ಕದನ ವಿರಾಮದ ನಂತರ ಗಾಜಾ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಿದ ಇಸ್ರೇಲ್ ಸೇನೆ 330ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ.
ಎನವರಿ 19ರಿಂದ ಎರಡೂ ದೇಶಗಳ ನಡುವೆ ಕದನ ವಿರಾಮ ಘೋಷಣೆ ಆಗಿತ್ತು. ಇದಾದ ನಂತರ ಇದೇ ಮೊದಲ ಬಾರಿಗೆ ಇಸ್ರೇಲ್ ಭಾರೀ ಪ್ರಮಾಣದ ದಾಳಿ ನಡೆಸಿದ್ದಾರೆ.
ರಂಜಾನ್ ವೇಳೆ ಇಸ್ರೇಲ್ ಏಕಾಏಕಿ ನಡೆಸಿದ ವಾಯು ದಾಳಿಯಲ್ಲಿ ಮೃತಪಟ್ಟ ಬಹುತೇಕ ಮಂದಿ ಮಕ್ಕಳು, ವೃದ್ಧರು ಮತ್ತು ಮಹಿಳೆಯರಾಗಿದ್ದಾರೆ. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಆರೋಪಿಸಿದೆ.
ಉತ್ತರ ಗಾಜಾ, ಗಾಜಾ ನಗರ, ಡೇರ್-ಅಲ್- ಬಲಾಹ್, ಖಾನ ಯೂನಿಸ್, ರಫಾಹ್ ಪ್ರದೇಶಗಳಲ್ಲಿ ವಾಯುದಾಳಿ ನಡೆದಿದ್ದು, ಭಾರೀ ಪ್ರಮಾಣದ ಶಬ್ಧಗಳು ಕೇಳಿ ಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ.
ಇಸ್ರೇಲ್ ದಾಳಿಯಲ್ಲಿ ಹಮಾಸ್ ಪೊಲೀಸ್ ಮತ್ತು ಆಂತರಿಕ ಭದ್ರತಾ ಮುಖ್ಯಸ್ಥ ಮಹಮ್ಮದ್ ಅಬು ಮೃತಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.