ಮೇಕೆದಾಟು ಯೋಜನೆಯ ಮರು ಅಧ್ಯಯನಕ್ಕೆ ಕೇಂದ್ರ ಜಲ ಆಯೋಗವು ಈಗ ರಾಜ್ಯಕ್ಕೆ ಆದೇಶ ನೀಡಿದೆ. ಕೇಂದ್ರ ಜಲ ಆಯೋಗದಿಂದ ಇಂತಹ ಆದೇಶ ಅಗತ್ಯವಿರಲಿಲ್ಲ. ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲ ಅನುಮಾನಗಳನ್ನು ನಿವಾರಿಸಿದೆ ಮತ್ತು ಸಮಜಾಯಿಷಿ ಮತ್ತು ವಿವರಗಳನ್ನೂ ಸಲ್ಲಿಸಿದೆ.
ಮರಗಳನ್ನು ಕಡಿಯದೆ ಯಾವ ಯೋಜನೆಯನ್ನೂ ಸರ್ಕಾರಗಳು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯ ಕೇಂದ್ರಕ್ಕೆ ಗೊತ್ತಿಲ್ಲವೇ ? ಇಂತಹ ಯೋಜನೆಗಳೇನಾದರೂ ಗುಜರಾತ್ ಅಥವಾ ಉತ್ತರಪ್ರದೇಶದಲ್ಲಿ ಇದ್ದಿದ್ದರೆ, ಕೇಂದ್ರ ಸರ್ಕಾರವೇ ತುಂಬು ಹುರುಪು ಮತ್ತು ಉತ್ಸಾಹದಿಂದ ಮುಂದಾಗಿ ಯೋಜನೆಯ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಲು ಹಿಂದೆ ಬೀಳುತ್ತಿರಲಿಲ್ಲ.
ಮೇಕೆದಾಟು ಯೋಜನೆಗೆ ಇನ್ನೂ ಕಾಲ ಕೂಡಿ ಬಂದಿಲ್ಲ, ಬೆಂಗಳೂರು ಮತ್ತು ಗ್ರಾಮಾಂತರ ಸೇರಿದಂತೆ ಮೂರು ಜಿಲ್ಲೆಗಳಿಗೆ ಕುಡಿಯುವ ನೀರಿನ ಆಸರೆಯಾಗಿರುವ ಯೋಜನೆಗೆ ಮತ್ತೆ ಮತ್ತೆ ತೊಡಕು.
ಮೇಕೆದಾಟು ಯೋಜನೆಯ ಮರು ಅಧ್ಯಯನಕ್ಕೆ ಕೇಂದ್ರ ಜಲ ಆಯೋಗವು ಈಗ ರಾಜ್ಯಕ್ಕೆ ಆದೇಶ ನೀಡಿದೆ. ಕೇಂದ್ರ ಜಲ ಆಯೋಗದಿಂದ ಇಂತಹ ಆದೇಶ ಅಗತ್ಯವಿರಲಿಲ್ಲ. ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಎಲ್ಲ ಅನುಮಾನಗಳನ್ನು ನಿವಾರಿಸಿದೆ ಮತ್ತು ಸಮಜಾಯಿಷಿ ಮತ್ತು ವಿವರಗಳನ್ನೂ ಸಲ್ಲಿಸಿದೆ. ಅಲ್ಲದೆ ಯೋಜನೆಯಿಂದ ಕರ್ನಾಟಕವಲ್ಲದೆ, ತಮಿಳುನಾಡಿಗೂ ಅನುಕೂಲವಾಗುವ ಅಂಶಗಳನ್ನು ಕೇಂದ್ರಕ್ಕೆ ವಿವರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ , ಜಲಸಂಪನ್ಮೂಲ ಮಂತ್ರಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಖುದ್ದಾಗಿ ಕೇಂದ್ರ ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ಇಷ್ಟಾದರೂ ಕೇಂದ್ರಕ್ಕೆ ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅನುಮತಿಯನ್ನು ಏಕೆ ನೀಡುತ್ತಿಲ್ಲ. ತಮಿಳುನಾಡು ವಿಧಾನಸಭೆ ಚುನಾವಣೆಗಳ ಸಮಯದಲ್ಲಿ ಕೇಂದ್ರ ಜಲ ಅಯೋಗವು ಮೇಕೆದಾಟು ಯೋಜನೆಯ ಮರು ಅಧ್ಯಯನಕ್ಕೆ ಆದೇಶಿಸುವುದೆಂದರೆ ಇದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂಬುದು ಸ್ಪಷ್ಟ.
ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯೀಗ ಯೋಜನೆಯ ವ್ಯಾಪ್ತಿಗೊಳಪಡುವ ಪ್ರ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ದೊಡ್ಡ ಹಾನಿಯಿದೆ ಎಂದು ಆಕ್ಷೇಪಿಸಿದೆ. ಜಲ ಆಯೋಗವು ಇಡೀ ಯೋಜನೆಯ ಮರು ಅಧ್ಯಯನಕ್ಕೆ ಆದೇಶಿಸಲು ಇದುವೇ ಮೂಲ ಕಾರಣ.
ಮರಗಳನ್ನು ಕಡಿಯದೆ ಯಾವ ಯೋಜನೆಯನ್ನೂ ಸರ್ಕಾರಗಳು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಈ ವಿಷಯ ಕೇಂದ್ರಕ್ಕೆ ಗೊತ್ತಿಲ್ಲವೇ , ಇಂತಹ ಯೋಜನೆಗಳೇನಾದರೂ ಗುಜರಾತ್ ಅಥವಾ ಉತ್ತರಪ್ರದೇಶದಲ್ಲಿ ಇದ್ದಿದ್ದರೆ, ಕೇಂದ್ರ ಸರ್ಕಾರವೇ ತುಂಬು ಹುರುಪು ಮತ್ತು ಉತ್ಸಾಹದಿಂದ ಮುಂದಾಗಿ ಯೋಜನೆಯ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಲು ಹಿಂದೆ ಬೀಳುತ್ತಿರಲಿಲ್ಲ. ವಿಪರ್ಯಾಸ ಎಂದರೆ ಪಶ್ಚಿಮ ಘಟ್ಟಗಳ ಜೈವಿಕ ಸಂಕುಲ ಮತ್ತು ಪರಿಸರಕ್ಕೆ ಆಗುಂಬೆ ಸುರಂಗ ಮಾರ್ಗದಿಂದ ಹಾನಿ ಇದೆ ಎಂಬುದು ಕೇಂದ್ರಕ್ಕೆ ಗೊತ್ತಿದ್ದರೂ ಈ ಯೋಜನೆಗೆ ಹಸಿರು ನಿಶಾನೆ ದೊರೆತಿದೆ.
ಇದು ಕೇಂದ್ರದ ನಿಶ್ಚಿತ ತಾರತಮ್ಯ ನೀತಿಗೆ ಹಿಡಿದ ಕನ್ನಡಿ. ಮೇಕೆದಾಟು ಯೋಜನೆಗೆ ಏನಾದರೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಲನೆ ದೊರೆತರೆ ಇದರ ಸಂಪೂರ್ಣ ಹೆಸರು ಈ ಸರ್ಕಾರದ್ದಾಗುತ್ತೆ. ಶತಾಯ, ಗತಾಯ ಇದಕ್ಕೆ ಅನುಮತಿ ನೀಡಬಾರದು ಎಂಬ ಭಾವನೆ ಇದ್ದರೆ ಇನ್ನು ಕೇಂದ್ರ ಮತ್ತು ರಾಜ್ಯಗಳ ನಡುವೆ ಸೌಹಾರ್ದತೆ ಹೇಗೆ ಮೂಡಲು ಸಾಧ್ಯ? ಸಂವಿಧಾನದ ಆಶಯಗಳ ಮೇಲೆ ಕೇವಲ ಬೊಗಳೆ ಹೇಳುವ ಕೇಂದ್ರ ಹಿಡನ್ ಅಜೆಂಡಾ ಮೂಲಕ ಮೇಕೆದಾಟು ಯೋಜನೆಗೆ ಹಲವು ಹತ್ತು ಅಡ್ಡಿಗಳನ್ನು ಸೃಷ್ಟಿಸಲು ಯತ್ನಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮರು ಅಧ್ಯಯನದ ಹಿಂದಿರುವ ಉದ್ದೇಶ ಪರಿಸರವನ್ನು ಸಂರಕ್ಷಿಸುವ ಕಾಳಜಿಯಂತೂ ಅಲ್ಲವೇ ಅಲ್ಲ. ಯೋಜನೆಯ ರಾಜಕೀಯ ಲಾಭ ನಷ್ಟಗಳ ಲೆಕ್ಕಚಾರವಿದೆ ಎಂಬುದೂ ನಿಸ್ಸಂದೇಹ.


