ಈ ಹೊಸ ಗ್ರಹ ಸುತ್ತುತ್ತಿರುವ ಸೂರ್ಯ ಅಷ್ಟು ಪ್ರಕಾಶಮಾನವಾಗಿಲ್ಲ. ಅದು ಸೌರಮಂಡಲದ ಸೂರ್ಯನಿಗಿಂತ ಚಿಕ್ಕದು ಮತ್ತು ಕಡಿಮೆ ಪ್ರಕಾಶಮಾನ ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಗ್ರಹ ಸುತ್ತುತ್ತಿರುವ ನಕ್ಷತ್ರದ ಸುತ್ತ ಇನ್ನೊಂದು ಗ್ರಹ ಸುತ್ತುತ್ತಿರುವುದು ಸಹ ಪತ್ತೆಯಾಗಿದೆ. ಈಗಾಗಲೇ ವಿಜ್ಞಾನಿಗಳು ಮಂಗಳ ಗ್ರಹ ಮತ್ತು ಮಂಜಿನಿಂದ ಆವೃತವಾಗಿರುವ ಗ್ರಹಗಳಲ್ಲಿ ಜೀವಿಗಳ ಕುರುಹುಗಳನ್ನು ಹುಡುಕುತ್ತಿದ್ದು ಈ ಮಧ್ಯೆ ಈ ಹೊಸ ಗ್ರಹ ಪತ್ತೆಯಾಗಿ ರುವುದು ವಿಜ್ಞಾನಿಗಳ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಇಷ್ಟು ವರ್ಷಗಳ ಕಾಲ ನಾವು ಜೀವಿಗಳು ಇರುವ ಏಕೈಕ ಗ್ರಹವೆಂದರೆ ಭೂಮಿ ಎಂದು ಮಾತ್ರ ಓದುತ್ತಿದ್ದೆವು ಹಾಗೂ ನಂಬಿದ್ದೆವು. ಆದರೆ ವಿಜ್ಞಾನಿಗಳು ನಮ್ಮ ಸೌರಮಂಡಲದಲ್ಲಿಯೇ ಇರುವಂತಹ ಮಂಗಳ ಗ್ರಹದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚೆಚ್ಚು ಸಂಶೋಧನೆಗಳನ್ನು ಮಾಡತೊಡದಿದ್ದರು. ಅಲ್ಲಿ ಜೀವಿಗಳ ಅಸ್ತಿತ್ವ ಇದೆಯೇ? ಅಲ್ಲಿ ಮನುಷ್ಯ ವಾಸಿಸಲು ಸಾಧ್ಯವಾಗುತ್ತದೆಯೇ -ಇತ್ಯಾದಿ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಜಗತ್ತಿನ ವಿಜ್ಞಾನಿಗಳು ಇಂದಿಗೂ ಆಸೆಗಣ್ಣಿನಿಂದ ಆ ಗ್ರಹದ ಬಗ್ಗೆ ಸಂಶೋಧನೆ ಮುಂದುವರೆಸಿದ್ದಾರೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಭೂಮಿಯನ್ನು ಹೊರತುಪಡಿಸಿ ಬೇರೆ ಎಲ್ಲಾದರೂ ಜೀವಿಗಳಿವೆಯೇ ಎಂಬ ಸಂಶೋಧನೆಗೆ ಆರಂಭಿಕ ಯಶಸ್ಸು ಲಭಿಸಿದೆ. ಸೌರಮಂಡಲದಾಚೆಗೆ ಜೀವಿಗಳಿರುವುದು ನಿಜ ಎಂಬುದನ್ನು ಇಂಗ್ಲೆಂಡ್‌ನ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ನ ಭಾರತೀಯ ಮೂಲದ ವಿಜ್ಞಾನಿ ಖಗೋಳಶಾಸ್ತ್ರಜ್ಞ ಡಾ|| ನಿಕ್ಕು ಮಧುಸೂದನ್ ನೇತೃತ್ವದ ವಿಜ್ಞಾನಿಗಳ ತಂಡ ಈ ಸಂಶೋಧನೆ ಮಾಡಿದೆ ‘ಕೆ-೨ ೧೮-ಬಿ’ ಎಂಬ ಗ್ರಹವನ್ನು ಪತ್ತೆ ಮಾಡಿದ್ದಾರೆ. ಇದನ್ನು ಜೇಮ್ಸ್ ವೆಬ್ ಟೆಲಿಸ್ಕೋಪ್ ಸಹಾಯದಿಂದ ಗುರುತಿಸಿದ್ದಾರೆ. ಇದರ ಸೂಚನೆಗಳನ್ನು ನೋಡುತ್ತಿದ್ದರೆ ಇಲ್ಲಿ ಜೀವಿಗಳಿರಬಹುದು ಇದಕ್ಕೆ ಬಲವಾದ ಸಾಕ್ಷಿಗಳು ಲಭಿಸಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ಗ್ರಹದಲ್ಲಿ ಡೈ ಮೀಥೈಲ್ ಸಲ್ಫೈಡ್ (ಡಿ. ಎಮ್.ಎಲ್.ಎಸ್ ) ಮತ್ತು ಡೈ ಮೀಥೈಲ್ ಡೈ ಸಲ್ಫೈಡ್ (ಡಿ. ಎಮ್.ಡಿ.ಎಸ್) ಅನಿಲಗಳಿರುವುದು ಪತ್ತೆಯಾಗಿದೆ. ಇದರ ಜೊತೆಗೆ ಕಾರ್ಬನ್ ಡೈಆಕ್ಸೈಡ್, ಮೀಥೇನ್ ಮತ್ತು ಇವುಗಳ ಜೊತೆಗೆ ಇದೇ ಮೊದಲ ಬಾರಿಗೆ ಕಾರ್ಬನ್ ಬೇಸ್ಡ್ ಮಾಲಿಕ್ಯೂಲ್ ಗಳನ್ನು ಪತ್ತೆ ಮಾಡಿ ದ್ದಾರೆ. ಈ ಗ್ಯಾಸ್ ಭೂಮಿಯ ಮೇಲೆ ಜೀವಂತವಾಗಿರುವ ಜೀವಿಗಳಿಂದ ಸಾಗರದಲ್ಲಿನ ಫೈಟೋಪ್ಲಾಂಗ್ ಟನ್ ಗಳಿಂದ ಅಂದರೆ ಸಮುದ್ರದಲ್ಲಿನ ಸಸ್ಯದ ರೀತಿಯ ಜೀವಿಗಳಿಂದ ಉತ್ಪತ್ತಿಯಾಗುತ್ತದೆ. ಇಂತಹ ಗ್ಯಾಸ್ ಆ ಗ್ರಹದಲ್ಲಿ ಪತ್ತೆಯಾಗಿದೆ. ಹೀಗಾಗಿ ‘ಕೆ-೨ ೧೮-ಬಿ’ ಗ್ರಹದಲ್ಲಿ ಸೂಕ್ಷ್ಮಜೀವಿಗಳಾದರೂ ಇರಬಹುದು ಎಂಬ ವಿಚಾರವನ್ನು ಸಂಶೋಧಕರು ಹೇಳುತ್ತಿದ್ದಾರೆ. ಸದ್ಯ ಅಲ್ಲಿ ಯಾವ ರೀತಿಯ ಜೀವಿಗಳಿವೆ ಎಂದು ಹೇಳಲು ಸಾಧ್ಯವಾಗಿಲ್ಲ, ಆದರೆ ಒಂದಲ್ಲ ಒಂದು ರೀತಿ ಜೀವಿಗಳಿ ರುವುದು ನಿಜ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಸಂಶೋಧನೆ ನಿಜವಾದಲ್ಲಿ ಶತಮಾನಗಳಿಂದ ಆಗುತ್ತಿರುವ ಪ್ರಯತ್ನಗಳಿಗೆ ಟರ್ನಿಂಗ್ ಪಾಯಿಂಟ್ ಆಗುತ್ತದೆ. ಜೀವಿಗಳಿರುವ ಏಕೈಕ ಗ್ರಹ ಭೂಮಿಯೆಂಬ ಖ್ಯಾತಿಯೂ ಸಹ ಅಳಿಸಿ ಹೋಗುತ್ತದೆ.
ಈ ಹಿಂದೆಯೂ ಸಹ ಇಂತಹ ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ೧೯೦೦ ರಿಂದ ಇಲ್ಲಿಯವರೆಗೆ ನಮ್ಮ ಸೌರಮಂಡಲದ ಹೊರಗೆ ೫೮೦೦ ಗ್ರಹಗಳನ್ನು ಗುರುತಿಸಲಾಗಿದೆ. ಆದರೆ ಇಷ್ಟು ಪೂರಕವಾದ ಸಾಕ್ಷ್ಯಗಳು ಇದುವರೆಗೂ ಸಿಕ್ಕಿರಲಿಲ್ಲ. ಈ ಗ್ರಹ ನಮ್ಮ ಭೂಮಿಗಿಂತ ೨.೬ ಪಟ್ಟು ದೊಡ್ಡದಾಗಿದೆ. ಭೂಮಿಯಿಂದ ೧೨೪ ಜ್ಯೋತಿರ್‌ವರ್ಷಗಳಷ್ಟು ದೂರದಲ್ಲಿದೆ. ೧ ಜ್ಯೋತಿರ್ ವರ್ಷ ಎಂದರೆ ೯.೪ ಟ್ರಿಲಿಯನ್ ಕಿಲೋಮೀಟರ್. ಈ ಗ್ರಹ ಕೆಂಪುಕುಬ್ಜ ನಕ್ಷತ್ರವೊಂದರ ಸುತ್ತಾ ಹ್ಯಾಬಿಟಬಲ್ ಜೋನ್‌ನಲ್ಲಿ ಸುತ್ತುತ್ತಿದೆ. ಈ ಹ್ಯಾಬಿಟಬಲ್ ಜೋನ್ ಎಂದರೆ ಒಂದು ನಕ್ಷತ್ರದ ಸುತ್ತ ಜೀವಿಗಳು ವಾಸಿಸುವ ವಾಸಯೋಗ್ಯ ವಲಯ. ಈ ಹೊಸ ಗ್ರಹ ಸುತ್ತುತ್ತಿರುವ ಸೂರ್ಯ ಅಷ್ಟು ಪ್ರಕಾಶಮಾನವಾಗಿಲ್ಲ. ಅದು ಸೌರಮಂಡಲದ ಸೂರ್ಯನಿಗಿಂತ ಚಿಕ್ಕದು ಮತ್ತು ಕಡಿಮೆ ಪ್ರಕಾಶಮಾನ ಹೊಂದಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಗ್ರಹ ಸುತ್ತುತ್ತಿರುವ ನಕ್ಷತ್ರದ ಸುತ್ತ ಇನ್ನೊಂದು ಗ್ರಹ ಸುತ್ತುತ್ತಿರುವುದು ಸಹ ಪತ್ತೆಯಾಗಿದೆ. ಈಗಾಗಲೇ ವಿಜ್ಞಾನಿಗಳು ಮಂಗಳ ಗ್ರಹ ಮತ್ತು ಮಂಜಿನಿಂದ ಆವೃತವಾಗಿರುವ ಗ್ರಹಗಳಲ್ಲಿ ಜೀವಿಗಳ ಕುರುಹುಗಳನ್ನು ಹುಡುಕುತ್ತಿದ್ದು ಈ ಮಧ್ಯೆ ಈ ಹೊಸ ಗ್ರಹ ಪತ್ತೆಯಾಗಿರುವುದು ವಿಜ್ಞಾನಿಗಳ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಗ್ರಹವನ್ನು ಪತ್ತೆ ಮಾಡಿದ ಡಾ|| ನಿಕ್ಕು ಮಧುಸೂದನ್ ವಾರಣಾಸಿಯ ಐಐಟಿಯಲ್ಲಿ ಪದವಿ ಮುಗಿಸಿದ್ದಾರೆ. ಸದ್ಯ ಇಂಗ್ಲೆಂಡ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಆಸ್ಟ್ರೋಫಿಸಿಕ್ಸ್ ನ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎಕ್ಸೋಪ್ಲಾನೆಟ್ ಸಿಸ್ಟಮ್ ಕುರಿತು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ. ಇನ್ನು ಈ ಗ್ರಹ ಗುರುತಿಸಿರುವ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ೨೦೨೧ರ ಡಿಸೆಂಬರ್ ೨೫ರಂದು ನಾಸಾ ಬಿಡುಗಡೆಗೊಳಿಸಿತ್ತು. ಇದುವರೆಗೆ ಈ ಟೆಲಿಸ್ಕೋಪ್ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ.
ಇದಕ್ಕೂ ಮುನ್ನ ಕೆಲವು ವರ್ಷಗಳ ಹಿಂದೆ ನಾಸಾದ ಖಗೋಳಶಾಸ್ತ್ರಜ್ಞರು ಭೂಮಿಯನ್ನು ಹೋಲುವ ಏಳು ವಾಸ ಯೋಗ್ಯ ಗ್ರಹಗಳನ್ನು ಪತ್ತೆ ಮಾಡಿದ್ದರು. ಭೂಮಿಯಿಂದ ೪೦ ಜ್ಯೋತಿರ್‌ವರ್ಷಗಳಷ್ಟು (೨೩೫ ಲಕ್ಷ ಕೋಟಿ ಮೈಲಿ ) ದೂರದಲ್ಲಿರುವ ಮತ್ತೊಂದು ಸೌರಮಂಡಲದಲ್ಲಿ ಏಳು ಗ್ರಹಗಳನ್ನು ಪತ್ತೆ ಮಾಡಿದ್ದರು. ಟ್ರೇಪಿಸ್ಟ್ -೧ ಎಂಬ ದೂರದರ್ಶಕ ಯಂತ್ರದ ಮೂಲಕ ಈ ಸಂಶೋಧನೆ ನಡೆದಿರುವುದರಿಂದ ಈ ಗ್ರಹಗಳ ಸೂರ್ಯನಿಗೆ ಟ್ರೇಪಿಸ್ಟ್ -೧ ಎಂಬ ಹೆಸರಿಡಲಾಗಿದೆ.