Menu

ಕಕ್ಷೆ ಸೇರಲು ವಿಫಲಗೊಂಡ ಇಸ್ರೋದ EOS-09 ಉಪಗ್ರಹ

ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.

ಬೆಳಗ್ಗೆ 5:59ಕ್ಕೆ EOS-09 ರೇಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೇಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರ ದಲ್ಲಿ ನೆಲೆಯಾಗಬೇಕಿತ್ತು. ಆದರೆ 3ನೇ ಹಂತದ ಸಂಪರ್ಕ ಕಳೆದುಕೊಂಡ ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲ ವಾಗಿದೆ. ರಾಕೆಟ್ ಉಡಾವಣೆಯ ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದು ಈ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರಹವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಎಲ್ಲಾ ಹವಾಮಾನಗಳಲ್ಲಿ ಮತ್ತು ಹಗಲು ಮತ್ತು ರಾತ್ರಿ ಹಾಗೂ ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲ್ಮೈಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿರುತ್ತದೆ.

EOS-09 ನಲ್ಲಿರುವ ರೇಡಾರ್‌ ಭೂಪ್ರದೇಶ, ಸಸ್ಯಗಳು ಮತ್ತು ಮಾನವ ನಿರ್ಮಿತ ಡೇರೆಗಳನ್ನು ವರ್ಗೀಕರಣ ಮಾಡಿ ಫಲಿತಾಂಶ ನೀಡುವ ಗುರಿ ಹೊಂದಿತ್ತು. ಗಡಿಯಲ್ಲಿ ಯಾವುದೇ ಸಮಯದಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆದರೂ ಸಂಪೂರ್ಣ ಚಿತ್ರಗಳು ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದಿತ್ತು. 10 ರಿಂದ 225 ಕಿಮೀ ವರೆಗಿನ ವಿಶಾಲವಾದ ಜಾಗ ಗಳ ಸ್ಕ್ಯಾನ್ ಹಾಗೂ ಪ್ರವಾಹ, ಚಂಡಮಾರುತಗಳು, ಭೂಕುಸಿತ ನಡೆದಾಗ ಅದರ ನೈಜ ಚಿತ್ರಣವನ್ನು ವೀಕ್ಷಿಸಬಹು ದಾಗಿತ್ತು. ಅಕ್ರಮ ಸಮುದ್ರ ಚಟುವಟಿಕೆ, ತೈಲ ಸೋರಿಕೆಗಳ ಪತ್ತೆ, ಭಾರತದ 7,500 ಕಿಮೀ ಉದ್ದದ ಕರಾವಳಿಯಲ್ಲಿ ಹಡಗುಗಳನ್ನು ಪತ್ತೆ ಹಚ್ಚುವ ಪ್ರಮುಖ ಕಾರ್ಯನಿರ್ವಹಿಸುವ ಸಾಮರ್ಥ್ಯವಿತ್ತು.

Related Posts

Leave a Reply

Your email address will not be published. Required fields are marked *