ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಇಸ್ರೇಲ್‌ನಾದ್ಯಂತ ‘ವಿಶೇಷ ಮತ್ತು ಶಾಶ್ವತ ತುರ್ತು ಪರಿಸ್ಥಿತಿ’ಯನ್ನು ಘೋಷಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ತಿಳಿಸಿದ್ದಾರೆ.
ಇಸ್ರೇಲ್ ದಾಳಿಯನಂತರ ಇರಾನ್ ಕಡೆಯಿಂದ ಡ್ರೋನ್‌ಗಳು ಹಾಗೂ ಖಂಡಾಂತರ ಕ್ಷಿಪಣಿಗಳ ಮೂಲಕ ಪ್ರತಿದಾಳಿ ನಡೆಯುವ ಸಾಧ್ಯತೆ ಹೆಚ್ಚಿರುವ ಹಿನ್ನೆಯಲ್ಲಿ ನಾಗರಿಕರ ರಕ್ಷಣೆಗಾಗಿ ಇಸ್ರೇಲ್ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದೆ.
ದಾಳಿಯ ಪರಿಣಾಮವಾಗಿ ಇರಾನ್ ರಾಜಧಾನಿ ಟೆಹ್ರಾನ್‌ನ ಮಧ್ಯಭಾಗದಲ್ಲಿ ಮೂರು ಪ್ರಬಲ ಸ್ಫೋಟಗಳ ಸದ್ದು ಕೇಳಿಬಂದಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇರಾನ್ ರಾಜಧಾನಿ ಪ್ರದೇಶಕ್ಕೆ ಹಲವು ಕ್ಷಿಪಣಿಗಳು ಅಪ್ಪಳಿಸಿರುವ ವರದಿಗಳು ಲಭ್ಯವಾಗಿರುವುದಾಗಿ ಹೇಳಿವೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಮಧ್ಯೆ ದಾಳಿ, ಪ್ರತಿದಾಳಿ
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಯುದ್ಧ ಪರಿಸ್ಥಿತಿ ಉದ್ಭವಿಸಿದೆ. ಅಫ್ಘಾನಿಸ್ತಾನವು ಶುಕ್ರವಾರ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದ್ದು, 55 ಪಾಕ್ ಸೈನಿಕರು ಮೃತಪಟ್ಟಿದ್ದಾರೆ.
ಪಾಕಿಸ್ತಾನ ಕೂಡ ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದೆ. ಅಫ್ಘಾನ್ ಸೈನಿಕರ ದಾಳಿಯ ನಂತರ, ಕಾಬೂಲ್, ಕಂದಹಾರ್ ಮತ್ತು ಪಕ್ತಿಯಾದಲ್ಲಿನ ತಾಲಿಬಾನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾಗಿ ಪಾಕಿಸ್ತಾನ ಹೇಳಿಕೊಂಡಿದೆ.
ಪಾಕಿಸ್ತಾನವು ಅಫ್ಘಾನ್ ತಾಲಿಬಾನ್ ಆಡಳಿತದ ವಿರುದ್ಧ ಆಪರೇಷನ್ ಗಜಬ್ ಲಿಲ್ ಹಕ್ ಪ್ರಾರಂಭಿಸಿದೆ. ವಾಯುದಾಳಿ ಮೂಲಕ ಅಫ್ಘಾನಿಸ್ತಾನದಲ್ಲಿ 130ಕ್ಕೂ ಹೆಚ್ಚು ಜನ ಹತರಾಗಿದ್ದಾರೆಂದು ಪಾಕಿಸ್ತಾನ ತಿಳಿಸಿದೆ.


