, ನಮ್ಮ ದೃಷ್ಟಿಯಲ್ಲಿ ಬರುವ ಸಂವತ್ಸರದಲ್ಲಿ ರಾಜ್ಯಕ್ಕೆ ತೊಂದರೆ ತಾಪತ್ರೆವಿಲ್ಲ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ ಸುಭೀಕ್ಷತೆ ಇರುತ್ತದೆ, ನಾಡಿನಲ್ಲಿ ಯಾವುದೇ ಕೊರತೆ ಕಾಣುತ್ತಿಲ್ಲ, ಯುಗಾದಿ ನಂತರ ಕರ್ನಾಟಕ ಬಗ್ಗೆ ಗೊತ್ತಾಗಲಿದೆ” ಎಂದು ಹೇಳಿದ್ದಾರೆ.
ಜಾಗತಿಕ ಪರಿಸ್ಥಿತಿ ಕುರಿತು, “ಜಾಗತೀಕವಾಗಿ ಬಹಳ ಅಜಾಗರೂಕತೆ ಇದ್ದು ಬಹಳ ತೊಂದರೆ ಇದೆ, ಕಳೆದ ವರ್ಷಕ್ಕಿಂತಲೂ ಭೀಕರತೆ ಕಾಣುವ ಲಕ್ಷಣವಿದೆ, ಇತ್ತೀಚಿನ ದಿನಗಳಲ್ಲಿ ಭೂಕಂಪ ಹೆಚ್ಚಾಗುತ್ತಿವೆ, ಇದನ್ನು ಹೋದ ವರ್ಷ ನಾನು ಹೇಳಿದ್ದೆ, ಭೂಕಂಪ, ಜನರ ಸಾವು ನೋವು ಆಗುವುದು, ಕಟ್ಟಡ ಬಿಳುವದು ಮುಂದುವರೆಯಲಿದೆ, ಭೂ ಸುನಾಮಿ, ಜಲ ಸುನಾಮಿ, ವಾಯು ಸುನಾಮಿ ಕಾಣಿಸಿಕೊಳ್ಳಲಿವೆ, ಇಲ್ಲಿ ವರಗೆ ಜಲ ಸುನಾಮಿ ಆಗುತಿತ್ತು ಈ ಬಾರಿ ಭೂ ಸುನಾಮಿ ಇದೆ, ಜಲ ಸುನಾಮಿ ಹಾಗೂ ವಾಯು ಸುನಾಮಿ ಹೆಚ್ಚಾಗಲಿದೆ, ಬಾಹ್ಯ ಸುನಾಮಿ ಅಂದರೆ ಬಾಹ್ಯಾಕಾಶದಲ್ಲಿ ತೊಂದರೆ ಆಗಲಿದೆ ಅದು ಯುಗಾದಿ ನಂತರ ಹೇಳುತ್ತೇನೆ” ಎಂದು ವಿವರಿಸಿದ್ದಾರೆ