Thursday, January 30, 2025
Menu

ಬೆಳಗಾವಿ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

it raid

ಬೆಳಗಾವಿ: ಆದಾಯ ತೆರಿಗೆ ವಂಚನೆಯ ಹಿನ್ನೆಲೆಯಲ್ಲಿ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ, ಅಜಿತ್ ಪಟೇಲ್ ಮತ್ತು ಅಶೋಕ ಹುಂಬರವಾಡಿ ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಸಕ್ಕರೆ ಕಾರ್ಖಾನೆ, ಕಬ್ಬಿಣ ಹಾಗೂ ಗ್ರಾನೈಟ್ ಉದ್ಯಮಿಯಾಗಿರುವ ದೊಡ್ಡಣ್ಣವರ ಕುಟುಂಬದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಅವರು ದೇಶ-ವಿದೇಶಗಳಿಗೆ ಕಬ್ಬಿಣ ಹಾಗೂ ಗ್ರಾನೈಟ್ ರಫ್ತು ಮಾಡುತ್ತಾರೆ. ಅಲ್ಲದೇ, ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನು ಇವರ ಕುಟುಂಬ ಹೊಂದಿದೆ.

ಅದೇ ರೀತಿ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್, ಗಣೇಶಪುರದಲ್ಲಿರುವ ಅಶೋಕ ಐರನ್ ಮಾಲೀಕ ಅಶೋಕ ಹುಂಬರವಾಡಿ ಮನೆಯಲ್ಲೂ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಐಟಿ ಅಧಿಕಾರಿಗಳು ಉದ್ಯಮಿಗಳ ಮನೆ ಕಚೇರಿಗಳ ಮೇಲೆ ಎಕಕಾಲದ ದಾಳಿ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *