ವಾಲ್ಮೀಕಿ ಸಮುದಾಯದವರ ಸಮಾವೇಶ ಕಾರ್ಯಕ್ರಮದಲ್ಲಿ ಕುರುಬ ಸಮುದಾಯದವರ ಹೆಸರು ಪ್ರಸ್ತಾಪಿಸಿ ಮಾಜಿ ಸಂಸದ ಉಗ್ರಪ್ಪನವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿದ್ದು ಸರಿಯಲ್ಲ, ಒಂದು ತರ ನೋಡಿದರೆ ರಾಜಕೀಯ ಚಟಕ್ಕೆ ಹಾಗೂ ಜನರ ಚಪ್ಪಾಳೆಗಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡ ಕೆ.ವಿರೂಪಾಕ್ಷಪ್ಪ ಹೇಳಿದರು .
ಸಿಂಧನೂರಿನ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುರುಬ ಸಮುದಾಯದವರನ್ನು ಎಸ್ಟಿ ಗೆ ಸೇರಿಸಲು ವಿಷಯದ ಬಗ್ಗೆ ಉಗ್ರಪ್ಪನವರು ಮಾತನಾಡಿ ನಮ್ಮ ಸಮುದಾಯದ ಗಂಗಾಳದ ಅನ್ನವನ್ನು ಕಸಿದುಕೊಳ್ಳುವ ಕೆಲಸ ಕುರುಬ ಸಮುದಾಯದವರು ಹಾಗೂ ಮುಖ್ಯಮಂತ್ರಿಗಳು ಮಾಡಬಾರದು ಎಂದಿದ್ದಾರೆ, ಹಗುರವಾಗಿ ಜಾತಿಯ ಬಗ್ಗೆ ಉಗ್ರಪ್ಪನವರು ಮಾತನಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ನನ್ನದು ಏನೂ ಇಲ್ಲ, ಹಿಂದೆ ಬೊಮ್ಮಾಯಿ ಅವರು ಶಿಫಾರಸು ಮಾಡಿದ್ದಾರೆ ಎಂದಿದ್ದಾರೆ. ಈ ತರ ಶಬ್ದ ಬಳಕೆಗಳು ನೋಡಿದರೆ ಎಂಥ ಹಿರಿಯ ರಾಜಕಾರಣಿಗಳು ಎಂಬುದು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮಾಜಿ ಸಂಸದ ಉಗ್ರಪ್ಪನವರು ಹಿರಿಯರು ಇದ್ದಾರೆ ,ನ್ಯಾಯವಾದಿಗಳು ಇದ್ದಾರೆ. ಸರಿಯಾಗಿ ಅರ್ಥ ಆಗುವ ರೀತಿಯಲ್ಲಿ ಮಾತನಾಡಬೇಕಿತ್ತು, ಸಮುದಾಯದವರ ಚಪ್ಪಾಳೆಗಾಗಿ ಮಾತನಾಡುವ ಕೆಲಸ ಮಾಡಿದ್ದಾರೆ, ಕಾನೂನು ಪ್ರಕಾರ ಯಾವ ತರ ಯಾವ ಯಾವ ಸಮುದಾಯಕ್ಕೆ ಮೀಸಲಾತಿ ದೊರಕುತ್ತದೆ ಎಂಬುದು ಅರ್ಥಮಾಡಿಕೊಳ್ಳಬೇಕಿತ್ತು ಎಂದು ಹೇಳಿದರು.
ಹಿಂದಿನಿಂದಲೂ ಕುರುಬರನ್ನು ಎಸ್ಟ್ಟಿಗೆ ಸೇರಿಸಲು ಹೋರಾಟ ಇದೆ : ಕುರುಬ ಸಮುದಾಯದ ಪೂಜ್ಯರು ಹಾಗೂ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ನೇತೃತ್ವದಲ್ಲಿ ಹಾಗೂ ನನ್ನ ಅಧ್ಯಕ್ಷತೆಯಲ್ಲಿ ಅನೇಕ ಜಿಲ್ಲಾ ಕೇಂದ್ರಗಳಲ್ಲಿ ಕುರುಬರನ್ನು ಸೇರಿಸಲು ಹೋರಾಟ ಮಾಡಿದ್ದೇವೆ, ಇದಕ್ಕೂ ಮುಂಚೆ ವಾಲ್ಮೀಕಿ ಸಮುದಾಯದ ಪೂಜ್ಯರಲ್ಲಿ, ಅನೇಕ ಮುಖಂಡರಲ್ಲಿ ಚರ್ಚೆ ಮಾಡಿದ್ದೇವೆ, ಸರ್ಕಾರದ ಗಮನ ಸೆಳೆದಿದ್ದೇವೆ, ಆಗಿನ ಬಿಜೆಪಿ ಸರಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ, ಯಾವುದೇ ಮೀಸಲಾತಿ ಮಾಡುವ ಕೆಲಸ ಕೇಂದ್ರಕ್ಕೆ ಬಿಟ್ಟಿದ್ದು ಎಂದರು.
ಸರ್ಕಾರ ಮಾಡುವ ಕೆಲಸ ಮಾಡುತ್ತಿದೆ ,ಇದಕ್ಕೆ ಅಪಸ್ವರ ಯಾಕೆ, ಜನಸಂಖ್ಯೆ ಅನುಗುಣವಾಗಿ ಹಾಗೂ ಯಾವ ಯಾವ ಸಮುದಾಯ ಹಿಂದುಳಿದಿವೆ ಎಂಬುದನ್ನು ಸರ್ಕಾರ ಗಮನಿಸುತ್ತದೆ, ಸರಕಾರ ತನ್ನ ಕೆಲಸ ತಾನು ಮಾಡುತ್ತದೆ, ಒಬ್ಬರು ಇನ್ನೊಂದು ಸಮುದಾಯಕ್ಕೆ ಅಡ್ಡಿಪಡಿಸುವುದು ಸರಿಯಲ್ಲ , ಕಾನೂನಾತ್ಮಕವಾಗಿ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಹೇಳಿದರು.