ಇಸ್ರೇಲ್ ರಕ್ಷಣಾ ಪಡೆಗಳು ಏಕಾಏಕಿ ವಾಯುದಾಳಿ ಮೂಲಕ ಸಿರಿಯಾ ಮೇಲೆ ಬಾಂಬ್ ಗಳ ಸುರಿಮಳೆ ಸುರಿಸಿದೆ. ಇದರಿಂದ ಎರಡೂ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸಿರಿಯಾದ ಡಮಸ್ಕೊಸ್ ನಲ್ಲಿರುವ ಸಿರಿಯಾದ ಸೇನಾ ಮೂಲಸೌಕರ್ಯಗಳ ಮೇಲೆ ಇಸ್ರೇಲ್ ಬುಧವಾರ ದಿಢೀರನೆ ದಾಳಿ ನಡೆಸಿದೆ. ಅದರಲ್ಲೂ ಸಿರಿಯಾದ ಅಧ್ಯಕ್ಷರ ನಿವಾಸದ ಬಳಿ ಹಲವು ಬಾಂಬ್ ಗಳು ಸ್ಫೋಟಗೊಂಡಿದ್ದು ಅಪಾರ ಹಾನಿ ಸಂಭವಿಸಿದೆ ಎಂದು ಹೇಳಲಾಗಿದೆ.
ಸಿರಿಯಾದ ಮುಖ್ಯ ಕಚೇರಿ ಮೇಲೆ ಕೇಂದ್ರೀಕರಿಸಿ ಇಸ್ರೇಲ್ ದಾಳಿ ನಡೆಸಿದೆ. ಅದರಲ್ಲೂ ಅಧ್ಯಕ್ಷರ ನಿವಾಸದ ಬಳಿ ಇಸ್ರೇಲ್ ಭಾರೀ ಪ್ರಮಾಣದಲ್ಲಿ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ಧ್ವಂಸಗೊಂಡಿವೆ.
ಇಸ್ರೇಲ್ ನಡೆಸಿದ ಭಾರೀ ದಾಳಿಯ ಬಗ್ಗೆ ಸಿರಿಯಾ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸಿರಿಯಾ ಮೇಲೆ ಇಸ್ರೇಲ್ ಅಕ್ರಮ ಹಾಗೂ ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದೆ ಎಂದು ಆರೋಪಿಸಿತ್ತು.