ಬೆಂಗಳೂರು, ಆ. 20: ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮ ನಿಯಮಿತ (ಕೆ.ಎಸ್.ಎಫ್. ಐ.ಸಿ.)ದ ಇ-ಕಾಮರ್ಸ್ ಅಂತರ್ಜಾಲ ತಾಣಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಚಾಲನೆ ನೀಡಿದರು.
ನಂತರ ಅವರು, ಕಂಪನಿಗಳ ಕಾಯಿದೆ ಅಡಿ 1973ರಲ್ಲಿ ಸ್ಥಾಪನೆಯಾದ ಕೆಎಸ್ಎಫ್ಐಸಿ ಗುಣಮಟ್ಟದ ಪೀಠೋಪಕರಣ, ಬಾಗಿಲು, ಬಾಗಿಲವಾಡ, ಕಟಕಿ ಇತ್ಯಾದಿಗಳನ್ನು ಸಿದ್ಧಪಡಿಸಿ ಸರ್ಕಾರಿ ಕಟ್ಟಡ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುವ ನಿಗಮ ಈಗ ಇಂದಿನ ಯುಗಮಾನದ ಅಗತ್ಯಕ್ಕೆ ಅನುಗುಣವಾಗಿ ಇ-ಕಾಮರ್ಸ್ ಅಂತರ್ಜಾಲ ತಾಣ ಸಿದ್ಧಪಡಿಸಿದ್ದು, ಇದನ್ನು ನಿಗಮದ ಅಧ್ಯಕ್ಷ ಹಾಗೂ ಶಾಸಕ ಗೋಪಾಲಕೃಷ್ಣ ಬೇಲೂರು ಅವರ ಸಮ್ಮುಖದಲ್ಲಿ ಉದ್ಘಾಟಿಸಲು ಹರ್ಷಿಸುತ್ತೇನೆ ಎಂದರು.
ಸರ್ಕಾರಿ ಶಾಲೆಗಳಿಗೆ ಮೇಜು, ಕುರ್ಚಿ, ಬೆಂಚು ಮತ್ತು ಡೆಸ್ಕ್ ಗಳನ್ನು ಪೂರೈಕೆ ಮಾಡುವ ಕೆ.ಎಸ್.ಎಫ್.ಐ.ಸಿ. ಈಗ https://www.ksficfurniture.com/ ಡಿಜಿಟಲ್ ವಹಿವಾಟಿನ ವಿಸ್ತರಣೆಯೊಂದಿಗೆ ಇನ್ನೂ ಹೆಚ್ಚು ಜನರನ್ನು ತಲುಪಲಿದೆ ಎಂದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಎಸ್. ವೆಂಕಟೇಶನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಉಪಸ್ಥಿತರಿದ್ದರು